ಹಿಲ್ಡಾ ಮಿರಾಂಡ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ನಿವಾಸಿ ನಿವೃತ್ತ ಪ್ರಿನ್ಸಿಪಾಲ್ ಹಿಲ್ಡಾ ಮಿರಾಂಡ (82 ವರ್ಷ) ಗುರುವಾರ ನಿಧನ ಹೊಂದಿದರು. ಅವಿವಾಹಿತರಾಗಿದ್ದ ಮೃತರಿಗೆ ಮೂವರು ಸಹೋದರರು, ಸಹೋದರಿ ಇದ್ದಾರೆ.
ಪ್ರತಿಷ್ಠಿತ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಹಲವಾರು ವರ್ಷ ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಬಾಲ್ಯದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಹಿಲ್ಡಾ ಮಿರಾಂಡ ಪ್ರತಿನಿತ್ಯ ಮನೆಯಲ್ಲಿ ಕೃಷಿ ಕಾರ್ಯ ಮುಗಿಸಿ ಬಳಿಕ ಕಾಲೇಜಿಗೆ ತೆರಳುತಿದ್ದರು. ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಪಾಲನಾ ಮಂಡಳಿಯ ಸದಸ್ಯರಾಗಿದ್ದು, ಚರ್ಚ್‌ನ ವಾರ್ಡ್ ಗುರಿಕಾರರಾಗಿದ್ದರು.

Kinnigoli-17041506

Comments

comments

Comments are closed.

Read previous post:
Kinnigoli-17041505
ಗುತ್ತಕಾಡು ಹಟ್ಟಿಗೆ ಬೆಂಕಿ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ನಿವಾಸಿ ಗಂಗು ಪೂಜಾರ್‍ತಿ ಅವರ ಮನೆಯ ಬದಿಯ ಹಟ್ಟಿಗೆ ಗುರುವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಹಟ್ಟಿಯು ಸಂಪೂರ್ಣ...

Close