ರೋ ರೋ ಸೇವೆ ಸ್ಥಳಾಂತರವಿಲ್ಲ : ನಳಿನ್ ಕುಮಾರ್ ಕಟೀಲ್     

ಸುರತ್ಕಲ್:  ಪ್ರಧಾನ ಮಂತ್ರಿಗಳ ಸ್ವಚ್ಚ ಬಾರತ ಕಲ್ಪನೆಗೆ ದೇಶದೆಲ್ಲೆಡೆ ಅಭೂತ ಪೂರ್ವ ಯಶಸನ್ನು ಗಳಿಸಿದ್ದು, ಹತ್ತಾರು ಎನ್.ಜಿ.ಒ ಸಂಸ್ಥೆಗಳು ಇಂದು ಇದರಲ್ಲಿ ಕೈಜೋಡಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು ಅವರು ಸುರತ್ಕಲ್ ರೈಲ್ವೆ ನಿಲ್ದ್ದಾಣದಲ್ಲಿ ನಡೆದ ಸ್ವಚ್ಚ ರೈಲ್ವೆ ಕಾರ್ಯಕ್ರಮದಲ್ಲಿ ಬಾಗವಹಿಸಿದ ನಂತರ ಮಾದ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದರು. ಕೊಂಕಣ್ ರೈಲ್ವೆಗೆ 25 ರ ಸಂಭ್ರಮ ಮಾತ್ರವಲ್ಲದೆ ನರೇಂದ್ರ ಮೋದಿಯವರು ಸ್ವಚ ರೈಲ್ವೆ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದ್ದು  ಇದು ಯಶಸ್ವೀಯಾಗಿ ನಡೇಯುತ್ತಿದೆ ಎಂದರು, ಸುರತ್ಕಲ್ ನಲ್ಲಿನ ರ‍ೋ ರೋ ತೊಕೂರಿಗೆ ಸ್ಥಳಾಂತರಿಸುವ ಯೋಚನೆ ಇಲ್ಲ ಆದರೆ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗ ದಂತೆ ನೋಡಿಕೊಳ್ಲಲಾಗುದು ಎಂದರು, ಹಳೆಯಂಗಡಿ ರೈಲ್ವೆ ಮೆಲ್ಸೇತುವೆ ಬಗ್ಗೆ ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಂಸದರು, ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಕಳುಹಿಸಿದ್ದೇವೆ, ಜಮೀನು ವಶಪಡಿಸುವ ಕೆಲಸವನ್ನು ರಾಜ್ಯ ಸರಕಾರ ನಿರ್ವಹಿಸಬೇಕಾಗುತ್ತದೆ, ಎಂದರು ಸುರತ್ಕಲ್ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು, ಹಿಂದೂ ಜಾಗರಣ ವೇದಿಕೆ, ಸ್ಥಳಿಯ ರಿಕ್ಷಾ ಚಾಲಕರು ಸ್ವಚತಾ ಕಾರ್ಯಕ್ರಮದಲ್ಲಿ ಬಾಗವಹಿಸಿದರು ,ರೈಲ್ವೆ ಪಿ.ಅರ್.ಒ. ಸುಧಾ  ಕ್ರಷ್ಣ ಮೂರ್ತಿ, ಸತ್ಯಜಿತ್ ಸುರತ್ಕಲ್,ದಿವಾಕರ್ ಸಾಮಾನಿ ಮುಂತಾದವರು ಉಪಸ್ಥಿತರಿದ್ದರು.

Nishanth Shetty

Mulki-04061505 Mulki-04061506 Mulki-04061507 Mulki-04061508

Comments

comments

Comments are closed.

Read previous post:
Mulki-04061504
ಜೀವನದಲ್ಲಿ ಸಮಾಜಮುಖಿ ಚಿಂತನೆ ಅಗತ್ಯ

ಮೂಲ್ಕಿ: ಮನುಷ್ಯನ ಜನ್ಮದಲ್ಲಿ ತಾಯಿಯ ಋಣ ದೊಡ್ಡದು. ಅದು ಜೀವನದಲ್ಲಿ ಮರೆಯಲಾಗದ ವಿದ್ಯೆ. ಜೀವನದಲ್ಲಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು ಎಲ್ಲರೊಡನೆ ದಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬಾಳುವ ವ್ಯಕ್ತಿತ್ವವನ್ನು...

Close