ಉರುಳಿನಲ್ಲಿ ಬಿದ್ದ ಚಿರತೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಕುಂರ್ಬಿಲ್ ಶಾರದ ಅವರ ಗದ್ದೆ ಮತ್ತು ಗುಡ್ಡೆಯ ನಡುವಿನ ತೋಡಿನಲ್ಲಿ ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಆಹಾರ ಅರಸಿ ಬಂದ ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸಿಲುಕಿ ಬಳಿಕ ಅರಣ್ಯ ಇಲಾಖಾ ವರಿಷ್ಠರು ಪಿಲಿಕುಲ ನಿಸರ್ಗಧಾಮಕ್ಕೆ ಒಯ್ದ ಘಟನೆ ಭಾನುವಾರ ನಡೆದಿದೆ.
ಸ್ಥಳೀಯರು ಶನಿವಾರ ರಾತ್ರಿ ಶುಭ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಹಿಂತಿರುವಾಗ ನಾಯಿ ಗೋಳಿಡುವುದು ಹಾಗೂ ಚಿರತೆ ಗೂಳಿಟ್ಟ ಸದ್ದು ಕೇಳಿ ಬಂದಿತ್ತು ಗುಮಾನಿಯಿಂದ ಭಾನುವಾರ ಬೆಳಿಗ್ಗೆ ಪರಾಮರ್ಶಿಸಿದಾಗ ಚಿರತೆಯು ಕೈಗೆ ಬಿಗಿದಿದ್ದ ಉರುಳಿನಿಂದ ತಪ್ಪಿಸಿಕೊಳ್ಳಲು ಒದ್ದಾಡಿ ಚೀರಾಡುತ್ತಿದ್ದ ಕಂಡ ಕೇಳಿ ಅಸುಪಾಸಿನವರು ಸೇರಿ ಅರಣ್ಯ ಇಲಾಖೆಗೆ ಸುದ್ದಿ ನೀಡಿದರು.
ಚಿರತೆ ಸುತ್ತಲೂ ನೆರೆದಿದ್ದವರನ್ನು ಆತಂಕ ಹಾಗೂ ಭಯದಿಂದ ತನ್ನ ಕೋರೆ ಹಲ್ಲುಗಳನ್ನು ತೋರಿಸುತ್ತಾ ಘರ್ಜಿಸಿ ಎಗರಾಡಿ ಸುಸ್ತಾಗಿ ಹೋಗಿತ್ತು. ಅಲ್ಲಿ ನೆರೆದ ಜನರು ಚಿರತೆಯ ಗಾತ್ರ, ವೇಗ, ಬೇಟೆಯಾಡುವ ಚಾಕಚಕ್ಯತೆ, ಶಕ್ತಿ ಮತ್ತು ಪ್ರಾಯದ ಬಗ್ಗೆ ವಿಮರ್ಶೆ ಮಾಡುವವರು ಒಂದು ಕಡೆಯಾದರೆ, ಸಾಕುಪ್ರಾಣಿಗಳನ್ನು ಆಪೋಶನಗೈಯ್ಯುತ್ತಿರುವ ಘಟನೆಗಳನ್ನು ಮೆಲುಕುಹಾಕಿ ಅದಕ್ಕೆ ಹಿಡಿ ಶಾಪ ಹಾಕುವವರೂ ಅಲ್ಲಿದ್ದರು.
ಕಿನ್ನಿಗೋಳಿ ವಲಯದ ಅರಣ್ಯಾಧಿಕಾರಿ ಪರಮೇಶ್ವರ್ ಹಾಗೂ ಸಿಬ್ಬಂದಿಗಳು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ಮೂಡಬಿದಿರೆಯ ವಲಯ ಅರಣ್ಯಾಧಿಕಾರಿ ಜೆ. ಡಿ. ದಿನೇಶ್ ಅವರಿಗೆ ಮಾಹಿತಿ ನೀಡಿ ಮಂಗಳೂರಿನ ಪಿಲಿಕುಳದ ಅರಿವಳಿಕೆ ತಜ್ಞರು ಹಾಗೂ ವೈದ್ಯಾಧಿಕಾರಿಗಳನ್ನು ಕರೆಸಲಾಯಿತು.
ಚಿರತೆಯ ಮೇಲೆ ಅರಿವಳಿಕೆಯ ಚುಚ್ಚುಮದ್ದಿನ ಔಷಧ ನೀಡುವ ಮೂಲಕ ಸ್ಥಳೀಯರ ಸಹಕಾರದಿಂದ ಸುರಕ್ಷಿತವಾಗಿ ಹಿಡಿದು ಬೋನಿಗೆ ಹಾಕಿದರು. ಬಳಿಕ ಪಿಲಿಕುಳದ ಪಶು ಸಂಗೋಪನಾ ಅಧಿಕಾರಿ ಡಾ. ಜೆರಾಲ್ಡ್ ವಿಕ್ರಮ್ ಲೋಬೊ, ಆನಿಮಲ್ ಕೇರ್ ಟೇಕರ್ ದಿನೇಶ್ ಕುಮಾರ್ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಚಿರತೆಯನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಯಿತು.

