ವಿಧ್ಯಾರ್ಜನೆ ಬಹು ಮುಖ್ಯ

ಕಿನ್ನಿಗೋಳಿ: ಧಾರ್ಮಿಕತೆ ಮತ್ತು ಬೌದ್ಧಿಕ ಬೆಳವಣಿಗೆಗೆ ವಿಧ್ಯಾರ್ಜನೆ ಬಹು ಮುಖ್ಯ ಜೀವನದಲ್ಲಿ ಸಂಘ ಜೀವಿಯಾಗಿ ಬೆಳೆದು ಪರೋಪಕಾರಿ ಮನೋಭಾವ ಮೈಗೂಡಿಸಿದಾಗ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ನಿಡ್ಡೋಡಿ ಶ್ರೀ ನಾರಾಯಣಗುರು ಪ್ರಸಾದಿತ ಸಂಘದ ಆಶ್ರಯದಲ್ಲಿ ನಡೆದ ಗುರು ಮಂದಿರ ಮತ್ತು ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಜಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಯುವ ಸಬಲೀಕರಣ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಸೋಮನಾಥ ಶಾಂತಿ, ಜಿ. ಪಂ. ಸದಸ್ಯರಾದ ಜನಾರ್ದನ ಗೌಡ ಮುಚ್ಚೂರು, ಈಶ್ವರ್ ಕಟೀಲ್, ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್ ಇರ್ವತ್ತೂರು, ತುಳು ಸಾಹಿತ್ಯ ಆಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಸುರೇಶ್ ಬಿ. ಕೋಟ್ಯಾನ್ ಮುಂಬಯಿ, ಪಡುಮಲೆ ಕೋಟಿ ಚೆನ್ನಯ ಕ್ಷೇತ್ರದ ರವಿ ಪೂಜಾರಿ ಸೂರಿಂಜೆ, ಮುಂಬಯಿ ಸಮಿತಿಯ ವಿ. ಸಿ. ಸುವರ್ಣ, ಬಿಲ್ಲವರ ಎಕೀಕರಣ ಸಮಿತಿಯ ರವಿ ಪೂಜಾರಿ ಚಿಲಿಂಬಿ, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ವಾಮನ ಇಡ್ಯಾ, ಮತ್ತಿತರರು ಉಪಸ್ಥಿತರಿದ್ದರು.
ಸಂತೋಷ್ ಪೂಜಾರಿ ಪಡೀಲ್ ಸ್ವಾಗತಿಸಿದರು. ಉಪಾಧ್ಯಕ್ಷ ವಿನೋಧರ ಸುವರ್ಣ ಪ್ರಸ್ತಾವನೆಗೈದರು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-12051502 Kinnigoli-12051503

Comments

comments

Comments are closed.

Read previous post:
Kinnigoli-12051501
ಕಿನ್ನಿಗೋಳಿ ಉಜ್ವಲ ಸಂಘಟನೆ ವಾರ್ಷಿಕೋತ್ಸವ

ಕಿನ್ನಿಗೋಳಿ: ವಿದ್ಯಾರ್ಜನೆಯ ಮೂಲಕ ಸದೃಡರಾಗಿ ಕೀಳರಿಮೆ ಬಿಟ್ಟು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಂಗಳೂರು ಮಲ್ಲಿಕಟ್ಟೆ ಯುನಿಯನ್ ಬ್ಯಾಂಕ್ ಪ್ರಬಂಧಕಿ ಜೆಸಿಂತಾ ಮಥಾಯಸ್ ಹೇಳಿದರು. ಶನಿವಾರ ಕಿನ್ನಿಗೋಳಿ...

Close