ಗುತ್ತಕಾಡು ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಆಧುನಿಕತೆಯ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ಮುನ್ನಚ್ಚರಿಕೆಯಾಗಿ ಹಾಗೂ ಸಮಾಜಮುಖಿ ಕಾಳಜಿಯಿಂದ ಮುಕ್ಕ ಶ್ರೀನಿವಾಸ ಆಸ್ಪತ್ರೆ ನಿರಂತರ ಶಿಬಿರ ಹಮ್ಮಿಕೊಳ್ಳತ್ತಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಹೇಳಿದರು.
ಶ್ರೀನಿವಾಸ ಆಸ್ಪತ್ರೆ ಮುಕ್ಕ, , ಶಾಂತಿನಗರ ರೋಟರಿ ಸಮುದಾಯ ದಳ , ಗ್ರೀನ್ ಸ್ಟಾರ್ ಕ್ರಿಕೆಟ್ ಕ್ಲಬ್ ಇದರ ಆಶ್ರಯದಲ್ಲಿ ಭಾನುವಾರ ಗುತ್ತಕಾಡು ಸರಕಾರಿ ಶಾಲೆಯಲ್ಲಿ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ 108 ಅಂಬ್ಯುಲೆನ್ಸ್ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಶಿಬಿರ ಉದ್ಘಾಟಿಸಿದರು. ಗ್ರಾ. ಪಂ. ಸದಸ್ಯ ಟಿ. ಎಚ್. ಮಯ್ಯದ್ದಿ , ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಮಾರುಕಟ್ಟೆ ವಿಭಾಗ ಶ್ರೀರಾಮ ಕಾರಂತ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ , ಗುತ್ತಕಾಡು ಸರಕಾರಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಶಾಲಾ ಶಿಕ್ಷಕ ಹರಿ ರಾವ್, ರೋಟರಿದಳದ ಅಧ್ಯಕ್ಷ ಸೈಯದ್ ಅಲಿ, ಗ್ರೀನ್ ಸ್ಟಾರ್ ಅಧ್ಯಕ್ಷ ಗುಲಾಂ ಹುಸೈನ್, ಹಸನಬ್ಬ , ಟಿ. ಎ. ನಝೀರ್, ಟಿ. ಎ. ಹನೀಫ್ ಮತ್ತಿತರರಿದ್ದರು. ಟಿ. ಕೆ. ಅಬ್ದುಲ್ ಕಾದರ್ ಸ್ವಾಗತಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-05051503

Comments

comments

Comments are closed.

Read previous post:
Kinnigoli-05051502
ಯಕ್ಷಗಾನ ಕಲೆ ಜ್ಞಾನದ ಸಂಪತ್ತು

ಕಿನ್ನಿಗೋಳಿ: ಶಿಷ್ಟ ಸಂಪ್ರದಾಯದ ಯಕ್ಷಗಾನ ಪುರಾಣ ಲೋಕವನ್ನು ಅನಾವರಣ ಗೋಳಿಸಿ ಜನರಿಗೆ ಜ್ಞಾನದ ಸಂಪತ್ತು ನೀಡಬಲ್ಲದು. ಎಂದು ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಶನಿವಾರ ಕೊಡೆತ್ತೂರು...

Close