ಎಪ್ರಿಲ್ 14-21: ಕಟೀಲು ಉತ್ಸವ

ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ.14ರಿಂದ 21ರವರೆಗೆ ವರ್ಷಾವಧಿ ಜಾತ್ರೆ ನಡೆಯಲಿದೆ. ತಾ.14ರಂದು ಧ್ವಜಾರೋಹಣ, ಸಂಜೆ ಹರಿಣಾಕ್ಷಿ ಕುಲಾಲ್‌ರಿಂದ ಭಕ್ತಿಸಂಗೀತ, ತಾ.15ರಂದು ಯುಗಾದಿ ದೀಪದ ಬಲಿ, ಸಂಜೆ ಬೆಂಗಳೂರಿನ ನಿರ್ಮಲ ನೃತ್ಯನಿಕೇತನದವರಿಂದ ಭರತನಾಟ್ಯ, ತಾ.16ರಂದು ಉತ್ಸವ ಬಲಿ, ಮೂಡುಸವಾರಿ, ಪ್ರಸಿದ್ಧಕಲಾವಿದರಿಂದ ತಾಳಮದ್ದಲೆ, ತಾ.17ಕ್ಕೆ ದೀಪದ ಬಲಿ ಉತ್ಸವ ಬಲಿ, ಸಂಜೆ ಬೆಂಜನಪದವು ಶ್ರೀ ದುರ್ಗಾ ನೃತ್ಯಾಂಜಲಿ ತಂಡದಿಂದ ಭರತನಾಟ್ಯ, ತಾ.18ಕ್ಕೆ ಬೆಳ್ಳಿ ರಥೋತ್ಸವ, ಅರುಣಾ ರಾವ್ ಕಟೀಲು ಬಳಗದವರಿಂದ ಭಕ್ತಿ ಸಂಗೀತ, ತಾ.19ಕ್ಕೆ ಪಡುಸವಾರಿ, ವಿದುಷಿ ಪ್ರಿಯಾಂಕ ಜೆ. ಬಳಗದವರಿಂದ ಭರತನಾಟ್ಯ, ತಾ.20ರಂದು ಬ್ರಹ್ಮರಥೋತ್ಸವ, ಶಯನ, ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ, ತಾ.21ರಂದು ಕವಾಟೋದ್ಘಾಟನೆ, ಅವಭೃತೋತ್ಸವ, ಚಂದನಪ್ರಿಯಾ ಕಟೀಲು ಬಳಗದವರಿಂದ ನಾಟ್ಯ ಮಂಜರಿ ನಡೆಯಲಿದೆ.

Kateel-1404201504

Comments

comments

Comments are closed.

Read previous post:
Kinnigoli-17041504
ಗೋಳಿಜೋರ ಶ್ರೀ ರಾಮಯುವಕ ವೃಂದ ವಾರ್ಷಿಕೋತ್ಸವ

ಕಿನ್ನಿಗೋಳಿ : ಶನಿವಾರ ಕಿನ್ನಿಗೋಳಿ ಗೋಳಿಜೋರ ಶ್ರೀ ರಾಮಯುವಕ ವೃಂದದ 29 ನೇ ವರ್ಷದ ವಾರ್ಷಿಕೋತ್ಸವ ನಡೆಯಿತು. ಈ ಸಂದರ್ಭ ನಿವೃತ್ತ ಸೇನಾನಿ ಫಿಲಿಫ್ ನೇರಿ ಡಿಮೆಲ್ಲೊ ಅವರನ್ನು ಸನ್ಮಾನಿಸಲಾಯಿತು....

Close