ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಮುಕ್ತಾಯ 

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ವರ್ಷದ ತಿರುಗಾಟ ಕೊನೆಗೊಂಡಿತು, ದೇವಳದ ರಥಬೀದಿಯಲ್ಲಿ  ಆರು ರಂಗಸ್ಥಳವನ್ನು ನಿರ್ಮಿಸಿ ಇದರಲ್ಲಿ ಯಕ್ಷಗಾನದ ಪೂರ್ವ ರಂಗವು ಪದ್ದತಿಯಂತೆ ಆರೂ ರಂಗಸ್ಥಳದಲ್ಲಿ ನಡೇದವು ನಂತರ ಒಂದೇ ರಂಗಸ್ಥಳದಲ್ಲಿ  ಆರೂ ಮೇಳಗಳ ಕಲಾವಿದರು ಬಾಗವಹಿಸಿ ತಮ್ಮ ಸೇವೆ ಸಲ್ಲಿಸಿದರು, 194 ದಿನಗಳಲ್ಲಿ ಆರು ಮೇಳಗಳು ಒಟ್ಟು 1164 ಪ್ರದರ್ಶನಗಳನ್ನು ನೀಡಿದೆ, ಅತೀ ಹೆಚ್ಚು ದೇವಿ ಮಹತ್ಮೆ ಪ್ರಸಂಗವನ್ನು ಆಡಿ ತೋರಿಸಿದ್ದು  ಒಟ್ಟು 564 ಪ್ರದರ್ಶನಗಳನ್ನು ನೀಡಿದೆ, ಉಳಿದಂತೆ ಅನೇಕ ಪೌರಾಣಿಕ ಪ್ರಸಂಗವನ್ನು ಆಡಿ ತೋರಿಸಿದ್ದಾರೆ, ಒಂದು ಮೇಳಕ್ಕಾಗುವಷ್ಟು ವರ್ಷಂಪ್ರತೀ ಆಟ ಮಾಡಿಸುವವರಿದ್ದು, ಆರು ಮೇಳಗಳಿಗೆ ಸುಮಾರು 15 ವರ್ಷಕ್ಕಾಗುವಷ್ಟು ಆಟಗಳು ಬುಕಿಂಗ್ ಇದ್ದು, ಈಗಲೂ ಪ್ರತೀದಿನ ಬುಕಿಂಗ್ ನಡೆಯುತ್ತಿದೆ. ಪ್ರತೀವರ್ಷ ಆಟಮಾಡಿಸುವ ಬುಂಕಿಂಗ್ ತತ್ಕಲಿಕವಾಗಿ ನಿಲ್ಲಿಸಲಾಗಿದೆ, ಸುಮಾರು 250 ರಷ್ಟೂ ಕಲಾವಿದರು ಸೇವೆ ಸಲ್ಲಿಸುತ್ತಿದ್ದು, ಹಲವಾರು ಅತ್ಯಂತ ಬೇಡಿಕೆಯ ಕಲಾವಿದರೂ ಇದ್ದಾರೆ ಮಾತ್ರವಲ್ಲದೆ ಈ ಕಲಾವಿದರು ದೇಶವಿದೇಶಗಳಲ್ಲಿ ಕರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ, ಮುಂದಿನ ವರ್ಷ ನವಂಬರ್ 18 ಕ್ಕೆ ಮೇಳ ಹೊರಡಲಿದೆ.  ಒಟ್ಟಿನಲ್ಲಿ ಅತ್ಯಂತ ಕಾರಣಿಕದ ಕಟೀಲು ದುರ್ಗೆ 6 ಯಕ್ಷಗಾನ ಮೇಳವನ್ನು ಹೊಂದಿದ ಎಕೈಕ ಮೇಳವಾಗಿದೆ.

Nishanth Shetty

Kateel-27051501 Kateel-27051502 Kateel-27051503 Kateel-27051504

 

Comments

comments

Comments are closed.