ಸುಮಾರು ಎರಡೂವರೆ ಗಂಟೆ ಕಾರ್ಯಚರಣೆ
ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖಾಧಿಕಾರಿ ಪರಮೇಶ್ವರ್ ಮಂಜುನಾಥ ಗಾಣಿಗ, ಶಿವಶಂಕರ, ಶೇಷಪ್ಪ ಹಾಗೂ ಸ್ಥಳೀಯ ಗ್ರಾಮಸ್ಥರು ಕೈಜೋಡಿಸಿದರು.

ಹಲವಾರು ತಿಂಗಳಿನಿಂದ ಈ ಪರಿಸರದ ಸಾಕುನಾಯಿ ಕೋಳಿಗಳು ಕಾಣೆಯಾಗುತ್ತಲೇ ಇದ್ದರೂ ಚಿರತೆ ಮಾತ್ರ ಪೊದೆ ಗುಡ್ಡ ಪ್ರದೇಶವಾಗಿದ್ದರಿಂದ ಕಣ್ಣಿಗೆ ಕಾಣುತ್ತಿರಲ್ಲಿಲ್ಲ. ಅನಾಯಾಸವಾಗಿ ಸಿಗುವ ಪ್ರಾಣಿಗಳು ಸಿಕ್ಕಾಗ ಮತ್ತೆ ಚಿರತೆಗಳು ಕಾಡಿಗೆ ಹಿಂದಿರುಗುವುದು ಬಹಳ ಅಪರೂಪ.
ಶಾರದ
ಮಿತ್ತಕುಂರ್ಬಿಲ್

ಇದೀಗ ಚಿರತೆ ಯ ಹಾವಳಿ ಎಲ್ಲೆಡೆ ಸದ್ದು ಮಾಡುತ್ತಿದೆ. ಮನುಷ್ಯರ ಆವಾಸಸ್ಥಾನಗಳ ಸುತ್ತಮುತ್ತಲೇ ಚಿರತೆಗಳು ಬದುಕನ್ನು ರೂಪಿಸಿಕೊಂಡು ನಾಡಿನ ವಾತಾವರಣಕ್ಕೆ ಒಗ್ಗಿಕೊಂಡಿದೆ. ಅರಣ್ಯ ನಾಶ ಮತ್ತು ಹಲವಾರು ಕಾರಣದಿಂದ ನಾಡಿನತ್ತ ದಾವಿಸಿವೆ. ನುಗ್ಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಮೂಡಬಿದ್ರೆ ವಲಯ ವ್ಯಾಪ್ತಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ದೂರುಗಳು ಬಂದಿದ್ದು ಏಳು ಕಡೆ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ.
ಜಿ.ಡಿ. ದಿನೇಶ್
ಮೂಡಬಿದಿರೆ ವಲಯ ಅರಣ್ಯಾಧಿಕಾರಿ

Kinnigoli-07061501 Kinnigoli-07061502 Kinnigoli-07061503 Kinnigoli-07061504 Kinnigoli-07061505 Kinnigoli-07061506 Kinnigoli-07061507 Kinnigoli-07061508 Kinnigoli-07061509 Kinnigoli-07061510 Kinnigoli-07061511

Comments

comments

Comments are closed.

Read previous post:
election-logo
ಮುಲ್ಕಿ ಹೋಬಳಿಯ 6 ಪಂಚಾಯಿತಿಗಳ ಫಲಿತಾಂಶ

ಕಿನ್ನಿಗೋಳಿ: ಕೊಂಡೆಮೂಲ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಬಿಜೆಪಿ 10 ಕಾಂಗ್ರೇಸ್ 2 ಕೊಂಡೆಮೂಲ ಗ್ರಾಮ ಪಂಚಾಯಿತಿಯ ಒಟ್ಟು 12 ಸ್ಥಾನಗಳಲ್ಲಿ 23 ಮಂದಿ ಸ್ಪರ್ಧಿಸಿದ್ದರು. ಕಿಲೆಂಜೂರು -...

Close