ಶಿವಾಲಿ ಗಾರ್ಡನ್ ವಸತಿ ಸಮುಚ್ಚಯ ಶಿಲಾನ್ಯಾಸ

 ಕಿನ್ನಿಗೋಳಿ : ಜೀವನದಲ್ಲಿ ಸಾಧಕರಾಗಬೇಕು ಸೌಹಾರ್ಧಯುತ ಕುಟುಂಬ ಸಮುದಾಯ ಸಂಸ್ಕ್ರತಿ ಹಾಗೂ ಉತ್ತಮ ರಾಷ್ಟ್ರ ಕಟ್ಟುವಲ್ಲಿ ಪಣತೊಡಬೇಕು. ಎಂದು ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹೆನ್ರಿ ಡಿಸೋಜ ಹೇಳಿದರು.
ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಗಳಲ್ಲೊಂದಾಗಿರುವ ರೊಯ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ನೂತನ ಯೋಜನೆ ’ಶಿವಾಲಿ ಗಾರ್ಡನ್’ ವಸತಿ ಸಮುಚ್ಚಯದ ಶಿಲಾನ್ಯಾಸ ಹಾಗೂ ಕೈಪಿಡಿಯನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ, ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್ ಕ್ರಾಸ್ತಾ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮಲಾ ಪಿ. ಹೆಗ್ಡೆ, ವೆಲೈಂಟನ್ ಡಿಸೋಜ, ಮಾಲಕರಾದ ಜೋನ್ಸನ್ ಜೆರೋಮ್ ಡಿಸೋಜ, ಮತ್ತು ಬೆನ್ ಸಿಕ್ವೇರಾ, ರೊಯ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮಾಲಕ ರೋಯ್ ಕಾಸ್ಟಲಿನೊ ಉಪಸ್ಥಿತರಿದ್ದರು.
ಮೇಬಲ್ ಡಿಸೋಜ ಸ್ವಾಗತಿಸಿದರು, ಡಾ. ಕ್ಲಾರೆನ್ಸ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು

ಕಿನ್ನಿಗೋಳಿ ಪೇಟೆಯ ಹಿಂಬದಿ ಸುಂದರ ಪರಿಸರದಲ್ಲಿ ಆಧುನಿಕ ಸೌಲಭ್ಯಗಳು ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಸುಸಜ್ಜಿತವಾಗಿ ಮತ್ತು ಕೈಗೆಟಕುವ ದರದಲ್ಲಿ ’ಶಿವಾಲಿ ಗಾರ್ಡನ್’ ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ.

ಅತ್ಯಾಧುನಿಕ ಸೌಲಭ್ಯಗಳು:
ವಿಶಾಲ ಮತ್ತು ಯೋಜನಾಬದ್ಧವಾಗಿ ನಿರ್ಮಾಣಗೊಳ್ಳಲಿರುವ ’ಶಿವಾಲಿ ಗಾರ್ಡನ್’ ವಸತಿ ಸಮುಚ್ಚಯದಲ್ಲಿ ನೆಲಮಹಡಿಯನ್ನು ಪಾರ್ಕಿಂಗ್‌ಗಾಗಿ ವಿಸಲಿಡಲಾಗಿದ್ದು, ಮೇಲಿನ 5 ಅಂತಸ್ತುಗಳು 2 ಮತ್ತು 3 ಬೆಡ್‌ರೂಂ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿವೆ. ವಿಶಾಲ ಕೊಠಡಿಗಳು, ವಾಸ್ತು ಆಧಾರಿತವಾಗಿ ನಿರ್ಮಾಣಗೊಳ್ಳಲಿವೆ.
ಲಿವಿಂಗ್ ರೂಮ್, ಬೆಡ್‌ರೂಮ್, ಡೈನಿಂಗ್ ಹಾಲ್ ಹಾಗೂ ಕಿಚನ್‌ಗಳನ್ನು ವ್ಯವಸ್ಥಿತವಾಗಿ ಇಂದಿನ ಮತ್ತು ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಬಾತ್‌ರೂಮ್‌ಗಳನ್ನು ಅತ್ಯಾಧುನಿಕ ಸೌಲಭ್ಯಗಳು ಮತ್ತು ಸಾಮಾಗ್ರಿಗಳೊಂದಿಗೆ ರೂಪಿಸಲಾಗಿದೆ. ಪ್ರತಿಯೊಂದು ಪರಿಕರಗಳಲ್ಲೂ ಗುಣಮಟ್ಟ ಹಾಗೂ ಆಧುನಿಕತೆಗೆ ಆದ್ಯತೆ ನೀಡಲಾಗಿದೆ.
ವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ನಗರದ ಅವಶ್ಯಕತೆಗಳಲ್ಲಿ ವಸತಿ ಸೌಲಭ್ಯ ಪ್ರಮುಖವಾಗಿದೆ. ಕಳೆದ ಮೂರು ದಶಕಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೊಯ್ ಕ್ಯಾಸ್ಟಲಿನೊ, ಈಗಾಗಲೇ ಹಲವು ವಸತಿ ಸಮುಚ್ಚಯಗಳನ್ನು ಪೂರ್ಣಗೊಳಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವು ಯೋಜನೆಗಳು ಪ್ರಗತಿಯಲ್ಲಿವೆ.

