ಗುತ್ತಕಾಡು ಹಟ್ಟಿಗೆ ಬೆಂಕಿ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ನಿವಾಸಿ ಗಂಗು ಪೂಜಾರ್‍ತಿ ಅವರ ಮನೆಯ ಬದಿಯ ಹಟ್ಟಿಗೆ ಗುರುವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಹಟ್ಟಿಯು ಸಂಪೂರ್ಣ ಭಸ್ಮಗೊಂಡಿದೆ. ಹಟ್ಟಿಯಲ್ಲಿದ್ದ ದನವನ್ನು ಸ್ಥಳೀಯರು ರಕ್ಷಿಸಿದರು ಹಾಗೂ ಬಳಿಕ ಬಂದ ಅಗ್ನಿಶಾಮಕ ದಳದವರು ಮನೆಯ ಪಕ್ಕದ ಎರಡು ತೆಂಗಿನ ಮರಗಳಿಗೆ ತಗಲಿದ ಬೆಂಕಿಯನ್ನು ನಂದಿಸಿದರು. ಮಳೆಗಾಲಕ್ಕಾಗಿ ಹಟ್ಟಿಯಲ್ಲಿ ಶೇಖರಿಸಿಟ್ಟಿದ್ದ ಬೈಹುಲ್ಲು ಮತ್ತು ಕಟ್ಟಿಗೆ ಸಂಪೂರ್ಣ ಸುಟ್ಟು ಹೋಗಿದೆ.

Kinnigoli-17041505

Comments

comments

Comments are closed.

Read previous post:
Mulki-23041501
ಲೆಪ್ಟಿನೆಂಟ್ ಎಚ್.ಜಿ.ನಾಗರಾಜ ನಾಯಕ್ ಆಯ್ಕೆ

ಮೂಲ್ಕಿ: ಲಕ್ಷದ್ವೀಪದ ಕವರಟ್ಟಯಲ್ಲಿ ಎ. 19ರಿಂದ ಎ. 30ರ ವರೆಗೆ ನಡೆಯಲಿರುವ ಎನ್‌ಸಿಸಿಯ ವಿಶೇಷ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾವಹಿಸಲು ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಕಂಟಿಂಜೆಂಟ್...

Close