ಕಲಾರಂಗದಿಂದ ಮನೆ ಹಸ್ತಾಂತರ

ಮೂಲ್ಕಿ: ವಿದ್ವಾಂಸರು ಎಲ್ಲ ಕಡೆಯೂ ಪೂಜಿಸಲ್ಪಡುತ್ತಾರೆ ಎಂಬುದಕ್ಕೆ ಛಾಂದಸ ಕ್ಷಗಾನ ಕವಿ ಗಣೇಶ ಕೊಲಕಾಡಿಯವರೇ ಸಾಕ್ಷಿ. ಉಡುಪಿಯ ಕಲಾರಂಗ ಮನೆಯನ್ನು ಕಟ್ಟಿ ಕೊಟ್ಟು ಸತ್ಪಾತ್ರರಿಗೆ ದಾನ ಮಾಡುವುದರ ಮೂಲಕ ತಾನೂ ಕೂಡ ಧನ್ಯತೆಯನ್ನು ಹೊಂದಿದೆ ಎಂದು ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಭಾನುವಾರ ಯಕ್ಷಗಾನ ಕವಿ ಗಣೇಶ್ ಕೊಲಕಾಡಿಯವರಿಗೆ ಯಕ್ಷಗಾನ ಕಲಾರಂಗ ಉಡುಪಿ ವತಿಯಿಂದ ಹೊಸ ಮನೆಯ ಹಸ್ತಾಂತರ, ಶ್ರೀ ಛಂದಪದ್ಮದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ವಾನ್ ಪಂಜ ಭಾಸ್ಕರ ಭಟ್, ಯಕ್ಷಗಾನ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಮಾಡುತ್ತಿರುವ ಕಲಾರಂಗ ಸಾಧಕ ಕೊಲಕಾಡಿಯನ್ನು ಈ ವಿಧದಲ್ಲಿ ಗೌರವಿಸಿದ್ದು ಅಭಿನಂದನೀಯವೆಂದರು.
ಹಿರಿಯ ಛಾಂದಸ ಡಾ. ಎನ್. ನಾರಾಯಣ ಶೆಟ್ಟಿ, ಪಾವಂಜೆ ಹರಿದಾಸ ಲಕ್ಷ್ಮೀನಾರಣಪ್ಪಯ್ಯ ಸ್ಮಾರಕ ಕಲಾ ಪೋಷಕ ವೇದಿಕೆಯ ಅಧ್ಯಕ್ಷ ಎಂ.ಶಶೀಂದ್ರ ಕುಮಾರ್, ಉದ್ಯಮಿಗಳಾದ ಎಂ.ಗಂಗಾಧರ ರಾವ್,ದಿನೇಶ್ .ಪಿ.ಪೂಜಾರಿ, ಕೃಷ್ಣಮೂರ್ತಿ ಭಟ್, ರಮೇಶ ಬಾರಿತ್ತಾಯ, ನಿವೇಶನ ದಾನಿ ಭುಜಂಗ ಬಂಗೇರ ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ,ಭಟ್, ಅಧ್ಯಕ್ಷ ತಲ್ಲೂರು ಶಿವರಾಮಶೆಟ್ಟಿ ಮತ್ತಿತರರಿದ್ದರು.
ಈ ಸಂದರ್ಭ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಯಕ್ಷಗಾನ ಕಲಾರಂಗ ವತಿಯಿಂದ ಸನ್ಮಾನಿಸಲಾಯಿತು. ಗಣೇಶ್ ಕೊಲಕಾಡಿ ಸಹಕಾರ ನೀಡಿದ ಸಹೃದಯರನ್ನು ಸ್ಮರಿಸಿದರು.
ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಸ್ತಾವನೆಗೈದರು. ನಾರಾಯಣ ಹೆಗ್ಡೆ ವಂದಿಸಿದರು.
ಈ ಸಂದರ್ಭ ದಿನವಿಡೀ ಕಲೋತ್ಸವ ನಡೆಯಿತು. ಉದ್ಘಾಟನೆಯಲ್ಲಿ ಡಾ. ನಾರಾಯಣ ಶೆಟ್ಟಿ, ವೇ.ಮೂ. ವಾದಿರಾಜ ಉಪಾಧ್ಯಾಯ, ಕೆ.ಎಲ್. ಕುಂಡಂತಾಯ, ಗಣೇಶ ಅಮೀನ್ ಸಂಕಮಾರ್, ವಸಂತ್ ಎಚ್, ಜಯಕೃಷ್ಣ ಕೋಟ್ಯಾನ್ ಮತ್ತಿತರಿದ್ದರು.
ಪ್ರಸಿದ್ಧ ಕಲಾವಿದರು ಹಾಗೂ ಗಣೇಶ ಕೊಲಕಾಡಿಯವರ ಶಿಷ್ಯರಿಂದ ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ಬಯಲಾಟ ನಡೆಯಿತು.
Mulki-11051501

Comments

comments

Comments are closed.

Read previous post:
Kinnigoli-11051503
ಪಡುಪಣಂಬೂರು-ಕೆಮ್ರಾಲ್ – ಬೊರ್‌ವೆಲ್ ಅವಾಂತರ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತೋಕೂರು ಗ್ರಾಮದ ಸಾರ್ವಜನಿಕರಿಗಾಗಿ ನಿರ್ಮಾಣಗೊಳ್ಳುತ್ತಿರುವ ಕೊಳವೆ ಬಾವಿಯನ್ನು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಡೆ ಹಿಡಿದ ಘಟನೆ ಶನಿವಾರ ನಡೆದಿದೆ ಪಡುಪಣಂಬೂರು ಗ್ರಾಮ...

Close