ಸ್ವಾರ್ಥರಹಿತ ಚಿಂತನೆಯನ್ನು ಅಳವಡಿಸಿಕೊಳ್ಳಿ

ಮೂಲ್ಕಿ: ಜಿವನದಲ್ಲಿ ಹಿರಿಯರ ಆದರ್ಶಗಳನ್ನು ರೂಢೀಸಿಕೊಂಡು ಕಿರಿಯರು ಮುನ್ನಡೆಯಬೇಕು,ಸ್ವಾರ್ಥರಹಿತ ಚಿಂತನೆಯನ್ನು ಸಾರ್ಥಕ ಬದುಕಿನಲ್ಲಿ ರೂಢಿಸಿಕೊಂಡು ಪರೋಪಕಾರಿಯಾಗಿ ಬದುಕನ್ನು ನಡೆಸಬೇಕು ಎಂದು ವೇದಮೂರ್ತಿ ವಾಧಿರಾಜ ಉಪಾಧ್ಯಾಯ ಕೊಲೆಕಾಡಿ ಹೇಳಿದರು.

ಯಕ್ಷಮಿತ್ರ ಪಂಜಿನಡ್ಕ ಇದರ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಯಕ್ಷಗಾನ ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಲೆಕಾಡಿ ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯ ವಸಂತಕುಮಾರ್ ವಹಿಸಿದ್ದರು.

ಶ್ರೀ ಕ್ಷೇತ್ರ ಕಚ್ಚೂರಿನ ಅಧ್ಯಕ್ಷರಾದ ಈಶ್ವರ ಕೋಡಿಕಲ್, ಉದ್ಯಮಿ ಆಶಿತ್ ಶೆಟ್ಟಿ ಕಕ್ವಗುತ್ತು, ಗಂಗಾಧರ ಶೆಟ್ಟಿ ಬರ್ಕೆತೋಟ, ರಮೇಶ್ ಉಚ್ಚಿಲ, ಶೀನ ಸ್ವಾಮಿ, ಕಿಲ್ಪಾಡಿ ಪಂಚಾಯತಿ ಅಧ್ಯಕ್ಷೆ ಶಾರದಾ ವಸಂತ್, ಮೂಲ್ಕಿವಿಜಯಾ ರೈತ ಸೇವಾಸಹಕಾರಿ ಬ್ಯಾಂಕಿನ ಅಧ್ಯಕ್ಷ ರಂಗನಾಥ ಶೆಟ್ಟಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಕೊಲೆಕಾಡಿ ಕೋರ‍್ದಬ್ಬು ದೈವಸ್ಥಾನದ ಗುರಿಕಾರ ವಾಸು, ಎಂ,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್, ರಮೇಶ್ ಕೋಟ್ಯಾನ್ ಕಕ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ಸಾದಕರಾದ ಯಕ್ಷಕವಿ ಛಂದಸ್ಸು ಹಾಗೂ ನೂತನ ಪ್ರಸಂಗದ ಪದ್ಯ ರಚನೆಗಾರ ಗಣೇಶ್ ಕೊಲಕಾಡಿ, ಯಕ್ಷಗಾನ ತಾಳಮದ್ದಳೆ ಕಲಾವಿದ ಕಿರಣ್ ಕುಮಾರ್ ಪಡುಪಣಂಬೂರು, ಹಾಗೂ ನೂತನ ಯಕ್ಷಗಾನ ಶ್ರೀ ದೈವರಾಜ ಬಬ್ಬುಸ್ವಾಮಿ ಮಹಾತ್ಮೆ ಪ್ರಸಂಗಕರ್ತ ಸುರೇಶ್ ಕೊಲೆಕಾಡಿ ಅವರನ್ನು ಸನ್ಮಾನಿಸಲಾಯಿತು.

ವೇಣುಗೋಪಾಲ ಶೆಟ್ಟಿ ಸ್ವಾಗತಿಸಿದರು ಶ್ರೀನಿವಾಸ ಕೊಲೆಕಾಡಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ವಂದಿಸಿದರು, ಮನೋಹರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು ಬಳಿಕ ನೂತನ ಯಕ್ಷಗಾನ ಬಯಲಾಟ ನಡೆಯಿತು.

Puneethakrishna

Mulki-30041501

Comments

comments

Comments are closed.

Read previous post:
Kinnigoli-28041506
ಶ್ರೀ ಮಾರಿಯಮ್ಮ – ಮಾರಡ್ಕ ಬಿಂಬ ಪ್ರತಿಷ್ಠೆ

ಕಿನ್ನಿಗೋಳಿ: ಮಾರಡ್ಕ ಶ್ರೀ ಮಾರಿಯಮ್ಮ ದೇವಸ್ಥಾನದ ಮಾರಿಪೂಜಾ ಮಹೋತ್ಸವ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವತ್ಥಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದೇವರ ಬಿಂಬ ಪ್ರತಿಷ್ಠೆ.

Close