ಸುರಗಿರಿ ದೇವಳಕ್ಕೆ ವಿದ್ಯುತ್‌ಜನಕ ಹಸ್ತಾಂತರ

ಕಿನ್ನಿಗೋಳಿ: ಶ್ರೀ ಸುರಗಿರಿ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಯ ಸಂದರ್ಭ ದೇವಳದಲ್ಲಿ ನೂತನವಾಗಿ ಅಳವಡಿಸಿದ ವಿದ್ಯುತ್‌ಜನಕ (ಜನರೇಟರ್)ನ್ನು ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಪಂಜದ ಗುತ್ತು ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಕೊಡೆತ್ತೂರು ಮುಕ್ಕ ಬಾಲಣ್ಣ ಶೆಟ್ಟಿ ಮತ್ತು ಮಕ್ಕಳು ಸುಮಾರು ೧.೫ಲಕ್ಷ ರೂ. ಮೌಲ್ಯದ ಕುರ್ಚಿಗಳನ್ನು ದೇವಳದ ಸಭಾಭವನಕ್ಕೆ ಕೊಡುಗೆಯಾಗಿ ನೀಡಿದರು.
ಶ್ರೀ ಸುರಗಿರಿ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕೆ.ಸೀತಾರಾಮ ಶೆಟ್ಟಿ, ಶಿಬರೂರು ವೇದವ್ಯಾಸ ತಂತ್ರಿ, ಮೊಕ್ತೇಸರರಾದ ಆನಂತರಾಮ ಭಟ್, ವೈ ಬಾಲಚಂದ್ರ ಭಟ್, ಪ್ರಕಾಶ್ ಜೆ. ಶೆಟ್ಟಿ, ಧನಂಜಯ ಪಿ. ಶೆಟ್ಟಿಗಾರ್, ದೇವಳದ ಪ್ರಧಾನ ಅರ್ಚಕ ವೇ.ಮೂ. ವಿಶ್ವೇಶ ಭಟ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಲವ ಶೆಟ್ಟಿ, ಸುರಗಿರಿ ಯುವಕ ಮಂಡಲ ಅಧ್ಯಕ್ಷ ಸಚೀನ್ ಕೆ ಶೆಟ್ಟಿ, ಯುವತಿ ಮಂಡಲ ಅಧ್ಯಕ್ಷೆ ನಿರ್ಮಲ ವಿ. ನಾಯಕ್ ಉಪಸ್ಥಿತರಿದ್ದರು.

Kinnigoli-24041505

Comments

comments

Comments are closed.

Read previous post:
Kinnigoli-24041504
ತೋಕೂರು : ಕಲಿಕಾ ಸವಲತ್ತುಗಳ ವಿತರಣೆ

ಕಿನ್ನಿಗೋಳಿ: ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಇವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ನೀಡಲಾಗುವ ಕಲಿಕಾ ಸವಲತ್ತುಗಳ ವಿತರಣಾ ಸಮಾರಂಭ ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ...

Close