ಗೇನದ ನಡೆ ಮತ್ತು ಸಾಹಿತ್ಯ ಸಂಜೆ

ಮೂಲ್ಕಿ: ಕರಾವಳಿಭಾಗದಲ್ಲಿ ವಾಸವಾಗಿರುವ ತುಳುವರು ಮತ್ತು ಬಹು ಮಾತೃಭಾಷಾ ಜನರು ತುಳು ಬಲ್ಲವರಾಗಿದ್ದರೂ ತುಳು ಸಾಹಿತ್ಯ ಕ್ಷೇತ್ರ ಪರಿಣಾಮಕಾರಿಯಾಗಿ ಬೆಳವಣಿಗೆ ಕಾಣದಿರುವ ಪರಿಣಾಮ ಭಾಷೆಗೆ ಮಾನ್ಯತೆ ದೊರೆಯಲು ಹಿನ್ನಡೆಯಾಗಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಹೇಳಿದರು.
ಅವರು ಹಳೆಯುಂಗಡಿ ಪಾವಂಜೆಯ ರಾಮಪೂಜಾರಿ ಸಿರಿ ದೊಂಪದಲ್ಲಿ ಶುಕ್ರವಾರ ರಾತ್ರಿ ಅಗೋಳಿ ಮಂಜಣ ಜಾನಪದ ಕೇಂದ್ರ ಪಾವಂಜೆ ಮತ್ತು ತುಳು ಕೂಟ ಕುಡ್ಲ ಇವರ ಸಂಯುಕ್ತ ಆಶ್ರಯದಲ್ಲಿ ಗೇನದ ನಡೆ ಮತ್ತು ಸಾಹಿತ್ಯ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜು ಪ್ರಾದ್ಯಾಪಕ ಡಾ.ಗಣೇಶ್ ಅಮಿನ್ ಸಂಕಮಾರ್‌ರವರು ಬರೆದಿರುವ “ಸಂತೆದುಲಾಯಿ ಒಂತೆ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ತುಳು ಎಕಾಡಮಿ ಸ್ಥಾಪನೆಯಾಗಿ 20 ವರ್ಷಗಳು ಕಳೆದರೂ ಭಾಷೆಗೆ ಸಂವಿಂದಾನ ಮಾನ್ಯತೆ ಪಡೆಯುವಲ್ಲಿ ವಿಫಲರಾಗಿರುವುದು ಖೇದಕರ ಸಾಹಿತಿಗಳ ಬರವಣಿಗೆ ಹೆಚ್ಚಾದಲ್ಲಿ ಸಾಹಿತ್ಯದ ಉಸಿರು ಉಳಿಯುತ್ತದೆ. ಒದುವ ಜತೆಗೆ ಬರವಣಿಗೆಗೂ ಹೆಚ್ಚಿನ ಆಸಕ್ತಿ ಹಾಗೂ ಪೂರಕ ವಾತಾವರಣ ನಿರ್ಮಾಣವಾದರೆ ಮಾತ್ರ ಭಾಷೆಗೆ ಮಾನ್ಯತೆ ಲಭಿಸಲು ಸಾಧ್ಯ. ತುಳು ಪರಂಪರೆಯನ್ನು ವಿಭಿನ್ನ ಕೋನದಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ ಗಣೇಶ್ ಅಮಿನ್ ಸಂಕಮಾರ್ ಬರೆದಿರುವುದು ಶ್ಲಾಘನೀಯ ಎಂದು ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.
ವಿಧಾನ ಪರಿಷತ್‌ನ ಸದಸ್ಯ ಗಣೇಶ್ ಕಾರ್ಣಿಕ್, ಗೇನದ ನಡೆ(ಜ್ಞಾನದ ಹಾದಿ) ಬಗ್ಗೆ ಮಾತನಾಡಿ,ಸಾಹಿತ್ಯ ಕ್ಷೇತ್ರ ಕೇವಲ ಪ್ರಚಾರ ದೃಷ್ಠಿಯಿಂದ ಋಣಾತ್ಮಕ ನಿಲುವಿನತ್ತ ವಾಲುತ್ತಿರುವ ಪರಿಣಾಮ ವಿಕೃತ ಸಂಸ್ಕೃತಿ ಹೆಚ್ಚಾಗಿ ಸಮಾಜದ ಬೆಳವಣಿಗೆಗೆ ಹಾನಿಯಾಗುತ್ತಿದೆ. ಸಾಹಿತ್ಯಗಳು ಧನಾತ್ಮಕ ಧೃಷ್ಠಿಕೋನ ಸಹಿತಸಮಾಜಕ್ಕೆ ತಮ್ಮ ಬದ್ದತೆಯನ್ನು ನಿರೂಪಿಸುವಂತಾಗಬೇಕು ಎಂದರು.
