ಕಿನ್ನಿಗೋಳಿ: ಖಿಲ್‌ರ್ ಮೌಲೂದ್, ಧಾರ್ಮಿಕ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಾಗೂ ಖಿಲ್‌ರ್ ಮೌಲೂದ್ ಸಮಾರಂಭ ನಡೆಯಿತು.
ಖಿಲ್‌ರ್ ಮೌಲೂದ್ ಪಾರಾಯಣದ ನಂತರ ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸಂಯುಕ್ತ ಜಮಾಅತ್ ಬೆಳ್ತಂಗಡಿ ಸಹಾಯಕ ಖಾಝೀ ಅಸ್ಸೈಯ್ಯದ್ ಅಬ್ದುಲ್ ರಹ್‌ಮಾನ್ ಸಾದಾತ್ ತಂಞಳ್ ಹಾಗೂ ಖಿಲ್‌ರಿಯಾ ಜುಮ್ಮಾ ಮಸ್ಜಿದ್ ಖತೀಬರಾದ ಪಿ.ಜೆ.ಅಹ್ಮದ್ ಮದನಿ ದುವಾ ಆಶೀರ್ವಚನ ನೀಡಿದರು.
ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಟಿ.ಎಚ್.ಮಯ್ಯದ್ದಿ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಉಪ ತಹಶೀಲ್ದಾರ್ ಹಾಜಿ ಮೂಸಬ್ಬ ಬ್ಯಾರಿ ಜೋಕಟ್ಟೆ, ಕಟೀಲು ದೇವಳ ಪದವಿ ಪೂರ್ವ ಕಾಲೇಜು ಪ್ರಿನ್ಸ್‌ಪಾಲ್ ಜಯರಾಮ ಪೂಂಜ, ಶಾಂತಿನಗರ ಮೂಕಾಂಬಿಕ ದೇವಲ್ದ ಧರ್ಮದರ್ಶಿ ವಿವೇಕಾನಂದ, ಎಸ್.ಎಂ.ಎ. ಸುರತ್ಕಲ್ ರೇಂಜ್ ಅಧ್ಯಕ್ಷ ಯಾಕೂಬ್ ಇಡ್ಯಾ, ಮುಕ್ಕ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಸುರತ್ಕಲ್ ಮಸ್ಜಿದುನ್ನೂರು ಅಧ್ಯಕ್ಷ ಅಬ್ದುಲ್ ಹಮೀದ್ ನೂರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಖಬೀರ್, ಪುನರೂರು ಜುಮ್ಮಾ ಮಸ್ಜಿದ್ ಸದರ್ ಮುಅಲ್ಲಿಂ ಸಜ್ಜದ್ ಆಲಂ, ಪಕ್ಷಿಕೆರೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ನೂರಾನಿಯಾ ಉಪಸ್ಥಿತರಿದ್ದರು. ಟಿ.ಎಚ್.ಮಯ್ಯದ್ದಿ ಸ್ವಾಗತಿಸಿದರು, ಅಬೂಬಕ್ಕರ್ ವಂದಿಸಿದರು. ಟಿ.ಎ.ನಝೀರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-30041504

Comments

comments

Comments are closed.

Read previous post:
Kinnigoli-30041503
ಕಿನ್ನಿಗೋಳಿ ಮುತ್ತಪ್ಪ ರಾಣ್ಯ ಅವರಿಗೆ ಪರಿಹಾರ ಧನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಜಲ್ಲಿಗುಡ್ಡೆ ಮುತ್ತಪ್ಪ ರಾಣ್ಯ ಕ್ಯಾನ್ಸರ್ ಕಾಯಿಲೆಯಿಂದ ನಿಧನ ಹೊಂದಿದ ಸಂದರ್ಭ ಅವರ ಕುಟುಂಬಕ್ಕೆ ಪರಿಹಾರ ಧನ ರೂ.೧೦,೦೦೦/- ನಗದನ್ನು ಅವರ ಪತ್ನಿ ಸೀತಾ...

Close