ಭಾರತದಲ್ಲಿ ಕ್ರೀಡೆಗೆ ವಿಶೇಷ ಸ್ಥಾನಮಾನ ಇದೆ

ಮೂಲ್ಕಿ : ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಭಾರತದಂತಹ ದೇಶದಲ್ಲಿ ಕ್ರೀಡೆಗೆ ಯಾವಾಗಲೂ ವಿಶೇಷ ಸ್ಥಾನಮಾನ ಇದೆ. ಕ್ರೀಡೆಯಿಂದ ಸಾಮರಸ್ಯ ಉಂಟಾಗುವುದರ ಜೊತೆಗೆ ಯುವ ಪ್ರತಿಭೆಗಳನ್ನು ಗುರುತಿಸಲು ಸಾದ್ಯ ಎಂದು ರಾಜ್ಯ ತುಳು ಸಾಹಿತ್ಯ ಎಕೆಡಮಿಯ ಮಾಜೀ ರಾಜ್ಯಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.

ಮಂದಾಡಿ ಫ್ರೆಂಡ್ಸ್ ಕ್ಲಬ್ ಮಂದಾಡಿ ಮೂಲ್ಕಿ ಇದರ ವತಿಯಿಂದ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಿಲ್ಪಾಡಿ ತಾಲ್ಲೂಕ ಪಂಚಾಯತಿ ಸದಸ್ಯೆ ವನಿತಾ ಅಮೀನ್ ವಹಿಸಿದ್ದರು. ವೇದಿಕೆಯಲ್ಲಿ ಕಿಲ್ಪಾಡಿ ಪಂಚಾಯತಿ ಸದಸ್ಯ ಜಯ ಕುಮಾರ್ ಮಟ್ಟು, ಮೂಲ್ಕಿ ವಿಜಯಾ ಸಹಕಾರಿ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ಅತಿಕಾರಿಬೆಟ್ಟು ಹಾಲು ಉತ್ಪಾದರಕರ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಮಂದಾಡಿ ಫ್ರೆಂಡ್ಸ್ ಕ್ಲಬ್ ಮಂದಾಡಿ ಇದರ ಗೌರವಾಧ್ಯಕ್ಷ ರತ್ನಾಕರ ಮಂದಾಡಿ ಹಾಗೂ ಪ್ರಭಾರ ಅಧ್ಯಕ್ಷ ಶ್ಯಾಮಾನಂದ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಪ್ರಸಿದ್ದ ನಾಟಿ ವೈದ್ಯ ಯಜ್ಷ ಪಂಡಿತ್ ಮಟ್ಟು ಅವರನ್ನು ಸಮಾಜದಲ್ಲಿ ವಿಶಿಷ್ಟ ಸಾದನೆಗಾಗಿ ಸನ್ಮಾನಿಸಲಾಯಿತು.

ವಿಕಲಾಂಗ ಚೇತನರಾದ ರಮೇಶ್ ಕೋಟ್ಯಾನ್ ಮಟ್ಟು ಹಾಗೂ ಜಗನ್ನಾಥ ಕಕ್ವ ಕ್ಲಬ್ ವತಿಯಿಂದ ಧನಸಹಾಯ ನೀಡಲಾಯಿತು. ಮಂದಾಡಿ ಫ್ರೆಂಡ್ಸ್‌ನ ಸದಸ್ಯ ಶಿವಾನಂದ ಸ್ವಾಗತಿಸಿದರು. ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಕ್ರಿಕೆಟ್ ಪಂದ್ಯಾಟ ನಡೆಯಿತು.

Puneethakrishna

Mulki-20041503

Comments

comments

Comments are closed.