ಶ್ರೀ ನಾರಾಯಣ ಗುರು ನರ್ಸರಿ ಶಾಲೆ ಶೈಕ್ಷಣಿಕ ವರ್ಷಾರಂಭ

 ಕಿನ್ನಿಗೋಳಿ : ಶಾಲೆಗಳು ಹಾಗೂ ಹೆತ್ತವರು ಮಕ್ಕಳಿಗೆ ಎಳವೆಯಲ್ಲೇ ಮೌಲ್ಯಭರಿತ ಶಿಸ್ತು ಸಂಸ್ಕಾರದ ಶಿಕ್ಷಣ ನೀಡಲು ನಿರಂತರ ಶ್ರಮ ವಹಿಸಬೇಕು ಎಂದು ಸುರತ್ಕಲ್ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸದಾನಂದ ಸುವರ್ಣ ಹೇಳಿದರು.
ಭಾನುವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶ್ರೀ ನಾರಾಯಣ ಗುರು ನರ್ಸರಿ ಶಾಲೆಯ 2015-16 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಬಾಲಕೃಷ್ಣ ನಾಯಕ್ ಹಾಗೂ ಜಯಶ್ರೀ ಎಂ. ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸುಮಾರು 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕೆಮ್ರಾಲ್ ಆರೋಗ್ಯ ಕೇಂದ್ರದ ವೈಧ್ಯಾಕಾರಿ ಡಾ. ಭಾಸ್ಕರ್ ಕೊಟ್ಯಾನ್, ಉದ್ಯಮಿಗಳಾದ ಪ್ರೇಮನಾಥ್ ಚಿತ್ರಾಪುರ, ಜಿತೇಂದ್ರ ಸುವರ್ಣ, ಚಂದ್ರಶೇಖರ್ ನಾನಿಲ್, ತಾಳಿಪಾಡಿ ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಶಾಲಾಮುಖ್ಯ ಶಿಕ್ಷಕಿ ಅಶ್ವಿತಾ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಪ್ರಮೋದ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉದಯ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07061512

Comments

comments

Comments are closed.

Read previous post:
Kinnigoli-07061507
ಉರುಳಿನಲ್ಲಿ ಬಿದ್ದ ಚಿರತೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಕುಂರ್ಬಿಲ್ ಶಾರದ ಅವರ ಗದ್ದೆ ಮತ್ತು ಗುಡ್ಡೆಯ ನಡುವಿನ ತೋಡಿನಲ್ಲಿ ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಆಹಾರ...

Close