ಎಳವೆಯಲ್ಲಿಯೇ ಶಿಕ್ಷಣ ನೀಡಿದಾಗ ಸತ್ಪ್ರಜೆಯಾಗಿ ಬೆಳೆಯುತ್ತಾರೆ

ಕಿನ್ನಿಗೋಳಿ: ಎಳವೆಯಲ್ಲಿಯೇ ಧಾರ್ಮಿಕತೆ, ಶಿಸ್ತು ಸಂಸ್ಕಾರ ಹಾಗೂ ಮೌಲ್ಯಧಾರಿತ ಶಿಕ್ಷಣ ನೀಡಿದಾಗ ಭವಿಷ್ಯದಲ್ಲಿ ಪ್ರಜ್ಞಾವಂತ ಸತ್ಪ್ರಜೆಯಾಗಿ ಬೆಳೆಯುತ್ತಾರೆ. ಎಂದು ಕಟಪಾಡಿ ಶ್ರೀಮದ್ ಆನೆಗುಂದಿ ಜಗದ್ಗುರು ಮಹಾ ಸಂಸ್ತಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಹೇಳಿದರು.
ಭಾನುವಾರ ಕಿನ್ನಿಗೋಳಿಯ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಮತ್ತು ಕಾಳಿಕಾಂಬಾ ಮಹಿಳಾ ವೃಂದ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸ್ವರ್ಣ ಶಿಲ್ಪಿ ಗಣಪತಿ ಆಚಾರ್ಯ ದಾಮಸಕಟ್ಟೆ , ಅಂತರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಗಜೇಶ್ ಹಾಗೂ ರೂಪಶ್ರೀ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪುರೋಹಿತ ವೇಲಾಪುರಿ ವಿಶ್ವನಾಥ ಶರ್ಮ ಬೇಲೂರು ಶುಭಾಶಂಸನೆಗೈದರು.
ಕೊಲೆಕಾಡಿ ಶ್ರೀ ಕಾಳಿಕಾಂಬಾ ದೇವಳದ ಮೊಕ್ತೇಸರ ಸುಬ್ರಾಯ ಆಚಾರ್ಯ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಳದ ಮೊಕ್ತೇಸರ ಕೆ. ಉದಯ ಕುಮಾರ್ ಆಚಾರ್ಯ, ಸಭಾಭವನ ಸಮಿತಿಯ ಅಧ್ಯಕ್ಷ ಎಂ. ಪ್ರಥ್ವಿರಾಜ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಹೇಮಾ ವಿಶ್ವನಾಥ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ದಿನೇಶ್ ಆಚಾರ್ಯ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಗಣೇಶ್ ತಾಳಿಪಾಡಿ ಮತ್ತು ಮಹಿಳಾ ವೃಂದದ ಕಾರ್ಯದರ್ಶಿ ಅನಿತಾ ಪ್ರಥ್ವಿರಾಜ್ ವಾರ್ಷಿಕ ವರದಿ ಮಂಡಿಸಿದರು. ಯೋಗೀಶ್ ಮಲ್ಲಿಗೆಯಂಗಡಿ ಆಟೋಟ ಸರ್ಧೆಯ ವಿವರ ನೀಡಿದರು. ಕೆ. ಬಿ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-28041503

Comments

comments

Comments are closed.