ಪಡುಪಣಂಬೂರು-ಕೆಮ್ರಾಲ್ – ಬೊರ್‌ವೆಲ್ ಅವಾಂತರ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತೋಕೂರು ಗ್ರಾಮದ ಸಾರ್ವಜನಿಕರಿಗಾಗಿ ನಿರ್ಮಾಣಗೊಳ್ಳುತ್ತಿರುವ ಕೊಳವೆ ಬಾವಿಯನ್ನು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಡೆ ಹಿಡಿದ ಘಟನೆ ಶನಿವಾರ ನಡೆದಿದೆ
ಪಡುಪಣಂಬೂರು ಗ್ರಾಮ ಪಂಚಾಯಿತಿಯ ಗಡಿ ಪ್ರದೇಶವಾದ ಬೊಳ್ಳೂರು ಕೊಯಿಕುಡೆ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಫೆಬ್ರವರಿ ತಿಂಗಳಿನಿಂದಲೇ ನೀರಿನ ಹಾಹಾಕಾರ ಶುರುವಾಗುತ್ತಿದ್ದು ಈದೀಗ ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್ ಅವರ ಪ್ರಯತ್ನ ಹಾಗೂ ಮನವಿ ಮೇರೆಗೆ ಮೂಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಕೊಳವೆ ಬಾವಿಗಾಗಿ ಅನುದಾನವನ್ನು ನೀಡಿದ್ದರು. ಅದರಂತೆ ಶನಿವಾರ ಪಡುಪಣಂಬೂರು ಗಡಿಪ್ರದೇಶವಾದ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು-ಕೊಯಿಕುಡೆ ಬಳಿ ಕೊಳವೆ ಬಾವಿ ಕೊರೆಯಲು ಪ್ರಾರಂಭಿಸಲಾಗಿತ್ತು. ಆದರೆ ಸಮೀಪದಲ್ಲಿಯೇ ೪ ಸರಕಾರಿ ಹಾಗೂ ಖಾಸಗಿ ತೆರೆದ ಬಾವಿಗಳಿದ್ದು ಅಂತರ್ ಜಲ ಕುಸಿಯುವ ಭೀತಿಯಿಂದ ಸ್ಥಳೀಯರು ಆತಂಕದಿಂದ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ಕೊಳವೆ ಬಾವಿ ಕೊರೆಯದಂತೆ ತಡೆ ಹಿಡಿದರು.
ಕೊಳವೆ ಬಾವಿ ಕೆಮ್ರಾಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿದ್ದು ಆದರೆ ಇದರ ಪ್ರಯೋಜನ ಮಾತ್ರ ಪಡುಪಣಂಬೂರು ಪಂಚಾಯಿತಿಯ ತೋಕೂರು ಗ್ರಾಮದ ಗ್ರಾಮಸ್ಥರಿಗೆ.
ಪ್ರತಿಯೊಂದು ಗ್ರಾಮಗಳಿಗೂ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶ ಸರ್ಕಾರದ್ದಾಗಿದ್ದು ಎಷ್ಟೇ ಸಮಸ್ಯೆಯಿದ್ದರೂ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡಬೇಕಾಗಿದೆ ಆದರೆ ಇಲ್ಲಿ ತಾಂತ್ರಿಕ ಕಾರಣ ಹಾಗೂ ಗೊಂದಲದ ವಾತವರಣದಿಂದಾಗಿ ಪ್ರಕರಣ ಇನ್ನಷ್ಟು ಜಟಿಲಗೊಂಡಿತ್ತು. ಸರಕಾರವೇನೋ ನೀರಿನ ಬವಣೆ ನೀಗಿಸುವ ಕಾರ್ಯಗಳಿಗೆ ನೂರಾರು ಕೋಟಿ ರೂಪಾಯಿ ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಆದರೂ ಅವರು ಇಂತಹ ಸಮಸ್ಯೆಗಳನ್ನು ಬಗೆಹರಿಸುವತ್ತ ಲಕ್ಷ್ಯವಹಿಸುವುದಿಲ್ಲ. ಸಮಸ್ಯೆಯ ನಿರ್ವಹಣೆಯಲ್ಲಿನ ವೈಫಲ್ಯವೇ ಈಗಿನ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗಿಲ್ಲದಿರುವುದು ವಿಷಾದನೀಯ.

ಈ ಪ್ರದೇಶದಲ್ಲಿ ಹಲವಾರು ಪರಿಶಿಷ್ಟ ಜಾತಿ ಮತ್ತು ಅಲ್ಪ ಸಂಖ್ಯಾತರ ಮನೆಗಳಿದ್ದು ಕೊಳವೆ ಬಾವಿ ರಸ್ತೆಯ ಕೂಗಳತೆಯಲ್ಲಿದ್ದು ಸಮೀಪದ ಪಕ್ಕಾ ರಸ್ತೆಗೆ ತಾಗಿ ಕೊಂಡಿರುವಂತಿದೆ. ಸಮೀಪವೇ ಕೆಲವು ವರ್ಷಗಳ ಹಿಂದೆ ಇನ್ನೊಂದು ಕೊಳವೆ ಬಾವಿಯಿದ್ದು ತಾಂತ್ರಿಕ ಕಾರಣಗಳಿಂದ ಹಾಳಾಗಿರುತ್ತದೆ. ಕೊಳವೆಬಾವಿ ಕೊರೆಯಲು ಎರಡು ಗ್ರಾಮ ಪಂಚಾಯಿತಿಗಳ ಮತ್ತು ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ತಾರದಿರುವುದು ಅಲ್ಲದೆ ಈ ಯೋಜನೆಯ ಬಗ್ಗೆ ಪಂಚಾಯಿತಿಗಳಲ್ಲಿ ಕಡತ ಅಥವಾ ಮಾಹಿತಿ ಇಲ್ಲದೆ ಏಕಾಎಕಿ ಯೋಜನೆ ಕೈಗೊಳ್ಳುವುದು. ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಯ ಬಗ್ಗೆ ಕಾರ್ಯಚರಿಸದೇ ತರಾತುರಿಯಲ್ಲಿ ಕೊಳವೆ ಬಾವಿ ರಚನೆಗೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂದೇಹಕ್ಕೀಡು ಮಾಡಿದೆ.
ಸ್ಥಳಕ್ಕಾಗಮಿಸಿದ ಪಡುಪಣಂಬೂರು ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಬೆಳಾಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಗುರುರಾಜ್ ಪೂಜಾರಿ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ರಾಥೋಡ್ ಅವರು ಸ್ಥಳೀಯ ಜನರಲ್ಲಿ ಚರ್ಚಿಸಿ ಪಡು ಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರಿನಲ್ಲಿ ಕೊಳವೆ ಬಾವಿ ಕೊರೆಯಲು ನಿರ್ದರಿಸಲಾಯಿತು.