ಕುಡ್ಲ ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಬಾಲಕೃಷ್ಣ ಪುತ್ತಿಗೆ ಕೃತಿಯನ್ನು ಪರಿಚಯಿಸಿ ತುಳು ಭಾಷೆಗೆ ನ್ಯಾಯ ಸಿಗದೇ ಇರುವ ಈ ಕಾಲಘಟ್ಟದಲ್ಲಿ ಸಾಹಿತ್ಯದ ಬೆಳವಣಿಗೆ ಕೆಲವೇ ವ್ಯಕ್ತಿಗಳಿಂದ ಗ್ರಾಮೀಣ ಭಾಗದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಇದೊಂದು ಆಶಾದಾಯಕ ಸಂಗತಿಯಾಗಿದ್ದು ಸಂತೆದುಲಯಿ ಒಂತೆ ಕೃತಿಯು ಸಮಾಜದ ಎಲ್ಲಾ ವರ್ಗಗಳ ದೈನಂದಿನ ಜೀವನ ಸಂಗತಿಗಳನ್ನು ಒಳಗೊಂಡ ಅಂಕಣ ಗುಚ್ಚವಾಗಿದೆ.ತುಳು ಭಾಷೆಯ ಬೆಳವಣಿಗೆಗೆ ಪತ್ರಿಕೆಗಳು ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾವ್‌ರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ರವೀಂದ್ರ ಪೂಜಾರಿ, ಸಂತ ಅಲೋಶಿಯಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಟೀಬರ್ಟ್ ಡಿಸಿಲ್ವ, ಪ್ರೊ. ಜಾನ್ ಡಿ ಸಿಲ್ವ, ನಿನಾದ ಟ್ರಸ್ಟ್‌ನ ಕಡಂಬೋಡಿ ಮಹಾಬಲ ಪೂಜಾರಿ, ಎಚ್.ವಸಂತ ಬೆರ್ನಾರ್ಡ್, ಜಯಂತ ಸನಿಲ್, ಚಂದ್ರಶೇಖರ ನಾನಿಲ್, ಜಯಂತಿ ಸಂಕಮಾರ್, ಸಂಘಟಕ ಗಣೇಶ್ ಅಮಿನ್ ಸಂಕಮಾರ್, ಅನು ಸಂಕಮಾರ್, ಭವ ಸಂಕಮಾರ್ , ನವೀನ್ ಶೆಟ್ಟಿ ಎಡ್ಮೆಮಾರ್ ಉಪಸ್ಥಿತರಿದ್ದರು.

ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು.

Bhagyavan Sanil

Mulki-02051501

Comments

comments

Comments are closed.

Read previous post:
Kinnigoli-01051502
ಶಿವಾಲಿ ಗಾರ್ಡನ್ ವಸತಿ ಸಮುಚ್ಚಯ ಶಿಲಾನ್ಯಾಸ

 ಕಿನ್ನಿಗೋಳಿ : ಜೀವನದಲ್ಲಿ ಸಾಧಕರಾಗಬೇಕು ಸೌಹಾರ್ಧಯುತ ಕುಟುಂಬ ಸಮುದಾಯ ಸಂಸ್ಕ್ರತಿ ಹಾಗೂ ಉತ್ತಮ ರಾಷ್ಟ್ರ ಕಟ್ಟುವಲ್ಲಿ ಪಣತೊಡಬೇಕು. ಎಂದು ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹೆನ್ರಿ ಡಿಸೋಜ ಹೇಳಿದರು. ನಿರ್ಮಾಣ...

Close