ಶನೀಶ್ವರ ಪೂಜೆ ಪದ್ಮನೂರು ಧಾರ್ಮಿಕ ಸಭೆ , ಸಮ್ಮಾನ

ಕಿನ್ನಿಗೋಳಿ: ಆಧುನಿಕತೆಯ ಧಾವಂತದಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಸಂಪೂರ್ಣ ಮಾರು ಹೋಗುವ ಮುನ್ನ ಸನಾತನ ಸಂಸ್ಕೃತಿ ಆಚರಣೆ, ಪೂಜೆ ಧರ್ಮ ಜಾಗೃತಿ ಮೂಡಿಸುವ ಕೆಲಸ ಅಗತ್ಯ ಆಗಬೇಕಾಗಿದೆ ಎಂದು ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿ ಪದ್ಮನೂರು ವತಿಯಿಂದ ಪದ್ಮನೂರಿನ ಅಶ್ವತ್ಥ ಕಟ್ಟೆಯಲ್ಲಿ ಶ್ರೀ ಶನೀಶ್ವರ ಭಕ್ತವೃಂದ ಪಕ್ಷಿಕೆರೆಯ ಕಲಾವಿದರಿಂದ ಯಕ್ಷಗಾನ ತಾಳ ಮದ್ದಲೆ ಶೈಲಿಯಲ್ಲಿ ನಡೆದ ಶ್ರೀ ಶನೀಶ್ವರ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ಸಾಧಕರಾದ ಶಂಕರ ಶೆಟ್ಟಿ ಬರ್ಕೆ, ಅಚ್ಚುತ ಕುಡ್ವ ಪದ್ಮನೂರು, ರಾಘು ಭಂಡಾರಿ, ಶ್ರೀನಿವಾಸ ಶೆಟ್ಟಿಗಾರ್, ಪದ್ಮನಾಭ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಕದ್ರಿ ನವನೀತ ಶೆಟ್ಟಿ ಅಧ್ಯಕ್ಷತೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ದುಬಾಯಿ ಉದ್ಯಮಿ ಪದ್ಮರಾಜ್ ಎಕ್ಕಾರು, ಸಂಘಟಕ ಎಂ. ಪ್ರಥ್ವಿರಾಜ್ ಆಚಾರ್ಯ, ಸುಧಾಕರ ತುಂಬೆ, ಬಯಲಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಮತ್ತಿರರಿದ್ದರು. ಕೆ. ಬಿ. ಸುರೇಶ್ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25051502

Comments

comments

Comments are closed.

Read previous post:
Kinnigoli-25051501
ಕಿನ್ನಿಗೋಳಿ ಯಕ್ಷಲಹರಿಯಿಂದ ಸಮ್ಮಾನ

ಕಿನ್ನಿಗೋಳಿ: ಯಕ್ಷಲಹರಿ ಕಿನ್ನಿಗೋಳಿ ಇದರ ರಜತ ವರ್ಷ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ವಸಂತ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಯಕ್ಷಲಹರಿ ಅಧ್ಯಕ್ಷ ಇ....

Close