ಪಡುಪಣಂಬೂರು ಗ್ರಾಮಪಂಚಾಯಿತಿ ವತಿಯಿಂದ ಕಳೆದ ಹತ್ತು ವರ್ಷಗಳಿಂದ ಶಾಸಕ ಅಭಯಚಂದ್ರ ಜೈನ್ ಬಳಿ ಹೊಸ ಕೊಳವೆ ಬಾವಿ ನಿರ್ಮಿಸಲು ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಈದೀಗ ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್ ಮನವಿಗೆ ಸ್ಪಂದನೆ ನೀಡಿರುವುದು ಶ್ಲಾಘನೀಯ. ಆದರೆ ಪಂಚಾಯಿತಿಗೆ ಮಾತ್ರ ಮಾಹಿತಿ ನೀಡಿಲ್ಲ ಜನರ ವಿರೋಧವಿದ್ದರೆ ಇಲ್ಲಿ ಕೊಳವೆ ಬಾವಿ ನಿರ್ಮಾಣ ಮಾಡುವುದಿಲ್ಲ ಇದಕ್ಕೆ ಪರ್ಯಾಯವಾಗಿ ಪಂಚಾಯಿತಿ ವ್ಯಾಪ್ತಿಯ ತೋಕೂರಿನಲ್ಲಿ ಕೊಳವೆ ಬಾವಿ ನಿರ್ಮಾಣ ಮಾಡುವ ಆಲೋಚನೆ ಪಂಚಾಯಿತಿ ಆಡಳಿತಕ್ಕಿದೆ.
ವಿನೋದ್ ಬೆಳಾಯರು
ಪಡುಪಣಂಬೂರು ಪಂಚಾಯತ್ ಮಾಜಿ ಅಧ್ಯಕ್ಷ

ಈಗ ನಿರ್ಮಾಣವಾಗುತಿರುವ ಕೋಳವೆ ಬಾವಿ ರಸ್ತೆ ಅಂಚಿಗಿಂತ ಕೇವಲ ಸುಮಾರು ಎಂಟು ಅಡಿ ಅಂತರದಲ್ಲಿದ್ದು ರಸ್ತೆ ಅಗಲಿಕರಣವಾಗುವಾಗ ಇದನ್ನು ಮುಚ್ಚಲೇಬೇಕಾದ ಅನಿವಾರ್ಯತೆ ಇದೆ ಅಲ್ಲದೆ ಸಮೀಪದ ರಸ್ತೆ ಬದಿಯಲ್ಲಿಯೇ ಇನ್ನೊಂದು ಕೊಳವೆ ಬಾವಿ ಕೂಡಾ ಇದ್ದು ಇದರಲ್ಲಿ ಸಾಕಷ್ಟು ನೀರು ಇಲ್ಲ ಆದರೆ ಇದನ್ನು ಅಭಿವೃದ್ಧಿ ಪಡಿಸಲು ಯೋಜನೆ ಹಾಕಬಹುದು ಈ ಪರಿಸರದಲ್ಲಿ ನೀರು ಇರುವ ೩-೪ ಸರಕಾರಿ ಬಾವಿಗಳಿದ್ದು ಅದನ್ನು ಅಭಿವೃದ್ಧಿ ಪಡಿಸಿದರೆ ಸಾಕಷ್ಟು ನೀರು ಸಿಗುವ ಸಾಧ್ಯತೆಗಳು ಹೆಚ್ಚಿವೆ.
ವಿಶ್ವನಾಥ್
ಸ್ಥಳೀಯರು

Kinnigoli-11051502 Kinnigoli-11051503

Comments

comments

Comments are closed.

Read previous post:
ಯಕ್ಷಗಾನ ಕಲಾರಂಗದಿಂದ ಗಣೇಶ ಕೊಲಕಾಡಿಗೆ ಮನೆ

ಮೂಲ್ಕಿ: ಖ್ಯಾತ ಪ್ರಸಂಗಕರ್ತ ಕಲಾವಿದ ಗಣೇಶ ಕೊಲಕಾಡಿಯವರಿಗೆ ಮೂಲ್ಕಿ ಅತಿಕಾರಿಬೆಟ್ಟುವಿನ ಮೊಯಿಲೊಟ್ಟುವಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಸುಮಾರು 7ಲಕ್ಷ ರೂ. ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿದ್ದು, ಮೇ.10ರಂದು ಅದರ...

Close