ಜೀವನದಲ್ಲಿ ಸಮಾಜಮುಖಿ ಚಿಂತನೆ ಅಗತ್ಯ

ಮೂಲ್ಕಿ: ಮನುಷ್ಯನ ಜನ್ಮದಲ್ಲಿ ತಾಯಿಯ ಋಣ ದೊಡ್ಡದು. ಅದು ಜೀವನದಲ್ಲಿ ಮರೆಯಲಾಗದ ವಿದ್ಯೆ. ಜೀವನದಲ್ಲಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು ಎಲ್ಲರೊಡನೆ ದಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬಾಳುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಉಡುಪಿ ಅಷ್ಟಮಠಾಧೀಶರಲ್ಲೊಬ್ಬರಾದ ಸೋದೆ ಮಠಾದೀಶ ಶ್ರೀ ವಿಶ್ವವಲ್ಲಭ ತೀರ್ಥರು ಹೇಳಿದರು. ಅವರು ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಕೊಲೆಕಾಡಿ ಇದರ ವತಿಯಿಂದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭ ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ವೇದಮೂರ್ತಿ ವಾಧಿರಾಜ ಉಪಾದ್ಯಾಯ ಕೊಲೆಕಾಡಿ, ಶಶಿಕಲಾ ಉಪಾದ್ಯಾಯ, ಯಕ್ಷಗಾನ ಕಲಾವಿದ ಗಣೇಶ್ ಕೊಲೆಕಾಡಿ,  ನಾಗಸ್ವರ ವಾದಕ ನಾಗೇಶ್ ಬಪ್ಪನಾಡು,  ಚಂದ್ರಶೇಖರ ಸುವರ್ಣ,  ವೆಂಕಟೇಶ ಭಟ್ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.

ವಾದಿರಾಜ ಉಪಾದ್ಯಾಯ ಸ್ವಾಗತಿಸಿದರು,  ಪಿ ವಿಜಯಾನಂದ ರಾವ್ ಕಾರ‍್ಯಕ್ರಮ ನಿರೂಪಿಸಿದರು.  ಶ್ರೀ ವಿದ್ಯಾ ಧನ್ಯವಾದ ಅರ್ಪಿಸಿದರು. ಬಳಿಕ ಶೀಲಾ ದಿವಾಕರ್ ಮತ್ತು ಬಳಗದವರಿಂದ ಭಕ್ತಿಸುಧೆ ಕಾರ‍್ಯಕ್ರಮ ನಡೆಯಿತು.

Puneetha Krishna

Mulki-04061503 Mulki-04061504

Comments

comments

Comments are closed.

Read previous post:
Mulki-04061501
ಮೂಲ್ಕಿ: ಸೀಯಾಳಾಭಿಷೇಕ

ಮೂಲ್ಕಿ: ಹಿಂದೂ ಯುವ ಸೇನೆ ಘಟಕದ ವತಿಯಿಂದ ಮಂಗಳವಾರ ಬೆಳಿಗ್ಗೆ ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಸೀಯಾಳಾಭಿಷೇಕವು ಅರ್ಚಕ ಶ್ರೀಪತಿ ಭಟ್ ನೇತೃತ್ವದಲ್ಲಿ ನಡೆಯಿತು....

Close