ಮೂಲ್ಕಿ: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು

ಮೂಲ್ಕಿ: ಸಮಾಜಿಕ ಚಿಂತನಾ ರಹಿತ ಶಿಕ್ಷಣ ಪದ್ದತಿಯಿಂದಾಗಿ ಯುವ ಸಮಾಜ ಸಂಸ್ಕಾರ ಮತ್ತು ಪೂರ್ವಜರ ಇತಿಹಾಸದ ಬಗ್ಗೆ ವಿಮುಖರಾಗುತ್ತಿರುವುದರಿಂದ ಸಮಾಜ ಸೇವಾ ಸಂಸ್ಥೆಗಳು ಮಕ್ಕಳಿಗೆ ಪೂರ್ವ ಇತಿಹಾಸದ ಬಗ್ಗೆ ಉತ್ತಮ ತರಬೇತಿ ನೀಡುವುದು ಬಹಳ ಅಗತ್ಯ ಎಂದು ಬೆಂಗಳೂರು ವಕೀಲ ಹಾಗೂ ಅಂಕಣಗಾರ ನವನೀತ್ ಹಿಂಗಾನಿ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶನಿವಾರ ಶ್ರೀ ನಾರಾಯಣ ಗುರು ಕ್ರಿಯಾ ಸಮಿತಿಯ ಮೂರರಿಂದ ಹತ್ತನೇ ತರಗತಿಯ ಮುನ್ನೂರು ವಿದ್ಯಾರ್ಥಿಗಳಿಗೆ ಸುಮಾರು ಅರ‍್ವತ್ತು ಸಾವಿರ ರೂ ವೆಚ್ಚದಲ್ಲಿ ನಡೆದ ಪುಸ್ತಕ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಪೌಢ ಸ್ಥಿತಿಗೆ ಬರುವ ಸಂದರ್ಭ ಪರಿಸರ ಮತ್ತು ಸ್ನೇಹಿತರ ಪ್ರಭಾವಕ್ಕೆ ಒಳಗಾಗಿ ದುಶ್ಚಟಗಳ ದಾಸರಾಗಿ ತನ್ನತನ ಕಳೆದುಕೊಳ್ಳುವ ಈ ಸಂದರ್ಭದಲ್ಲಿ ಅವರಿಗೆ ಸಮಾಜ ಸಂಘಟನೆಗಳು ಉತ್ತಮ ದಾರಿ ತೋರಿಸುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ವಹಿಸಿದ್ದರು.
ಸಂಘದ ಕಾರ್ಯದರ್ಶಿ ರಮೇಶ್ ಕೋಕ್ಕರಕಲ್, ಖಜಾಂಜಿ ಪ್ರಕಾಶ್ ಸುವರ್ಣ,ಮಂಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ರಾಘು ಸುವರ್ಣ,ಸೇವಾದಳದ ಅಧ್ಯಕ್ಷ ಸತೀಶ್ ಅಂಚನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಹರಿಶ್ಚಂದ್ರ.ಪಿ.ಸಾಲ್ಯಾನ್ ಸ್ವಾಗತಿಸಿದರು.ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು. ವಾಮನ್ ಕೋಟ್ಯಾನ್ ನಡಿಕುದ್ರು ವಂದಿಸಿದರು.

Bhagyavan Sanil 

Mulki-01061501

Comments

comments

Comments are closed.

Read previous post:
Kinnigoli-29051502
ಏಳಿಂಜೆ ನಕಲಿ ಮತದಾನ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮತ್ತು ಕೊಂಡೆಮೂಲ ಗ್ರಾಮ ಪಂಚಾಯಿತಿ ಎಂದು ಇಬ್ಬಾಗವಾಗಿದೆ. ಹಾಗಾಗಿ ಮೆನ್ನಬೆಟ್ಟು ಗ್ರಾಮ...

Close