ಶಿಕ್ಷಣಕ್ಕೆ ಪ್ರೋತ್ಸಾಹ ಶ್ಲಾಘನೀಯ

ಮೂಲ್ಕಿ: ಇಂದಿನ ಯುಗದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವುದು ಅಗತ್ಯವಾಗಿದೆ. ಕಾರ‍್ನಾಡು ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘ ಇಂತಹ ಕಾರ‍್ಯಗಳಿಗೆ ಪ್ರೋತ್ಸಾಹ ಅಭಿನಂದನೀಯ ಇದು ರಿಕ್ಷಾ ಚಾಲಕರ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಹೇಳಿದರು. ಅವರು ಕಾರ‍್ನಾಡು ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ ಮಾತನಾಡಿ ಶಿಕ್ಷಣಕ್ಕೆ ಶ್ರೀಮಂತರು ಬಡವರು ಎಂಬುದು ಇಲ್ಲ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುವುದೇ ಅಲ್ಲದೆ ಕಲಿಯುವಿಕೆಯಲ್ಲಿ ಅದರ ಸದುಪಯೋಗವಾಗುವಂತೆ ನಿಗಾ ವಹಿಸಬೇಕೆಂದು ಕಿವಿಮಾತು ಹೇಳಿದರು.ವೇದಿಕೆಯಲ್ಲಿ ಕಾರ‍್ನಾಡು ನೂರ್ ಮಸೀದಿಯ ಧರ್ಮಗುರುಗಳಾದ ಮೊಹಮದ್ ಮುಸ್ತಾಫಾ ಹನೀಫಿ,ಕಾರ‍್ನಾಡು ಯುಬಿಎಂಸಿ ಶಾಲೆಯ ಮುಖ್ಯೋಪಾದ್ಯಾಯಿನಿ ಶ್ರೀಮತಿ ಉಮಾವತಿ,ಮೂಲ್ಕಿ ನಗರ ಪಂಚಾಯತಿ ಸದಸ್ಯ ಪುತ್ತುಬಾವ,ಕಾರ‍್ನಾಡು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಉಪೇಂದ್ರ ಆಚಾರ‍್ಯ ,ಕಾರ‍್ಯದರ್ಶಿಜುಬೇರ್,ಜತೆ ಕಾರ‍್ಯದರ್ಶಿ ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.ಗೋಪಾಲ ಶಿಮಂತೂರು ಸ್ವಾಗತಿಸಿ ಕಾರ‍್ಯಕ್ರಮ ನಿರೂಪಿಸಿ ವಂದಿಸಿದರು.

Puneethakrishna

Mulki-20051501

 

Comments

comments

Comments are closed.

Read previous post:
Kinnigoli-19051501
ಕೆ. ಎಸ್. ರಾವ್ ನಗರ ತಂಡಕ್ಕೆ ಪ್ರಶಸ್ತಿ

ಕಿನ್ನಿಗೋಳಿ: ಅಂಗರಗುಡ್ಡೆ -ರಾಮನಗರ ಶ್ರೀ ರಾಮ ಮಂದಿರದ ಆಶ್ರಯದಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕೆ. ಎಸ್. ರಾವ್ ನಗರದ ತಂಡ ಪ್ರಥಮ ಹಾಗೂ ಮುಲ್ಕಿ ಫ್ರೆಂಡ್ಸ್ ಕ್ಲಬ್...

Close