ಸಂಘಟನೆ ಮತ್ತು ಶಿಕ್ಷಣ ಬಹು ಮುಖ್ಯ

ಮೂಲ್ಕಿ: ಸಮಾನತೆ, ಭಾವೈಖ್ಯತೆ, ಪರಸ್ಪರ ಸಹಕಾರಿ ವ್ಯಕ್ತಿತ್ವವು ಶೀಘ್ರ ಅಭಿವೃದ್ಧಿಯನ್ನು ತರಬಲ್ಲದು ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ನೂತನ ಧರ್ಮಗುರುಗಳಾದ ವಂ.ಪ್ರಾನ್ಸೀಸ್ ಕ್ಷೇವಿಯರ್ ಗೋಮ್ಸ್ ಹೇಳಿದರು. ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ನೂತನ ಧರ್ಮ ಗುರುಗಳಾಗಿ ಗುರುವಾರ ಅಧಿಕಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
ದೇವರ ಕೊಡುಗೆಗಳಾದ ಮಾನವರು ಸಮಾನರು ಸಂಘಟನೆ ಮತ್ತು ಶಿಕ್ಷಣ ಬಹು ಮುಖ್ಯ ಅಂಶವಾಗಿದ್ದು ಸಮಾನತೆಯ ಭಾವಕ್ಕೆ ದೇವರ ಆಶೀರ್ವಾದವಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಿನ್ನಿಗೋಳಿ ವಾರ್ಡು ಹಿರಿಯ ಧರ್ಮಗುರುಗಳಾದ ಫಾ. ವಿನ್ಸೆಂಟ್ ಮೊಂತೇರೋ ಮಾತನಾಡಿ,ಉತ್ತಮ ಕ್ರೀಡಾ ಪಟುವಾಗಿ ,ಶಿಕ್ಷಣ ತಜ್ಞರಾಗಿ ಹೆಸರುವಾಸಿಯಾದ ಫಾ. ಪ್ರಾನ್ಸೀಸ್ ಕ್ಷೇವಿಯರ್ ಗೋಮ್ಸ್ ರವರಿಂದ ಮೂಲ್ಕಿ ಪ್ರದೇಶದ ಅಭಿವೃದ್ಧಿಗೆ ಕಾರಣವಾಗಲಿ ಎಂದರು.
ಈ ಸಂದರ್ಭ ಮೂಲ್ಕಿ ಚರ್ಚಿನ ಧರ್ಮಗುರುಗಳಾದ ಫಾ.ನೋರ‍್ಭಟ್ ಲೋಬೋ ಪದವಿ ಹಸ್ತಾಂತರಿಸಿದರು. ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೊಜ ಮತ್ತು ಕಾರ್ಯದರ್ಶಿ ಸೆಲಿನ್ ರೋಡ್ರಿಗಸ್ ಅಭಿನಂದಿಸಿದರು.
ಈ ಸಂದರ್ಭ ನಣಗಳೂರು ಮಿಲಾಗ್ರಿಸ್ ಚರ್ಚು ಪ್ರಧಾನ ಧರ್ಮಗುರುಗಳಾದ ಫಾ.ವೆಲ್ಲೆಂಟೈನ್ ಡಿಸೋಜಾ,ಧರ್ಮ ಗುರುಗಳಾದ ಫಾ.ವಿಲಿಯಂ ಗೋಂತಾಲ್ವೀಸ್, ಫಾ.ಸಂತೋಷ್‌ಪ್ರಕಾಶ್, ಫಾ.ಸಂತೋಷ್‌ಲೋಬೊ, ಫಾ.ಅನಿಲ್ ಡಿಸೋಜಾ, ಸಿ.ಒ.ಡೊಪಿ. ಮಾಜಿ ನಿರ್ದೇಶಕ ಫಾ.ಒನಿಲ್ ಡಿಸೋಜ. ಮೂಲ್ಕಿ ದೈವಿಕ ಕರೆ ಕೇಂದ್ರದ ಫಾ.ಅನಿಲ್.ಕಿರಣ್ ಎಸ್.ವಿ.ಡಿ, ಆ ವಾರ್ಡು ಮುಖ್ಯಸ್ಥರು ಮೂಲ್ಕಿ ಮತ್ತು ಮಿಲಾಗ್ರಿಸ್ ಧರ್ಮ ಸಭೆಯ ಸದಸ್ಯರು ಉಪಸ್ಥಿತರಿದ್ದರು.

Bhagyawan Sanil

Mulki-05061501

Comments

comments

Comments are closed.

Read previous post:
Mulki-04061508
ರೋ ರೋ ಸೇವೆ ಸ್ಥಳಾಂತರವಿಲ್ಲ : ನಳಿನ್ ಕುಮಾರ್ ಕಟೀಲ್     

ಸುರತ್ಕಲ್:  ಪ್ರಧಾನ ಮಂತ್ರಿಗಳ ಸ್ವಚ್ಚ ಬಾರತ ಕಲ್ಪನೆಗೆ ದೇಶದೆಲ್ಲೆಡೆ ಅಭೂತ ಪೂರ್ವ ಯಶಸನ್ನು ಗಳಿಸಿದ್ದು, ಹತ್ತಾರು ಎನ್.ಜಿ.ಒ ಸಂಸ್ಥೆಗಳು ಇಂದು ಇದರಲ್ಲಿ ಕೈಜೋಡಿಸಿದೆ ಎಂದು ಸಂಸದ ನಳಿನ್...

Close