ಮಂದಾಡಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾ ಕೂಟ

ಮೂಲ್ಕಿ : ಭಾರತದಂತಹ ದೇಶದಲ್ಲಿ ಕ್ರೀಡೆಗೆ ಯಾವಾಗಲೂ ವಿಶೇಷ ಸ್ಥಾನಮಾನ ಇದೆ. ಕ್ರೀಡೆಯಿಂದ ಸಾಮರಸ್ಯ ಉಂಟಾಗುವುದರ ಜೊತೆಗೆ ಯುವ ಪ್ರತಿಭೆಗಳನ್ನು ಗುರುತಿಸಲು ಸಾದ್ಯ ಎಂದು ರಾಜ್ಯ ತುಳು ಸಾಹಿತ್ಯ ಎಕೆಡಮಿಯ ಮಾಜೀ ರಾಜ್ಯಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.

ಮಂದಾಡಿ ಫ್ರೆಂಡ್ಸ್ ಕ್ಲಬ್ ಮಂದಾಡಿ ಮೂಲ್ಕಿ ಇದರ ವತಿಯಿಂದ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಿಲ್ಪಾಡಿ ತಾ. ಪಂ. ಸದಸ್ಯೆ ವನಿತಾ ಅಮೀನ್ ವಹಿಸಿದ್ದರು.

ಕಿಲ್ಪಾಡಿ ಪಂಚಾಯತಿ ಸದಸ್ಯ ಜಯ ಕುಮಾರ್ ಮಟ್ಟು, ಮೂಲ್ಕಿ ವಿಜಯಾ ಸಹಕಾರಿ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ಅತಿಕಾರಿಬೆಟ್ಟು ಹಾಲು ಉತ್ಪಾದರಕರ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಮಂದಾಡಿ ಫ್ರೆಂಡ್ಸ್ ಕ್ಲಬ್ ಮಂದಾಡಿ ಗೌರವಾಧ್ಯಕ್ಷ ರತ್ನಾಕರ ಮಂದಾಡಿ ಹಾಗೂ ಪ್ರಭಾರ ಅಧ್ಯಕ್ಷ ಶ್ಯಾಮಾನಂದ ಮತ್ತಿತರರು ಉಪಸ್ಥಿತರಿದ್ದರು.

ಪ್ರಸಿದ್ದ ನಾಟಿ ವೈದ್ಯ ಯಜ್ಷ ಪಂಡಿತ್ ಮಟ್ಟು ಅವರನ್ನು ಸಮಾಜದಲ್ಲಿ ವಿಶಿಷ್ಟ ಸಾದನೆಗಾಗಿ ಸನ್ಮಾನಿಸಲಾಯಿತು. ಹಾಗೂ ವಿಕಲಾಂಗ ಚೇತನರಾದ ರಮೇಶ್ ಕೋಟ್ಯಾನ್ ಮಟ್ಟು ಹಾಗೂ ಜಗನ್ನಾಥ ಕಕ್ವ ಕ್ಲಬ್ ವತಿಯಿಂದ ಧನಸಹಾಯ ನೀಡಲಾಯಿತು. ಮಂದಾಡಿ ಫ್ರೆಂಡ್ಸ್‌ನ ಸದಸ್ಯ ಶಿವಾನಂದ ಸ್ವಾಗತಿಸಿದರು. ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Mulki-17041501

Comments

comments

Comments are closed.

Read previous post:
Kinnigoli-09041503
ಮೂರುಕಾವೇರಿ ಮಹಮ್ಮಾಯಿ ದೇವಳದಲ್ಲಿ ಕಳ್ಳತನ

ಕಿನ್ನಿಗೋಳಿ : ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಳಕ್ಕೆ ಬುಧವಾರ ತಡ ರಾತ್ರಿಯಲ್ಲಿ ಕಳ್ಳರು ನುಗ್ಗಿ ಮೂರು ಗಂಟೆ ಮತ್ತು ದೀಪಗಳನ್ನು ಕಳವು ಮಾಡಿದ್ದಾರೆ. ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಗೆ...

Close