ಗುತ್ತಕಾಡು ದ್ವಿಚಕ್ರ ವಾಹನಗಳಿಗೆ ಆಕಸ್ಮಿಕ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಚಿನ್ನಯ್ಯಬೆಟ್ಟು ಗುತ್ತಕಾಡುವಿನ ಮ್ಯಾಕ್ಸಿಂ ಡಿಸೋಜ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಮತ್ತು ಹೀರೊ ಮ್ಯಾಸ್ಟ್ರೊ ಸ್ಕೂಟರ್ ಹಾಗೂ ಮಕ್ಕಳ ಸೈಕಲಿಗೆ ಆಕಸ್ಮಿಕ ಬೆಂಕಿ ಬಿದ್ದು ವಾಹನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮುಂಜಾನೆ ಸುಮಾರು 3.30 ರ ಗಂಟೆಯ ಹೊತ್ತಿಗೆ ಮನೆಯವರಿಗೆ ಹೊರಗಿಂದ ಬೆಂಕಿಯ ಕೆನ್ನಾಲಿಗೆಯಲ್ಲಿ ವಾಹನಗಳು ಸುಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಹತ್ತಿರವಿದ್ದ ಮಾರುತಿ ಆಮ್ನಿ ಕಾರನ್ನು ಸ್ಥಳದಿಂದ ತೆರವುಗೊಳಿಸಿದರು ಕಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದ್ದು ಹತ್ತಿರವಿದ್ದ ಹೂವಿನ ಗಿಡಗಳು ಸುಟ್ಟುಹೋಗಿದ್ದು ಮಾತ್ರವಲ್ಲದೆ ಮನೆಯ ಕಿಟಕಿ ಗಾಜಿಗೆ ಹಾನಿಯಾಗಿದೆ, ವಾಹನಗಳನ್ನು ನಿಲ್ಲಿಸಿದ ಮೇಲ್ಭಾಗದ ತಾರಸಿಗೆ ಹಾನಿಯಾಗಿದೆ ಮುಲ್ಕಿ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Kinnigoli-12051504 Kinnigoli-12051505 Kinnigoli-12051506

Comments

comments

Comments are closed.

Read previous post:
Kinnigoli-12051502
ವಿಧ್ಯಾರ್ಜನೆ ಬಹು ಮುಖ್ಯ

ಕಿನ್ನಿಗೋಳಿ: ಧಾರ್ಮಿಕತೆ ಮತ್ತು ಬೌದ್ಧಿಕ ಬೆಳವಣಿಗೆಗೆ ವಿಧ್ಯಾರ್ಜನೆ ಬಹು ಮುಖ್ಯ ಜೀವನದಲ್ಲಿ ಸಂಘ ಜೀವಿಯಾಗಿ ಬೆಳೆದು ಪರೋಪಕಾರಿ ಮನೋಭಾವ ಮೈಗೂಡಿಸಿದಾಗ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಕೇರಳ...

Close