ನಾದಸ್ವರದಿಂದ ಆರೋಗ್ಯ ವೃದ್ದಿ

ಮೂಲ್ಕಿ : ಭಾರತ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವಂತಹ ಶಾಸ್ತ್ರೀಯ ಸಂಗೀತದಲ್ಲಿ ಮನುಷ್ಯನನ್ನು ಆರೋಗ್ಯವಂತನಾಗಿಸುವ ಶಕ್ತಿಯಿದ್ದು ಮಾನಸಿಕ ಬೆಳವಣಿಗೆಗೆ ನಾದಸ್ವರ ಪೂರಕವಾಗಿದ್ದು ಶಾಸ್ತ್ರೀಯ ಸಂಗೀತ ಕ್ಸೇತ್ರದಲ್ಲಿ ಬಪ್ಪನಾಡು ಶ್ರೀ ದುರ್ಗೆಯ ಅನುಗ್ರಹದಿಂದ ಎಳವೆಯಿಂದಲೇ ಕಠಿಣ ಪರಿಶ್ರಮ ಹಾಗೂ ನಿರಂತರ ಸಾಧನೆಯಿಂದ ನಾದಸ್ವರದಲ್ಲಿ ಉನ್ನತ ಶಿಖರಕ್ಕೇರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ನಾದಸ್ವರ ವಿಶಾರದ,ದೇವಾಡಿಗ ನಾದರತ್ನ ಸೇರಿದಂತೆ ಹಲವಾರು ಪ್ರ್ರಶಸ್ತಿಗಳನ್ನು ಪಡೆದಿರುವಂತಹ ಮೂಲ್ಕಿಯ ನಾಗೇಶ್ ಎ ಬಪ್ಪನಾಡು ರವರಿಂದ ಇನ್ನಷ್ತು ಸಾಧನೆಗಳು ಮೂಡಿ ಬರಲೆಂದು ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಷ, ಆಧ್ಯಾತ್ಮಿಕ ಗುರು, ವೈಜ್ಷಾನಿಕ ಜ್ಯೋತಿಷಿ  ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಕನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರ್ಕತ, ನಾದಸ್ವರ ವಿಶಾರದ ಹಾಗೂ ಮುಂಬೈನ ನೆರೂಲ್ ನಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರಿಂದ ದೇವಾಡಿಗ ನಾದರತ್ನ ಪ್ರಶಸ್ತಿಯನ್ನು ಪಡೆದಿರುವಂತಹ ನಾಗೇಶ್ ಎ ಬಪ್ಪನಾಡುರವರನ್ನು ತಮ್ಮ ಆಶ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಅವರು ಬಪ್ಪನಾಡು ದೇವಳದಲ್ಲಿ ತಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕಲಾ ಸೇವೆಯನ್ನು ಮುಂದುವರಿಸಿಕೊಂಡು ಬಂದು ಆರ್ಥಿಕವಾಗಿ ಹಿಂದುಳಿದಿದ್ದರೂ ಸಂಗೀತ ಕ್ಸೇತ್ರದಲ್ಲಿ ಸಾಧನೆಗೈಯಬೇಕೆಂಬ ಛಲದಿಂದ ಎಳವೆಯಲ್ಲಿ ತಂಜಾವೂರಿಗೆ ಹೋಗಿ ಕಠೀಣ ಪರಿಶ್ರಮದಿಂದ ಸರಸ್ವತಿಯನ್ನು ಒಲಿಸಿಕೊಂಡು ನಾದಸ್ವರದಲ್ಲಿ ಅಪೂರ್ವ ಸಾಧನೆಗೈದು ಬಪ್ಪನಾಡು ದುರ್ಗೆಯ ಸೇವೆಯನ್ನು ಸಲ್ಲಿಸುತ್ತಿರುವ ನಾಗೇಶ್ ಬಪ್ಪನಾಡುರವರು ಯುವ ಪೀಳಿಗೆಯ ಸಂಗೀತ ಆಸಕ್ತರಿಗೆ ಮಾದರಿಯಾಗಿದ್ದು ಅವರಿಂದ ಇನ್ನಷ್ತು ಸಾಧನೆಗಳು ಮೂಡಿ ಬಂದು ದೇಶ ವಿದೇಶಗಳಲ್ಲಿ ಕೀರ್ತಿಯು ಪಸರಿಸಲೆಂದು ಹಾರೈಸಿದರು.ಈ ಸಂದರ್ಭದಲ್ಲಿ ರಜನಿ ಚಂದ್ರಶೇಖರ್, ಮುಂಬೈನ ಖ್ಯಾತ ಉದ್ಯಮಿ ನರಸಿಂಹನ್ ಉಪಸ್ಥಿತರಿದ್ದರು.

Prakash Suvarna

Mulki-24041502

Comments

comments

Comments are closed.