ತೋಕೂರು : ಕಲಿಕಾ ಸವಲತ್ತುಗಳ ವಿತರಣೆ

ಕಿನ್ನಿಗೋಳಿ: ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಇವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ನೀಡಲಾಗುವ ಕಲಿಕಾ ಸವಲತ್ತುಗಳ ವಿತರಣಾ ಸಮಾರಂಭ ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಗುರುವಾರ ನಡೆಯಿತು.
ಕಲಿಕಾ ಸವಲತ್ತುಗಳ ವಿತರಣೆಯನ್ನು ಪಡಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾ ಭಂಜನ್ ಸರಕಾರದ ಪರವಾಗಿ ವಿತರಿಸಿದರು.
ಈ ಸಂದರ್ಭ ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್, ಸಂಸ್ಥೆಯ ತರಬೇತಿ ಅಧಿಕಾರಿ ರಘುರಾಮ ರಾವ್ ಮತ್ತು ಕಛೇರಿ ಅಧೀಕ್ಷಕ ಸಂಜೀವ ದೇವಾಡಿಗ, ಕಿರಿಯ ತರಬೇತಿ ಅಧಿಕಾರಿ ಸುರೇಶ್ ಎಸ್., ವಿಶ್ವನಾಥ್ ರಾವ್ ಉಪಸ್ಥಿತರಿದ್ದರು.

Kinnigoli-24041504

Comments

comments

Comments are closed.

Read previous post:
Mulki-24041503
ಪರಿವಾರ ದೈವಗಳ ನೇಮೋತ್ಸವ

ಮೂಲ್ಕಿ:  ಬೆಳ್ಳಾಯರು ಕೋರ‍್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೋತ್ಸವ ನಡೆಯಿತು. Puneethakrishna

Close