ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

ಕಿನ್ನಿಗೋಳಿ: ನಮ್ಮನ್ನು ಸಾಕಿ ಬೆಳೆಸಿದ ಹೆತ್ತವರನ್ನು ಹಾಗೂ ಕಲಿಸಿದ ಗುರುಗಳನ್ನು ಮರೆಯಬಾರದು ಎಂದು ದ.ಕ. ಜಿಲ್ಲಾ ಮಹಿಳಾ ಹಾಗೂ ಮಕ್ಕಳ ವೇದಿಕೆಯ ಅಧ್ಯಕ್ಷೆ ನಂದಾ ಪಾಯಸ್ ಹೇಳಿದರು.
ಕಿನ್ನಿಗೋಳಿ ಕೆ.ಐ.ಸಿ.ಟಿ. ಹಾಗೂ ಎಂ.ಸಿ.ಟಿ.ಸಿ. ತಾಂತ್ರಿಕ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಮಕ್ಕಳ ಹಕ್ಕುಗಳ ಕಾಯ್ದೆ ಹಾಗೂ ಮಕ್ಕಳಿಗಿರುವ ಸರ್ಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ಕೆ.ಐ.ಸಿ.ಟಿ. ಹಾಗೂ ಎಂ.ಸಿ.ಟಿ.ಸಿ. ಸಂಸ್ಥೆಯ ಪ್ರಿನ್ಸಿಪಾಲ್ ನವೀನ್ ವೈ. ಹಾಗೂ ನಿರ್ದೇಶಕ ಹರ್ಷದ್ ಎಂ.ಎ. ಉಪಸ್ಥಿತರಿದ್ದರು. ಶಿಕ್ಷಕಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು.

Kinnigoli-22051501

Comments

comments

Comments are closed.

Read previous post:
Mulki-20051501
ಶಿಕ್ಷಣಕ್ಕೆ ಪ್ರೋತ್ಸಾಹ ಶ್ಲಾಘನೀಯ

ಮೂಲ್ಕಿ: ಇಂದಿನ ಯುಗದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವುದು ಅಗತ್ಯವಾಗಿದೆ. ಕಾರ‍್ನಾಡು ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘ ಇಂತಹ ಕಾರ‍್ಯಗಳಿಗೆ ಪ್ರೋತ್ಸಾಹ ಅಭಿನಂದನೀಯ ಇದು ರಿಕ್ಷಾ ಚಾಲಕರ...

Close