ಕಟೀಲು, ಪಿ.ಯು.ಸಿ ಪ್ರವೇಶ ಪತ್ರಕ್ಕಾಗಿ ಸರದಿ

ಕಿನ್ನಿಗೋಳಿ: ಎಸ್.ಎಸ್. ಎಲ್ ಸಿ ಫಲಿತಾಂಶ ಬಂದಿದ್ದೇ ತಡ ವಿದ್ಯಾರ್ಥಿಗಳು ಪ್ರಥಮ ಪಿ.ಯು.ಸಿ ಪ್ರವೇಶಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ನಿನ್ನೆ ಫಲಿತಾಂಶ ಅಂತರ್ಜಾಲದಲ್ಲಿ ಪ್ರಕಟವಾಗಿದ್ದು ಬುಧವಾರ ಪಿಯುಸಿ ಪ್ರವೇಶ ಪತ್ರಕ್ಕಾಗಿ ವಿದ್ಯಾರ್ಥಿಗಳು ಅಂತರ್ಜಾಲ ತಾಣದಲ್ಲಿ ಹುಡುಕಾಡಿದರೂ ಈ ವರ್ಷ ಪ್ರಯೋಜನವಾಗಿಲ್ಲ, ಪ್ರತೀವರ್ಷ ಅಂತರ್ಜಾಲದಲ್ಲಿ ಪ್ರವೇಶ ಪತ್ರಗಳು ಸಿಗುತ್ತಿದ್ದು ಈ ಬಾರಿ ಮಾತ್ರ ಇನ್ನೂ ಕೂಡ ಸಿಗದಿರುದು ಸಂಬಂಧಪಟ್ಟ ಇಲಾಖಾ ವೈಪಲ್ಯತೆಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣ ಪ್ರದೇಶವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪತ್ರಕ್ಕಾಗಿ ಬುಧವಾರ ಬೆಳ್ಳಿಗ್ಗೆಯಿಂದಲೇ ವಿದ್ಯಾರ್ಥಿಗಳ ಸರಸಿ ಸಾಲು ಕಂಡು ಬಂದಿದ್ದು 10 ಗಂಟೆಯಿಂದ 1 ಗಂಟೆವರೆಗೆ ಸುಮಾರು 400 ಪ್ರವೇಶ ಪತ್ರಗಳು ವಿತರಣೆಯಾಗಿದೆ. ಕಟೀಲು ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಕಲಾ ವಿಭಾಗದಲ್ಲಿ 160 ವಾಣಿಜ್ಯ ವಿಭಾಗದಲ್ಲಿ 160 ಮತ್ತು ವಿಜ್ಞಾನ ವಿಭಾಗದಲ್ಲಿ 80 ಸೀಟುಗಳು ಲಭ್ಯವಿದ್ದು, ಗ್ರಾಮೀಣ ಪ್ರದೇಶದಲ್ಲಿಯೇ ಬಹು ಬೇಡಿಕೆ ಕಾಲೇಜು ಇದಾಗಿದ್ದು ಉತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಪ್ರತೀ ವರ್ಷ 700 ಕ್ಕಿಂತಲೂ ಹೆಚ್ಚು ಪ್ರವೇಶ ಪತ್ರಗಳು ಬರುತ್ತಿದ್ದು ಮಾತ್ರವಲ್ಲದೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಪ್ರವೇಶ ಪತ್ರಗಳು ಬರುವ ಸಾದ್ಯತೆ ಇದೆ, ಪ್ರತೀವರ್ಷ ಉತ್ತಮ ಫಲಿತಾಂಶ ಬರುವುದು ಮಾತ್ರವಲ್ಲದೆ, ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ಪ್ರಾರಂಬಿಸುವ ಮುನ್ನವೇ ಈ ಕಟೀಲು ಶಾಲಾ ಕಾಲೇಜಿನಲ್ಲಿ ಬಿಸಿಯೂಟವನ್ನು ಪ್ರಾರಂಬಿಸಲಾಗಿತ್ತು. ಕಡಿಮೆ ಶುಲ್ಕ, ಗುಣಮಟ್ಟದ ಶಿಕ್ಷಣ, ಸಾಂಸ್ಕ್ರತಿಕ ಹಾಗೂ ಕ್ರೀಡೆಗೆ ಪ್ರೋತ್ಸಾಹ ಕೊಡುವ ಕಟೀಲು ಕಾಲೇಜಿನಲ್ಲಿ ಈ ಬಾರಿಯೂ ವಿದ್ಯಾರ್ಥಿಗಳು ಅವಕಾಶಕ್ಕಾಗಿ ಹಾತೊರಯುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಹಾಗೂ ಕರ್ನಾಟಕ ಸರಕಾರ ಈ ಕಾಲೇಜಿಗೆ ಹೆಚ್ಚಿನ ಸೀಟುಗಳನ್ನು ನೀಡಿದರೆ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

Kinnigoli-13051504

Comments

comments

Comments are closed.

Read previous post:
SSLC
ಕಿನ್ನಿಗೋಳಿ ಪರಿಸರದ ಎಸ್.ಎಸ್.ಎಲ್.ಸಿ ಫಲಿತಾಂಶ

ಕಿನ್ನಿಗೋಳಿ: ಕಮ್ಮಾಜೆ ಮೋರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ. 100 ಫಲಿತಾಂಶ ದಾಖಲಿಸಿದ್ದಾರೆ. ಎ+ 1, ಎ 8, ಬಿ+ 13, ಬಿ 17, ಸಿ+...

Close