ನೈತಿಕ ಧಾರ್ಮಿಕ ಶಿಕ್ಷಣ – ನಿರ್ಮಾಣ

ಕಿನ್ನಿಗೋಳಿ: ನೈತಿಕ ಧಾರ್ಮಿಕ ಶಿಕ್ಷಣದಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಶುಕ್ರವಾರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಪುನರೂರು ವಿಪ್ರಸಂಪದ ಹಾಗೂ ಪುನರೂರು ದೇವಳದ ಆಶ್ರಯದಲ್ಲಿ ನಡೆಯುವ ವೇದ ಪಾಠ ಶಿಬಿರದ ಸಮಾರೋಪ ಹಾಗೂ ಪುನರೂರು ವಿಪ್ರಸಂಪದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ಅನ್ಯ ಧರ್ಮದವರಲ್ಲಿ ಧರ್ಮದ ಬಗ್ಗೆ ಎಳವೆಯಲ್ಲಿಯೇ ಸಂಸ್ಕಾರಯುತ ಪಾಠ ಪ್ರವಚನಗಳನ್ನು ನೀಡಲಾಗುತ್ತಿದ್ದು ನಮ್ಮಲ್ಲಿಯು ಕೂಡ ಶಾಲೆಯ ಪಾಠದ ಜೊತೆ ಇಂತಹ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.
ಈ ಸಂದರ್ಭ ಭರತನಾಟ್ಯದ ಯುವ ಪ್ರತಿಭೆ ಅಪೂರ್ವ ರಾವ್ ಅವರನ್ನು ಸನ್ಮಾನಿಸಲಾಯಿತು. ಶಿಬಿರದ ಗುರುಗಳಾದ ಸುದರ್ಶನ್ ಭಟ್, ವಿನಾಯಕ್ ಭಟ್ ಅವರನ್ನು ಗೌರವಿಸಲಾಯಿತು.
ಪುನರೂರು ದೇವಳದ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ವಿಪ್ರ ಸಂಪದದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಸುಧಾಕರ ರಾವ್, ದೇವಪ್ರಸಾದ್ ಪುನರೂರು, ಭಾರತಿ ರಾಮಕೃಷ್ಣ ರಾವ್, ಜನಕ ರಾಜ್ ಉಪಸ್ಥಿತರಿದ್ದರು.
ವಿಪ್ರ ಸಂಪದದ ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್ ಸ್ವಾಗತಿಸಿ, ವಿಶ್ವನಾಥ ರಾವ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಸುಧಾಕರ ರಾವ್ ವಾರ್ಷಿಕ ವರದಿ ನೀಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-16051511 Kinnigoli-16051512 Kinnigoli-16051513

Comments

comments

Comments are closed.

Read previous post:
Kinnigoli-16051506
ಖಂಡಿಗೆ ಮೀನು ಹಿಡಿಯುವ ಜಾತ್ರೆ

 ಪಾವಂಜೆ: ವೃಷಭ ಸಂಕ್ರಮಣದಂದು ಖಂಡಿಗೆ ಶ್ರೀ ಧರ್ಮರಸು ಕ್ಷೇತ್ರದ ಜಾತ್ರೆ ಹಾಗೂ ಮೀನು ಹಿಡಿಯುವ ಜಾತ್ರೆ ನಡೆಯಿತು.

Close