ಅಭಿವೃದ್ಧಿ ಪರ ಚಿಂತನೆ ಮೈಗೊಡಿಸಬೇಕು

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಅಭಿವೃದ್ಧಿ ಪರ ಚಿಂತನೆ ಮತ್ತು ಯೋಜನೆಗಳನ್ನು ಮೈಗೊಡಿಸಿ ಗ್ರಾಮದ ಏಳಿಗೆಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.

ಭಾನುವಾರ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಎಳತ್ತೂರು ಫ್ರೆಂಡ್ಸ್ ಕ್ಲಬ್ ಪಡ್ಲಕ್ಯಾರು ಇದರ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಯಕ್ಷಗಾನ ಛಂದೋಬ್ರಹ್ಮ ಡಾ. ಎನ್ . ನಾರಾಯಣ ಶೆಟ್ಟಿ, ಯಕ್ಷ ಕವಿ ಶ್ರೀಧರ ಡಿ. ಎಸ್, ದೇವರ ಭಟ್ರು ಗೋಪಾಲಕೃಷ್ಣ ಯಾನೆ ಮುದ್ದು ಭಟ್ ಅವರನ್ನು ಸನ್ಮಾನಿಸಲಾಯಿತು.
ಕಟೀಲು ಪದವಿ ಕಾಲೇಜು ಉಪನಾಸ್ಯಕ ಡಾ. ಸೋಂದಾ ಭಾಸ್ಕರ ಭಟ್, ದ. ಕ. ಜಿಲ್ಲಾ ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ನಿವೃತ್ತ ಉಪನ್ಯಾಸಕ ಜೆ. ಬಿ. ಮಿರಾಂದ ಏಳಿಂಜೆ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಉದ್ಯಮಿ ಹಸನಬ್ಬ ಟಿ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ಯಾಮ್‌ಸುಂದರ್ ಶೆಟ್ಟಿ, ತಾಳಿಪಾಡಿಗುತ್ತು ದಿನೇಶ್ ಶೆಟ್ಟಿ, ಉದ್ಯಮಿ ಮನೋಹರ್ ಶೆಟ್ಟಿ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕ್ಲಬ್‌ನ ಗೌರವಾಧ್ಯಕ್ಷ ಶಶಿಕಾಂತ್ ರಾವ್ ಸ್ವಾಗತಿಸಿದರು, ಅಧ್ಯಾಪಕ ಲಕ್ಷ್ಮೀಶ ಎನ್. ಶಾಸ್ತ್ರಿ ಅಭಿನಂದನಾ ಭಾಷಣಗೈದರು. ಶ್ರೀಕಲಾ ಡಿ. ಎಸ್, ಪ್ರತಿಭಾ, ಅಶ್ವಿನಿ ಭಟ್ ಸನ್ಮಾನ ಪತ್ರ ವಾಚಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-28041501

Comments

comments

Comments are closed.

Read previous post:
Kateel-27041501
ಕಟೀಲಿಗೆ ಮುಜರಾಯಿ ಆಯುಕ್ತೆ ಪಲ್ಲವಿ ಭೇಟಿ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮುಜರಾಯಿ ಆಯುಕ್ತೆ ಪಲ್ಲವಿ ಅಕುರಾತಿ ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಹೊಸದಾಗಿ ಆಗಿರುವ ಚಿನ್ನದ ರಥ, ಕುದ್ರು ಭ್ರಾಮರೀವನದ...

Close