ಯಕ್ಷಗಾನ ಕಲಾರಂಗದಿಂದ ಗಣೇಶ ಕೊಲಕಾಡಿಗೆ ಮನೆ

ಮೂಲ್ಕಿ: ಖ್ಯಾತ ಪ್ರಸಂಗಕರ್ತ ಕಲಾವಿದ ಗಣೇಶ ಕೊಲಕಾಡಿಯವರಿಗೆ ಮೂಲ್ಕಿ ಅತಿಕಾರಿಬೆಟ್ಟುವಿನ ಮೊಯಿಲೊಟ್ಟುವಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಸುಮಾರು 7ಲಕ್ಷ ರೂ. ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿದ್ದು, ಮೇ.10ರಂದು ಅದರ ಹಸ್ತಾಂತರ ಕಾರ‍್ಯಕ್ರಮ ನಡೆಯಲಿದೆ ಎಂದು ಕಲಾರಂಗದ ಮುರಲಿ ಕಡೇಕಾರ್ ತಿಳಿಸಿದ್ದಾರೆ.

ಅಂದು ಕಟೀಲಿನ ಶ್ರೀಹರಿನಾರಾಯಣದಾಸ ಆಸ್ರಣ್ಣ, ಪಂಜ ಭಾಸ್ಕರ ಭಟ್, ಶಶೀಂದ್ರ ಕುಮಾರ್, ಬನ್ನಂಜೆ ಸಂಜೀವ ಸುವರ್ಣ, ಗಂಗಾಧರ ರಾವ್, ದಿನೇಶ ಪೂಜಾರಿ, ಕೃಷ್ಣ ಮೂರ್ತಿ ಭಟ್, ರಮೇಶ ಬಾರಿತ್ತಾಯ, ಭುಜಂಗ ಬಂಗೇರ, ಕಲಾರಂಗದ ತಲ್ಲೂರು ಶಿವರಾಮ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮನೆಯ ಹಸ್ತಾಂತರ ಮೇ 10ರ ಸಂಜೆ 5ಗಂಟೆಗೆ ನಡೆಯಲಿದೆ.
ನೂತನ ಮನೆ ಶ್ರೀ ಛಂದಃಪದ್ಮದ ಪ್ರವೇಶೋತ್ಸವ ಸಂದರ್ಭ ಕಲೋತ್ಸವದ ಉದ್ಘಾಟನೆ, ತುಳು ತಾಳಮದ್ದಲೆ ಶಬರಕುಮಾರ ಸಮರ ಸೌಗಂಧಿಕಾ, ಸುಭದ್ರಾ ಕಲ್ಯಾಣ ಹಾಗೂ ಶಂಕರಿ ಬನಶಂಕರಿ ಯಕ್ಷಗಾನ ಬಯಲಾಟ ನಡೆಯಲಿದ್ದು, ಐವತ್ತಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು, ಕೊಲಕಾಡಿಯವರ ಶಿಷ್ಯರು ಭಾಗವಹಿಸಲಿದ್ದಾರೆ.

Comments

comments

Comments are closed.

Read previous post:
Mulki-08051501
ಅಡ್ಯರಣ್ಣ ಮೂಲಸ್ಥಾನ ಶ್ರೀ ನಾಗ ಪ್ರತಿಷ್ಠೆ, ನೇಮೋತ್ಸವ

ಮುಲ್ಕಿ: ಶಾಂತಿ ಸಮೃದ್ಧಿ, ಭಕ್ತಿ ಸಂಕೇತದ ತುಳು ನಾಡ ದೈವ ದೇವರುಗಳ ನಂಬಿಕೆ ಹಾಗೂ ಹಿರಿಯರ ಆಶೀರ್ವಾದಗಳನ್ನು ಉಳಿಸಿ ಬೆಳೆಸಿ ಕುಟುಂಬ ಮತ್ತು ಸಮಾಜದ ಶ್ರೇಯೋಭಿವೃದ್ಧಿಗಾಗಿ ಜೀವನ ಮುಡಿಪಾಗಿಡಬೇಕು...

Close