ಉತ್ಕೃಷ್ಠ ಗುಣಮಟ್ಟ :
ನಿರ್ಮಾಣ ಹಾಗೂ ರಿಯಲ್ ಎಸ್ಟೆಟ್ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರೊಯ್ ಕನ್‌ಸ್ಟ್ರಕ್ಷನ್ ಸಂಸ್ಥೆ ನಗರದಲ್ಲಿ ಹಲವಾರು ಸುಂದರ ಮತ್ತು ಆಕರ್ಷಕ ವಿನ್ಯಾಸಗಳ ವಸತಿ ಸಮುಚ್ಚಯಗಳನ್ನು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನೀಡಿ ಜನಮೆಚ್ಚುಗೆ ಗಳಿಸಿದೆ. ಪರಿಕರ, ತಂತ್ರಜ್ಞಾನ, ಕಟ್ಟಡ ವಿನ್ಯಾಸ ಸೇರಿದಂತೆ ಪ್ರತಿಯೊಂದು ವಿಚಾರಗಳಲ್ಲೂ ಉತ್ಕೃಷ್ಠ ಗುಣಮಟ್ಟವನ್ನು ಕಾಯ್ದುಕೊಂಡು ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ.

’ಶಿವಾಲಿ ಗಾರ್ಡನ್’ ವೈಶಿಷ್ಟ್ಯತೆಗಳು:
ವಿಜಿಟರ‍್ಸ್ ಲಾಂಜ್, ಸರ್ವೆಲೆನ್ಸ್ ಮೊನಿಟರಿಂಗ್ ಮತ್ತು ರೆಕಾರ್ಡಿಂಗ್ ವ್ಯವಸ್ಥೆ ಅಗ್ನಿಶಾಮಕ ವ್ಯವಸ್ಥೆ, ಸಂಪೂರ್ಣ ಸ್ವಯಂಚಾಲಿತ ೨ ಎಲಿವೇಟರ್‌ಗಳು, ಮಳೆ ನೀರು ಕೊಯ್ಲು,ಎಲೆಕ್ಟ್ರಾನಿಕ್ ಕಾರ್ಡ್ ಎಕ್ಸೆಸ್ ವ್ಯವಸ್ಥೆ, 24 ತಾಸು ನೀರು ಹಾಗೂ ವಿದ್ಯುತ್ ವ್ಯವಸ್ಥೆ
ಟೆಲಿಫೋನ್‌ನೊಂದಿಗೆ ಇಂಟರ್‌ಕೊಮ್ ಸೌಲಭ್ಯ, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ಸೋಲಾರ್ ಬಿಸಿ ನೀರಿನ ವ್ಯವಸ್ಥೆ.

ಮಕ್ಕಳು ನೌಕರಿ ನಿಮಿತ್ತ ಪರ ಊರುಗಳಲ್ಲಿ ವಾಸ್ತವ್ಯವಿದ್ದು, ಕೃಷಿ ಜಮೀನನ್ನು ನೋಡಿಕೊಳ್ಳಲು ತ್ರಾಸದಾಯಕವಾಗಿರುವ ಅವರ ಹಿರಿಯರಿಗೆ ಹೇಳಿ ಮಾಡಿಸಿದಂತಿರುವ ’ಶಿವಾಲಿ ಗಾರ್ಡನ್’ ಕಿನ್ನಿಗೋಳಿ ಪೇಟೆಯಲ್ಲೇ ತಲೆ ಎತ್ತಲಿದ್ದು, ಮಾರ್ಕೆಟ್ ಮತ್ತು ಸೂಪರ್ ಮಾರ್ಕೆಟ್‌ಗಳು ಸನಿಹದಲ್ಲಿದ್ದು, ಬಸ್ಸು ನಿಲ್ದಾಣ ಹಾಗೂ ವಾಹನ ಸೌಕರ‍್ಯ ಹತ್ತಿರದಲ್ಲಿವೆ. ವಿಮಾನ ನಿಲ್ದಾಣಕ್ಕೆ ಉತ್ತಮ ಸಾರಿಗೆ ವ್ಯವಸ್ಥೆಯಿದ್ದು, ಸ್ವಚ್ಛ ಹಾಗೂ ಹಸಿರಿನಿಂದ ಕೂಡಿದ ಸುತ್ತಮುತ್ತಲಿನ ಪರಿಸರ ಆರೋಗ್ಯಕರವಾಗಿದೆ. ಮಾತ್ರವಲ್ಲ ಶಿಕ್ಷಣ ಸಂಸ್ಥೆಗಳು, ಬಸ್‌ನಿಲ್ದಾಣ, ಮಾರುಕಟ್ಟೆ, ಶಾಪಿಂಗ್ ಮಾಲ್, ಕ್ರೀಡಾಂಗಣ, ಪಜಾಸ್ಥಳಗಳು ಮುಂತಾದ ಸೌಲಭ್ಯಗಳು ಈ ವಸತಿ ಸಮುಚ್ಚಯಗಳಿಂದ ಅನತಿ ದೂರದಲ್ಲಿವೆ. ಒಂದಕ್ಕಿಂತ ಮತ್ತೊಂದು ಭಿನ್ನವಾದ, ಆಕರ್ಷಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ, ಎಲ್ಲಾ ಸೌಲಭ್ಯಗಳಿಂದ ಕೂಡಿದ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ರೊಯ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ವಿಶೇಷತೆಯಾಗಿದೆ.

Kinnigoli-01051501 Kinnigoli-01051502 Kinnigoli-01051503

Kinnigoli-01051504 Kinnigoli-01051505 Kinnigoli-01051506 Kinnigoli-01051507

Comments

comments

Comments are closed.

Read previous post:
Kinnigoli-30041504
ಕಿನ್ನಿಗೋಳಿ: ಖಿಲ್‌ರ್ ಮೌಲೂದ್, ಧಾರ್ಮಿಕ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಾಗೂ ಖಿಲ್‌ರ್ ಮೌಲೂದ್ ಸಮಾರಂಭ ನಡೆಯಿತು. ಖಿಲ್‌ರ್...

Close