ಅಡ್ಯರಣ್ಣ ಮೂಲಸ್ಥಾನ ಶ್ರೀ ನಾಗ ಪ್ರತಿಷ್ಠೆ, ನೇಮೋತ್ಸವ

ಮುಲ್ಕಿ: ಶಾಂತಿ ಸಮೃದ್ಧಿ, ಭಕ್ತಿ ಸಂಕೇತದ ತುಳು ನಾಡ ದೈವ ದೇವರುಗಳ ನಂಬಿಕೆ ಹಾಗೂ ಹಿರಿಯರ ಆಶೀರ್ವಾದಗಳನ್ನು ಉಳಿಸಿ ಬೆಳೆಸಿ ಕುಟುಂಬ ಮತ್ತು ಸಮಾಜದ ಶ್ರೇಯೋಭಿವೃದ್ಧಿಗಾಗಿ ಜೀವನ ಮುಡಿಪಾಗಿಡಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರವರು ಹೇಳಿದರು.
ಗುಡ್ಡೆ ಅಂಗಡಿ ಕವತ್ತಾರಿನ ದೇವಾಡಿಗ ಸಮಾಜದ ಅಡ್ಯರಣ್ಣ ಮೂಲಸ್ಥಾನದಲ್ಲಿ ಶುಕ್ರವಾರ ನಡೆದ ಶ್ರೀ ನಾಗ ಪ್ರತಿಷ್ಠಾ ವರ್ಧಂತ್ಯುತ್ಸವ, ಧರ್ಮದೇವತೆಗಳ ವೈಭವದ ನೇಮೋತ್ಸವದ ಸಂದರ್ಭ ಶ್ರೀ ಶೇಷ ಶಯನ ಸಭಾಭವನ ಉದ್ಘಾಟಿಸಿ ಮಾತನಾಡಿದರು.
ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ತುಳು ಕೂಟದ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ಅಧ್ಯಕ್ಷತೆ ವಹಿಸಿದರು.
ಶ್ರೀ ವಾಸುಕಿ ಅನಂತಪದ್ಮನಾಭ ದೇವಳದ ಆಡಳಿತ ಮೊಕ್ತೇಸರ ಶ್ರೀಕಾಂತ ಸಾಮಗ, ಮಂಗಳೂರು ಕ್ಯಾಂಪ್ಕೊ ಸಂಸ್ಥೆ ಅಧ್ಯಕ್ಷ ಕಂಕೋಡಿ ಶ್ರೀಪದ್ಮನಾಭ, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ವಿವಿಧ ದೇವಾಡಿಗ ಸಂಘಗಳ ಅಧ್ಯಕ್ಷರುಗಳಾದ ಗಣೇಶ್ ದೇವಾಡಿಗ, ಎಚ್.ಮೋಹನದಾಸ್, ವಾಮನ್ ಮರೋಳಿ, ಕೃಷ್ಣಪ್ಪ ಎಸ್. ದೇವಾಡಿಗ, ಗೋಪಾಲ, ರವಿ ಶಂಕರ, ದೊಡ್ಡಣ್ಣ ಮೊಯಿಲಿ, ಜನಾರ್ಧನ ಪಡುಪಣಂಬೂರು, ಪ್ರಕಾಶ್ ದೇವಾಡಿಗ, ಮಹಿಳಾ ಸಮಿತಿಯ ಅಧ್ಯಕ್ಷೆ ವಸಂತಿ ದೇವಾಡಿಗ, ಯುವ ಸಂಘಟನಾ ಸಮಿತಿ ಅಧ್ಯಕ್ಷ ಜೀವನ್ ಪ್ರಕಾಶ್ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.
ಊರ ಸಮಿತಿಯ ಅಧ್ಯಕ್ಷ ಸಂಜೀವ ಮೊಯಿಲಿ ವಾಮಂಜೂರು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪ್ರಸ್ತಾವನೆ ಗೈದರು, ಖಜಾಂಜಿ ಮೀರಾಬಾಯಿ ವಂದಿಸಿದರು, ರಾಜೇಶ್ ಶೇರಿಗಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

Mulki-08051501 Mulki-08051502 Mulki-08051503 Mulki-08051504 Mulki-08051505 Mulki-08051506 Mulki-08051507

Mulki-08051508

Comments

comments

Comments are closed.

Read previous post:
6KinniSanmana
ಕಟೀಲು ಸನ್ಮಾನ

ಕಿನ್ನಿಗೋಳಿ: ಕಟೀಲಿನಲ್ಲಿ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನ ಸಂದರ್ಭ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಿತಿ ಮುಂಬೈ, ಯುಎಇ ಇದರ ವತಿಯಿಂದ ಕಲಾವಿದರಾದ ಮಹೇಶ ಮಣಿಯಾಣಿ,...

Close