ಕಟೀಲು ಪ್ರಾ.ಶಾ. ಶತಮಾನೋತ್ಸವ ವರ್ಷಾಚರಣೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದೆಂದು ಕಟೀಲು ಸರಸ್ವತೀ ಸದನದಲ್ಲಿ ಗುರುವಾರ ನಡೆದ ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾಭಿಮಾನಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರಸ್ತುತ ಇಲ್ಲಿನ ಕನ್ನಡ ಮಾಧ್ಯಮದ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಆಗದಂತೆ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ್, ಯಕ್ಷಗಾನ, ಸಂಗೀತ ನೃತ್ಯ ಮುಂತಾದ ಅನೇಕ ತರಗತಿಗಳನ್ನು ಆರಂಭಿಸಲಾಗಿದೆ. ಶತಮಾನೋತ್ಸವದ ಸವಿನೆನಪಿನಲ್ಲಿ ಹೊಸದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸುವುದು ಅಗತ್ಯ ಹಾಗೂ ವರ್ಷ ಪೂರ್ತಿ ಕಾರ್ಯಕ್ರಮಗಳ ಆಯೋಜನೆ, ಶಾಲಾ ಸವಲತ್ತುಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಲಹೆಗಳು ಚರ್ಚೆ ನಡೆಯಿತು.
ದೇವಳವು ಈಗಾಗಲೇ ಪ್ರಾಥಮಿಕ ಹಂತದಿಂದ ಪದವಿಯವರೆಗೆ ವರ್ಷಕ್ಕೆ ನಾಲ್ಕೂವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಕಳೆದ ಆರೇಳು ವರ್ಷಗಳಲ್ಲಿ ಪ್ರಾಥಮಿಕ ಶಾಲೆಗೆ ಎರಡೂವರೆ ಕೋಟಿ ರೂ.ಗಳನ್ನು ವ್ಯಯಿಸಿಲಾಗಿದೆ ಎಂದು ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.
ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಪ್ರಸಾದ ಆಸ್ರಣ್ಣ, ನಿವೃತ ಉಪಪ್ರಾಚಾರ‍್ಯ ಉಮೇಶ ರಾವ್ ಎಕ್ಕಾರು, ರುಕ್ಮಯದಾಸ್, ಈಶ್ವರ ಕಟೀಲ್, ಮುಖ್ಯ ಶಿಕ್ಷಕಿ ವನಮಾಲಾ, ಗೋಪಾಲ್, ರಾಜೇಶ್, ಕೃಷ್ಣ, ಪದ್ಮನಾಭ ಭಟ್, ಸಂಜೀವ ಮಡಿವಾಳ, ಕೆ.ವಿ.ಶೆಟ್ಟಿ, ಲೋಕೇಶ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ, ಭಾಸ್ಕರ ದಾಸ್, ಸುಬ್ರಹ್ಮಣ್ಯ ಪ್ರಸಾದ್, ತಿಮ್ಮಪ್ಪ ಕೋಟ್ಯಾನ್, ಭುವನಾಭಿರಾಮ ಉಡುಪ, ನೀಲಯ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kateel-25041501

Comments

comments

Comments are closed.

Read previous post:
Kinnigoli-24041506
ಚಂಡಿಕಾ ಯಾಗ ಹಾಗೂ ರಕ್ತೇಶ್ವರೀ ನೇಮ

 ಕಿನ್ನಿಗೋಳಿ: ತಾಳಿಪಾಡಿ -ಪುನರೂರು ಶ್ರೀ ರಕ್ತೇಶ್ವರೀ ದೈವಸ್ಥಾನದಲ್ಲಿ ಚಂಡಿಕಾ ಯಾಗ ಹಾಗೂ ರಕ್ತೇಶ್ವರೀ ನೇಮ ನಡೆಯಿತು.

Close