ಕಿನ್ನಿಗೋಳಿ ಉಜ್ವಲ ಸಂಘಟನೆ ವಾರ್ಷಿಕೋತ್ಸವ

ಕಿನ್ನಿಗೋಳಿ: ವಿದ್ಯಾರ್ಜನೆಯ ಮೂಲಕ ಸದೃಡರಾಗಿ ಕೀಳರಿಮೆ ಬಿಟ್ಟು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಂಗಳೂರು ಮಲ್ಲಿಕಟ್ಟೆ ಯುನಿಯನ್ ಬ್ಯಾಂಕ್ ಪ್ರಬಂಧಕಿ ಜೆಸಿಂತಾ ಮಥಾಯಸ್ ಹೇಳಿದರು.
ಶನಿವಾರ ಕಿನ್ನಿಗೋಳಿ ಚರ್ಚ್‌ನ ಸಭಾಭವನದಲ್ಲಿ ಕಿನ್ನಿಗೋಳಿ ಉಜ್ವಲ ಸ್ತ್ರೀ ಸಂಘಟನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸಂಟ್ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಭಗಿನಿ ಅಪ್ಲಿಪ್ತ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್ ಕ್ರಾಸ್ತ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಿನ್ಸಂಟ್ ಡಿಸೋಜ, ಕಾರ್ಯದರ್ಶಿ ರಾಬರ್ಟ್ ಲೋಬೋ, ಉಜ್ವಲ ಸಂಘಟನೆ ಅಧ್ಯಕ್ಷೆ ಲೂಸಿ ರೋಡ್ರಿಗಸ್, ಕಾರ್ಯದರ್ಶಿ ಮೇರಿ ಡಿಸೋಜ, ಸಚೇತಕಿ ಭಗಿನಿ ಜುಲಿಯಾನ ಮೋನಿಸ್ ಉಪಸ್ಥಿತರಿದ್ದರು. ಗ್ರೇಸಿ ರೋಡ್ರಿಗಸ್ ಸ್ವಾಗತಿಸಿದರು. ಮೆಲಿಟ ಡಿಸೋಜ ವಂದಿಸಿದರು. ಫಿಲೋಮಿನ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-12051501

Comments

comments

Comments are closed.

Read previous post:
Kinnigoli-11051504
ಮಸ್ಜಿದ್ ಅಧ್ಯಕ್ಷರಾಗಿ ಟಿ. ಮಯ್ಯದ್ದಿ ಪುನರಾಯ್ಕೆ

ಕಿನ್ನಿಗೋಳಿ:  ಪುನರೂರು ಮುಹಮ್ಮದೀಯ ಜುಮ್ಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಮೇ 8 ರಂದು ಸಭೆಯ ಅಧ್ಯಕ್ಷ ಇಬ್ರಾಹಿಂ ಪುನರೂರು ನೇತೃತ್ವದಲ್ಲಿ ನಡೆಯಿತು. ಮುಂದಿನ ಒಂದು ವರ್ಷಗಳಿಗನುಗುಣವಾಗಿ ಪದಾಧಿಕಾರಿಗಳನ್ನು...

Close