ಮೂರುಕಾವೇರಿ ಮಹಮ್ಮಾಯಿ ದೇವಳದಲ್ಲಿ ಕಳ್ಳತನ

ಕಿನ್ನಿಗೋಳಿ : ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಳಕ್ಕೆ ಬುಧವಾರ ತಡ ರಾತ್ರಿಯಲ್ಲಿ ಕಳ್ಳರು ನುಗ್ಗಿ ಮೂರು ಗಂಟೆ ಮತ್ತು ದೀಪಗಳನ್ನು ಕಳವು ಮಾಡಿದ್ದಾರೆ. ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಈ ದೇವಳದ ಕಂಪೌಡ್ ನಲ್ಲಿರುವ ಕಾಣಿಕೆ ಡಬ್ಬಿಯ ಹೊರಗಿನ ಬೀಗವನ್ನು ಒಡೆದು ಒಳಗಿನ ಬೀಗವನ್ನು ತೆರೆಯಲು ವ್ಯರ್ಥ ಪ್ರಯತ್ನ ನಡೆಸಿದ್ದಾರೆ. ದೇವಳದ ಮುಂಭಾಗದಲ್ಲಿನ ಮೂರು ಗಂಟೆಗಳು, ಒಂದು ಉರಿಯುತ್ತಿದ್ದ ದೀಪ ಮತ್ತು ಬದಿಯಲ್ಲಿರುವ ಕಲ್ಲುರ್ಟಿ ಪಂಜುರ್ಲಿ ಮತ್ತು ಚಾಮುಂಡೇಶ್ವರೀ ಗುಡಿಯ ಎದುರಿದ್ದ ದೀಪವನ್ನು ಕದ್ದು ಪರಾರಿಯಾಗಿದ್ದಾರೆ, ಮುಲ್ಕಿ ಠಾಣಾ ಪೋಲಿಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Kinnigoli-09041503

Comments

comments

Comments are closed.

Read previous post:
Kinnigoli-09041502
ಧಾರ್ಮಿಕ ಸ್ಥಳ: ಜ್ಞಾನ, ಸಂಸ್ಕೃತಿ, ಸಂಸ್ಕಾರ ಕೇಂದ್ರ

ಕಿನ್ನಿಗೋಳಿ : ಧಾರ್ಮಿಕ ಸ್ಥಳಗಳು ಸುಜ್ಞಾನ, ಸಂಸ್ಕೃತಿ, ಸಂಸ್ಕಾರದ ಕೇಂದ್ರಗಳಾಗಿ ಸಮಾಜದ ಒಳಿತಿಗಾಗಿ ಶ್ರಮಿಸುವ ತಾಣಗಳಾಗಬೇಕು ಎಂದು ಏಳಿಂಜೆ ಶ್ರೀಧರ ಭಟ್ ಹೇಳಿದರು. ಬುಧವಾರ ಪಟ್ಟೆ ಶ್ರೀ ಕೋರ್‍ದಬ್ಬು...

Close