ಮೌಲ್ಯಭರಿತ ಶಿಕ್ಷಣದಿಂದ ಸುಸಂಸ್ಕೃತ ಸಮಾಜ

ಕಿನ್ನಿಗೋಳಿ : ಶಿಸ್ತು ಸಂಸ್ಕಾರದ ಮೌಲ್ಯಭರಿತ ಶಿಕ್ಷಣ ಮಕ್ಕಳಿಗೆ ನೀಡಿದಾಗ ಸುಸಂಸ್ಕೃತ ಸಮಾಜ ಬೆಳೆಯುತ್ತದೆ. ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಶನಿವಾರ ಕೆರೆಕಾಡು ಸರಕಾರಿ ಶಾಲೆಯಲ್ಲಿ ಬೆಳ್ಳಾಯರು ಹಿಂದುಸ್ತಾನಿ ಯೂತ್ ಕ್ಲಬ್ ಆಶ್ರಯದಲ್ಲಿ ಸುಖಾನಂದ ಶೆಟ್ಟಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.
ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಳದ ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಮುಲ್ಕಿ ಉದ್ಯಮಿ ಸಂತೋಷ್ ಶೆಟ್ಟಿ , ಜಿ. ಪಂ. ಸದಸ್ಯ ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯ ವನಿತಾ ಉದಯ ಅಮೀನ್, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷೆ ಕೊಲ್ಲು , ಗ್ರಾ. ಪಂ. ಸದಸ್ಯರಾದ ನಾರಾಯಣ ಸುವರ್ಣ, ಸುರೇಖಾ, ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರಿ, ಕೆರೆಕಾಡು-ಬೆಳ್ಳಾಯರು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಶ್ರೀನಿವಾಸ ಆಚಾರ್ಯ , ಕ್ಲಬ್‌ನ ಗೌರವಾಧ್ಯಕ್ಷ ಸುಕೇಶ್ ರಾಜ್ ಸುವರ್ಣ, ಹರೀಶ್ ಡಿ. ಶೆಟ್ಟಿ , ಅರುಣ್ ಕೋಟ್ಯಾನ್, ಪ್ರಭಾಕರ ಕುಂದರ್, ಪ್ರೇಮನಾಥ್ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್ ಸ್ವಾಗತಿಸಿದರು. ನವೀನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-17041502

Comments

comments

Comments are closed.

Read previous post:
Kinnigoli-17041501
ಗುತ್ತಕಾಡು : ಬೀಳ್ಕೊಡುಗೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯ ಗೌರವ ಶಿಕ್ಷಕಿ ವಿನುತಾ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭ ಶಾಲಾ ಎಸ್‌ಡಿಎಂಸಿ...

Close