ಏಳಿಂಜೆ ನಕಲಿ ಮತದಾನ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮತ್ತು ಕೊಂಡೆಮೂಲ ಗ್ರಾಮ ಪಂಚಾಯಿತಿ ಎಂದು ಇಬ್ಬಾಗವಾಗಿದೆ. ಹಾಗಾಗಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಚಿಕಾಡು ಪರಿಸರದ ಮೂರು ಮನೆಗಳು (ಮನೆ. ನಂ. 11-35-1, 11-37-2, 11-27-3) ಎರಡು ವಾಡ್‌ಗಳಲ್ಲಿ ಹಂಚಿ ಹೋಗಿದೆ. ಕಳೆದ ಪಂಚಾಯಿತಿ ಚುನಾವಣೆ ಸಂದರ್ಭ ಮೆನ್ನಬೆಟ್ಟು-೩ನೇ ವಾರ್ಡಿನಲ್ಲಿ ಹೆಸರಿತ್ತು. ಆದರೆ ಈ ಸಲದ ಚುನಾವಣೆಯಲ್ಲಿ ಮುಂಚಿಕಾಡುವಿನ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಕೆಲವರಿಗೆ ಮೆನ್ನಬೆಟ್ಟು-3 ವಾರ್ಡ್ ಮತ್ತು ಉಳಿದವರಿಗೆ ಮೆನ್ನಬೆಟ್ಟು-4 ವಾರ್ಡ್ ಎಂದು ಮತದಾರ ಪಟ್ಟಿಯಲ್ಲಿ ನಮೂದಿಸಲಾಗಿದೆ. ಮನೆ ನಂಬ್ರ ಮತ್ತು ವಿಳಾಸ ಒಂದೇ ಆಗಿದ್ದರೂ ಮನೆಯವರು ಎರಡು ವಾರ್ಡ್‌ಗಳಿಗೆ ಹಂಚಿ ಹೋಗಿದ್ದು ಸಂಬಂಧ ಪಟ್ಟ ಇಲಾಖೆಯ ದಿವ್ಯ ನಿರ್ಲಕ್ಷ ಕಂಡುಬಂದಿದೆ.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಕಿನ್ನಿಗೋಳಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ಸಿಸಿ ಕ್ಯಾಮರ ಅಳವಡಿಸಿದ್ದು ಜನರಲ್ಲಿ ಸೋಜಿಗ ಉಂಟುಮಾಡಿದೆ. ಆದರೆ ಈ ಎರಡು ಕಡೆಗಳಲ್ಲಿ ಯಾವ ಪ್ರಕರಣಗಳು ನಡೆದಿಲ್ಲ.
ಹೊಸದಾಗಿ ಆರಂಭಗೊಂಡ ಕೊಂಡೆಮೂಲ ಗ್ರಾಮ ಪಂಚಾಯಿತಿಯ ನಡುಗೋಡು ವಾರ್ಡ್‌ನಲ್ಲಿ ಮತಪತ್ರಗಳು ತಪ್ಪಾಗಿ ಮುದ್ರಣ ಗೊಂಡಿದ್ದು ಗುರುವಾರ ಸಂಜೆಯ ಹೊತ್ತಿಗೆ ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ಬಂದು ಶುಕ್ರವಾರ ಬೆಳಿಗ್ಗೆ ಮತದಾನ ಆರಂಭವಾಗುವ ಮುಂಚೆ ಮರು ಮುದ್ರಿಸಿದಂತಹ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ತಾಲೂಕಿನಲ್ಲಿ ಸುಮಾರು 44 ಕಡೆಗಳಲ್ಲಿ ಈ ರೀತಿಯ ಅವಾಂತರ ನಡೆದಿದೆ ಎನ್ನಲಾಗಿದೆ.
ಮಧ್ಯಹ್ನ 2.45ರ ಹೊತ್ತಿಗೆ ಜೋರಾಗಿ ಸುರಿದ ಮಳೆಗೆ ಕಿನ್ನಿಗೋಳಿ ಸೈಂಟ್ ಮೇರಿಸ್ ಶಾಲೆ ಮತ್ತು ಲಿಟ್ಲ್ ಫ್ಲವರ್ ಶಾಲೆಯ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಆಸರೆಗಾಗಿ ಓಡುತ್ತಿರುವ ದೃಶ್ಯ ಕಂಡು ಬಂತು. ಆದರೆ ಮತದಾನ ಮಾಡುವವರ ಸಂಖ್ಯೆ ಕಡಿಮೆ ಇದ್ದು ಕಾರ್ಯಕರ್ತರ ಸಂಖ್ಯೆ ಅಧಿಕವಾಗಿ ಕಂಡು ಬರುತ್ತಿತ್ತು.

Kinnigoli-29051501

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದ್ಮನೂರು ಮತಗಟ್ಟೆಯಲ್ಲಿ ವಯೋವೃದ್ಧರನ್ನು ಮತದಾನಕ್ಕಾಗಿ ಹೊತ್ತೋಯ್ಯುತ್ತಿರುವುದು.

Kinnigoli-29051502

ಏಳಿಂಜೆ ನಕಲಿ ಮತದಾನ
ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಲಿಟ್ಲ್ ಫ್ಲವರ್ ಶಾಲೆಯ ಮತಗಟ್ಟೆಯಲ್ಲಿ ಲಕ್ಷ್ಮೀ ಎಂಬುವವರ ಹೆಸರಿನಲ್ಲಿ ಬೇರೆ ಯಾರೋ ಮತ ಚಲಾಯಿಸಿ ಹೋಗಿದ್ದು ಅಸಲಿ ಮತದಾರರಾದ ಲಕ್ಷ್ಮೀ ಅವರು ಸಂಜೆ ಮತ ಚಲಾಯಿಸಲು ಬಂದಾಗ ನಕಲಿ ಮತದಾನ ಬೆಳಕಿಗೆ ಬಂದಿತ್ತು. ಬಳಿಕ ಮತಗಟ್ಟೆ ಅಧಿಕಾರಿ ಅಸಲಿ ಮತದಾರರೆಂದು ಖಚಿತಪಡಿಸಿ ನಂತರ ಟೆಂಡರ್ ಮತದಾನದಕ್ಕೆ ಅವಕಾಶ ಮಾಡಿಕೊಡಲಾಯಿತು.

Comments

comments

Comments are closed.

Read previous post:
29KinniAakansha
ಸಿಬಿಎಸ್‌ಇ 10ನೇ ತರಗತಿ- ಶೇ100 ಫಲಿತಾಂಶ

ಕಿನ್ನಿಗೋಳಿ: ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ತೋಕೂರು ಡಾ. ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲಮಾಧ್ಯಮ ಪ್ರೌಢಶಾಲೆ 33 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಶೇ.100 ಫಲಿತಾಂಶ ಪಡೆದಿದೆ. 6 ವಿದ್ಯಾರ್ಥಿಗಳು 10...

Close