ಕ್ರೀಯಾಯೋಜನೆ ಮಾಹಿತಿ ಶಿಬಿರ

ಮೂಲ್ಕಿ: ಸಮಾಜದ ಉನ್ನತಿಗೆ ಶಿಕ್ಷಣ ಬಹಳ ಪ್ರಭಾವಿ ಅಸ್ತ್ರವಾಗಿದ್ದು ಯುವ ಸಮಾಜ ಉನ್ನತ ಶಿಕ್ಷಣ ಗಳಿಕೆಯ ಮೂಲಕ ಸ್ವಾವಲಂಭಿಗಳಾಗಿ ತಮ್ಮ ಕುಟುಂಬ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಮಾಜ ಸೇವಕ ನಿವೃತ್ತ ಇಂಜಿನಿಯರ್ ಬಿ.ಟಿ.ಸಾಲ್ಯಾನ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾಸಂಘದಲ್ಲಿ ಭಾನುವಾರ ಶ್ರೀ ನಾಯಾಯಣ ಗುರು ಕ್ರೀಯಾಯೋಜನೆ ಸದಸ್ಯರು ಹಾಗೂ ಅವರ ಪೋಷಕರಿಗೆ ನಡೆದ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಹಿರಿಯರು ಸಂಘಟಿತರಾಗಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಆರ್ಥಿಕ ಬಡವರ ಉದ್ದಾರಕ್ಕಾಗಿ ಶ್ರಮಿಸಿರುವುದನ್ನು ಮಾರ್ಗದರ್ಶಿಯಾಗಿಸಿ ಯುವ ಸಮಾಜ ತಾವು ಉನ್ನತಿಗೊಂಡು ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಅನಸೂಯ ಸಾಲ್ಯಾನ್ ಮಾತನಾಡಿ, ಇಂದು ಯುವ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದರೊಂದಿಗೆ ದುಶ್ಚಟಗಳ ವಿರುದ್ದ ಹೋರಾಡುವುದು ಬಹಳ ಅಗತ್ಯವಿದೆ ದುಶ್ಚಟ ಮುಕ್ತ ಸಮಾಜ ದಿಂದ ಮಾತ್ರ ಪ್ರದೇಶದ ಅಭ್ಯುದಯ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ವಹಿಸಿದ್ದರು. ಮಹಿಳಾ ಮಂಡಳದ ಅಧ್ಯಕ್ಷೆ ಸರಸ್ವತಿ ರಾಘು ಸುವರ್ಣ, ಕಾರ್ಯದರ್ಶಿ ರಮೇಶ್ ಕೊಕ್ಕರಕಲ್, ಕೋಶಾಧಿಕಾರಿ ಪ್ರಕಾಶ ಸುವರ್ಣ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯ ವಾಮನ್ ಕೋಟ್ಯಾನ್ ನಡಿಕುದ್ರು ನಿರೂಪಿಸಿದರು.

Bhagyavan Sanil

Mulkii-18051502

Comments

comments

Comments are closed.

Read previous post:
Kinnigoli-16051512
ನೈತಿಕ ಧಾರ್ಮಿಕ ಶಿಕ್ಷಣ – ನಿರ್ಮಾಣ

ಕಿನ್ನಿಗೋಳಿ: ನೈತಿಕ ಧಾರ್ಮಿಕ ಶಿಕ್ಷಣದಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಶುಕ್ರವಾರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಪುನರೂರು...

Close