ಕೆ. ಎಸ್. ರಾವ್ ನಗರ ತಂಡಕ್ಕೆ ಪ್ರಶಸ್ತಿ

ಕಿನ್ನಿಗೋಳಿ: ಅಂಗರಗುಡ್ಡೆ -ರಾಮನಗರ ಶ್ರೀ ರಾಮ ಮಂದಿರದ ಆಶ್ರಯದಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕೆ. ಎಸ್. ರಾವ್ ನಗರದ ತಂಡ ಪ್ರಥಮ ಹಾಗೂ ಮುಲ್ಕಿ ಫ್ರೆಂಡ್ಸ್ ಕ್ಲಬ್ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡವು, ಶಾನ್ ಉತ್ತಮ ಎಸೆತಗಾರ, ಕಲಂದರ್ ಪಂದ್ಯ ಶ್ರೇಷ್ಟ , ದೀಪೇಶ್ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದು ಕೊಂಡರು.
ಈ ಸಂದರ್ಭ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣವನ್ನು ನೇಪಾಲದ ಸಂತ್ರಸ್ತರ ಪ್ರಧಾನ ಮಂತ್ರಿ ನಿಧಿಗೆ 26,500 ರೂ ಡಿ. ಡಿಯನ್ನು ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌ರವರಿಗೆ ಹಸ್ತಾಂತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿಠಲ ಆಚಾರ್ಯ ಮಕ್ಕಳಿಗೆ ಶಿಕ್ಷಣಕ್ಕೆ 10,000 ಧನಸಹಾಯ ನೀಡಲಾಯಿತು. ಕೆರೆಕಾಡಿನ ಗೀತಾ ಆಚಾರ್ಯ ಅವರಿಗೆ ಮನೆ ಕಟ್ಟಲು 5,000 ನಗದು ಹಣ ನೀಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಶ ಸರಾಫ್ ಐಕಳ ಹಾಗೂ ಮೋಹನ್ ಗುಜರನ್ ಅವರನ್ನು ಗೌರವಿಸಲಾಯಿತು. ಸಮಾಜ ಸೇವಕ ಜಗದೀಶ ಅಥಿಕಾರಿ, ಧಾನಿಗಳಾದ ಜಯರಾಮ ರಾವ್, ಅವಿನಾಶ್ ಶೆಟ್ಟಿ ಬರ್ಕೆ, ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿಯ ನಿಸಾರ್ ಅಹಮ್ಮದ್, ಉದ್ಯಮಿ ರಾಜೇಶ್ ಕೆಂಚನಕೆರೆ, ಶ್ರೀ ರಾಮ ಮಂದಿರದ ಅಧ್ಯಕ್ಷ ಸತೀಶ್ ಪೂಜಾರಿ, ಮೂಕಾಂಬಿಕಾ ಸ್ವಸಹಾಯ ಸಂಘದ ಸತೀಶ್ ಸುವರ್ಣ, ತಾರಾನಾಥ ದೇವಾಡಿಗ, ಕೃಷ್ಣ ಶೆಟ್ಟಿಗಾರ್ ಉಪಸ್ಥಿತರಿದ್ದರು.

Kinnigoli-19051501

Comments

comments

Comments are closed.

Read previous post:
Mulkii-18051502
ಕ್ರೀಯಾಯೋಜನೆ ಮಾಹಿತಿ ಶಿಬಿರ

ಮೂಲ್ಕಿ: ಸಮಾಜದ ಉನ್ನತಿಗೆ ಶಿಕ್ಷಣ ಬಹಳ ಪ್ರಭಾವಿ ಅಸ್ತ್ರವಾಗಿದ್ದು ಯುವ ಸಮಾಜ ಉನ್ನತ ಶಿಕ್ಷಣ ಗಳಿಕೆಯ ಮೂಲಕ ಸ್ವಾವಲಂಭಿಗಳಾಗಿ ತಮ್ಮ ಕುಟುಂಬ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ...

Close