ಉಳೆಪಾಡಿ – ಸಾಮೂಹಿಕ ವಿವಾಹ

ಕಿನ್ನಿಗೋಳಿ: ಧಾರ್ಮಿಕ ಕ್ಷೇತ್ರಗಳು ಸಮಾಜಕ್ಕೆ ಉಪಯೋಗವಾಗುವಂತಹ ಸಂಸ್ಕಾರಯುತ ಧಾರ್ಮಿಕ ಚಿಂತನಾ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹದಂತಹ ಪುಣ್ಯಪ್ರದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮಾಜದ ಅಭಿವೃದ್ಧಿ ಏಳಿಗೆ ಸಾಧ್ಯ ಎಂದು ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಹೇಳಿದರು.
ಭಾನುವಾರ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ನಡೆದ ಪಂಚಮ ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ೫ ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಯಿತು.
ಮೂಲ್ಕಿ ಸೀಮೆಯ ಅರಸರಾದ ಕೆ. ದುಗ್ಗಣ್ಣ ಸಾವಂತರರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸುಬ್ರಹ್ಮಣ್ಯ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ಕೃಷ್ಣ ಮೋಹನ್ , ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಮಂಗಳೂರು ಹಳೇಕೋಟೆ ದೇವಳದ ಧರ್ಮದರ್ಶಿ ವನಮಾಲಾ , ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದ ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ , ಬಾಬು, ಮೆಸ್ಕಾಂ ಅಧಿಕಾರಿ ಸುಧಾಕರ್, ಶ್ರೀಮತಿ ಮೋಹನ್‌ದಾಸ್ ಉಪಸ್ಥಿತರಿದ್ದರು.
ಮುಂಬಯಿನ ಅಧ್ಯಾತ್ಮಿಕ ಬರಹಗಾರ ಶಂಭು ಕೆ. ಸನಿಲ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ದೇವಳದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25051503

Comments

comments

Comments are closed.

Read previous post:
Kinnigoli-25051502
ಶನೀಶ್ವರ ಪೂಜೆ ಪದ್ಮನೂರು ಧಾರ್ಮಿಕ ಸಭೆ , ಸಮ್ಮಾನ

ಕಿನ್ನಿಗೋಳಿ: ಆಧುನಿಕತೆಯ ಧಾವಂತದಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಸಂಪೂರ್ಣ ಮಾರು ಹೋಗುವ ಮುನ್ನ ಸನಾತನ ಸಂಸ್ಕೃತಿ ಆಚರಣೆ, ಪೂಜೆ ಧರ್ಮ ಜಾಗೃತಿ ಮೂಡಿಸುವ ಕೆಲಸ ಅಗತ್ಯ ಆಗಬೇಕಾಗಿದೆ...

Close