ಉಚಿತ ರೋಗ ತಪಾಸಣಾ ಶಿಭಿರ

ಮೂಲ್ಕಿ : ನಿಯಮಿತ ಆರೋಗ್ಯ ತಪಾಸಣೆ ಹಾಗೂ ಉತ್ತಮ ಆಹಾರ ಪದ್ದತಿಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದು ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯದ ಹೃದಯ ರೋಗ ವಿಭಾಗ ಮುಖ್ಯಸ್ಥ ಡಾ.ಸುಬ್ರಮಣ್ಯಮ್ ಹೇಳಿದರು.
ಕಾರ್ನಾಡು ಎಂಗ್ ಸ್ಟಾರ್‍ಸ್ ಎಸೋಸಿಯೇಶನ್ ಇವರ ಸಂಯೋಜನೆಯಲ್ಲಿ ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯದ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಕಾರದೊಂದಿಗೆ ಭಾನುವಾರ ನಡೆದ ಉಚಿತ ಹೃದಯ ರೋಗ, ಮಧುಮೇಹ, ಮತ್ತು ಮಕ್ಕಳ ರೋಗ ತಪಾಸಣಾ ಶಿಭಿರ ಉದ್ಘಾಟಿಸಿ ಮಾತನಾಡಿದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯವು ಆತ್ಯಾಧುನಿಕ ಸವಲತ್ತುಗಳನ್ನು ಹೊಂದಿದ್ದು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಹಿತದೃಷ್ಠಿಯಿಂದ ಆರೋಗ್ಯ ಶಿಭಿರಗಳನ್ನು ತಜ್ಷ ವೈದ್ಯರ ಸಹಕಾರದಿಂದ ನಡೆಸಲಾಗುತ್ತಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು.
ಈ ಸಂದರ್ಭ ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯ ಹರ್ಷರಾಜ ಶೆಟ್ಟಿ ಜಿಎಂ, ಯಂಗ್ ಸ್ಟಾರ್‍ಸ್ ಅಧ್ಯಕ್ಷ ಜಗದೀಶ ಶೆಟ್ಟಿ, ಕಾರ್ಯದರ್ಶಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.ಪ್ರೊ.ವಿನೋಬ್‌ನಾಥ್ ಐಕಳ ನಿರೂಪಿಸಿದರು.

Bhagyavan Sanil

Mulki-20041502

Comments

comments

Comments are closed.

Read previous post:
Kateel-19041501
ಕಟೀಲು ಬೆಳ್ಳಿರಥೋತ್ಸವ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಶನಿವಾರ ಬೆಳ್ಳಿರಥೋತ್ಸವ ನಡೆಯಿತು.

Close