ಶ್ರೀ ನವದುರ್ಗಾ ಯುವಕ ವೃಂದ ವಾರ್ಷಿಕೋತ್ಸವ

ಮೂಲ್ಕಿ: ಭಗವಂತನ ಆರಾಧನೆಯಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಲು ಸಾಧ್ಯವಿದ್ದು ಧರ್ಮ ಜಾಗೃತಿ ಮೂಡಿದಾಗ ಗ್ರಾಮದಲ್ಲಿ ಸುಭಿಕ್ಷೆಯಾಗಲು ಸಾಧ್ಯವೆಂದು ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಹೇಳಿದರು.
ಮೂಲ್ಕಿಯ ವಿಜಯ ಕಾಲೇಜು ರಸ್ತೆ ಯಲ್ಲಿರುವ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಾರ್ಮಿಕ ಉಪನ್ಯಾಸಗೈದು ಮಾತನಾಡಿದರು. ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ವಹಿಸಿದ್ದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಯುವಕ ವೃಂದದ ಅಧ್ಯಕ್ಷ ಸತೀಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-09041503

Comments

comments

Comments are closed.

Read previous post:
Mulki-09041502
ಬಪ್ಪನಾಡು ಶ್ರೀದೇವಿ ಪೇಟೆ ಸವಾರಿ ಉತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ರಥೋತ್ಸವ ಪ್ರಯುಕ್ತ ಸೋಮವಾರ ಮುಂಜಾನೆ ನಡೆದ ಪೇಟೆ ಸವಾರಿ ಉತ್ಸವದಲ್ಲಿ ಶ್ರೀದೇವಿಯು ಪಂಚಮಹಲ್ ಸದಾಶಿವ ದೇವಸ್ಥಾನಕ್ಕೆ ಭೇಟಿನೀಡಿದ ಸಂದರ್ಭ...

Close