ಪುನರೂರು : ಖಾಝೀ ಅಧಿಕಾರ ಸ್ವೀಕಾರ

ಕಿನ್ನಿಗೋಳಿ : ಪುನರೂರು ಮಹಮ್ಮದಿಯಾ ಜುಮ್ಮಾ ಮಸೀದಿ ಮತ್ತು ಮುಹ್‌ಯದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ೮ ನೇ ವರ್ಷದ ಸ್ವಲಾತ್ ವಾರ್ಷಿಕ, ಜಲಾಲಿಯ್ಯಾ ರಾತೀಬ್ ಹಾಗೂ ಖಾಝೀ ಅಕಾರ ಸ್ವೀಕಾರ ಸಮಾರಂಭ ಸೋಮವಾರ ಪುನರೂರು ಮಸೀದಿಯ ವಠಾರದಲ್ಲಿ ನಡೆಯಿತು.
ಪುನರೂರು ಎಂ. ಜೆ. ಎಂ.ನ ಖತೀಬ ಹಸನ್ ಸಖಾಫಿ ದುವಾ ಪ್ರಾರ್ಥನೆ ನಡೆಸಿ ಕಾರ್ಯಕ್ರಮ ಉದ್ಘಾಟಿಸಿದರು. ಪುನರೂರು ಎಂ. ಜೆ. ಎಂನ ಗೌರವಾಧ್ಯಕ್ಷ ಪಿ. ಎಸ್. ಅಬ್ದುಲ್ ಹಮೀದ್ ಮಿಲನ್ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದ್ರೆ ಎಸ್. ಡಿ. ಎಮ್ ಅರಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಮುಫ್ತಿ ಬದ್ರುದ್ದೀನ್ ಅಹಮದ್ ಖಾದ್ರಿ ಶೈಕುಲ್ ಹದೀಸ್ ದಿಕ್ಸೂಚಿ ಭಾಷಣಗೈದರು.
ಅಬೂ ಸುಷ್ಯಾನ್ ಇಬ್ರಾಹಿಂ ಮದನಿ ಬೆಂಗಳೂರು, ಮಹಮ್ಮದ್ ಸಜ್ಜಾದ್ ಅಲಂ ನೂರಿ, ಎಸ್‌ಎಸ್‌ಎಫ್ ಉಡುಪಿಯ ಅಧ್ಯಕ್ಷ ಪಿಎಂಎ ಅಶ್ರಫ್ ರಝಾ ಅಂಜದಿ , ಕಿನ್ನಿಗೋಳಿಯ ಖತೀಬರಾದ ಅಬ್ದುಲ್ ಲತೀಫ್ ಸಖಾಫಿ, ಗುತ್ತಕಾಡು ಪಿ. ಏ. ಅಹ್ಮದ್ ಮದನಿ, ಪಕ್ಷಿಕೆರೆಯ ಅಬೂ ಸ್ವಾಲಿಹ್ ಝೈನಿ, ಎಸ್.ಕೋಡಿಯ ಇಮಾಮ ಸುಲೈಮಾನ್ ನೊರಿ ಅಮಾನಿ, ಅಧ್ಯಕ್ಷ ಟಿ. ಮಯ್ಯದ್ದಿ , ಯಂಗ್‌ಮೆನ್ಸ್ ಅಧ್ಯಕ್ಷ ರಫೀಕ್ ಪ್ಲವರ್ ಕಿನ್ನಿಗೋಳಿ, ಟಿ. ಎಚ್. ಮಯ್ಯದ್ದಿ , ಕೆ. ಎ. ಅಬ್ದುಲ್ಲಾ, ಇ. ಕೆ. ಅಬ್ದುಲ್ ಅಮೀದ್, ಇಬ್ರಾಹಿಂ ಪುನರೂರು, ಆಶ್ರಫ್ ಮತ್ತಿತರರು ಉಪಸ್ಥಿತರಿದ್ದರು. ರಿಝ್ವಾನ್ ಅಹ್ಮದ್ ಸ್ವಾಗತಿಸಿದರು. ಅಬ್ದುಲ್‌ರಹ್ಮಾನ್ ಮಾನ್ವರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-09041501

Comments

comments

Comments are closed.

Read previous post:
Mulki-09041505
ಬಪ್ಪನಾಡು ಹಗಲು ರಥೋತ್ಸವ

ಬಪ್ಪನಾಡು ಹಗಲು ರಥೋತ್ಸವ Bhagyavan Sanil

Close