ಕೆರೆಕಾಡು: ಪುಸ್ತಕ ವಿತರಣೆ

ಮುಲ್ಕಿ: ಕೆರೆಕಾಡು ಸಾದಾತ್ ವಲಿಯುಲ್ಲಾ ದಿಕ್ರ್ ಮಜ್ಲಿಸ್‌ನ ವತಿಯಿಮದ ಸುಮಾರು 22 ಸಾವಿರ ರೂ. ಮೌಲ್ಯದ ಪುಸ್ತಕ ವಿತರಣೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಕಾಡು ಇದರ ಅಧ್ಯಾಪಕರೊಬ್ಬರ ವಾರ್ಷಿಕ ವೇತನ ವಿತರಣೆ ಹಾಗೂ ಕಂಪ್ಯೂಟರ್ ವಿತರಣಾ ಸಮಾರಂಭ ಕೆರೆಕಾಡು ಸಾದಾತ್ ವಲಿಯುಲ್ಲಾ ದಿಕ್ರ್ ಮಜ್ಲಿಸ್‌ನ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಸಾಹುಲ್ ಹಮೀದ್, ಸಾದಾರ್ ವಲಿಯುಲ್ಲಾ ದಿಕ್ರ್ ಮಜ್ಲಿಸ್‌ನ ವತಿಯಿಂದ ಸುಮಾರು ಹನ್ನೊಂದು ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದ ಸಂಸ್ಥೆ ಈ ವರ್ಷದಿಂದ ಸುಮಾರು 37 ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪುಸ್ತಕ ವಿತರಣೆ ಮಾಡುವ ಮೂಲಕ ವಿದ್ಯಾಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿರುವುದು ಸಂತಸದ ವಿಚಾರ. ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರಮಿಸಿ ಬಡವರ ಪಾಲಿನ ಕಲ್ಪವೃಕ್ಷವಾಗಲಿ ಎಂದು ಶುಭ ಹಾರೈಸಿದರು. ಇದೇ ವೇಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಬ್ಬ ಅಧ್ಯಾಪಕರ ವಾರ್ಷಿಕ ಸಂಳ ಹಾಗೂ ಕಂಪ್ಯೂಟರ್‌ನ್ನು ಮುಖ್ಯೋಪಾಧ್ಯಾಯಿನಿ ಹಾಗೂ ಅದ್ಯಾಪಕ ವೃಂದಕ್ಕೆ ಹಸ್ತಾಂತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಂ. ಕೋಯಾಲಿ ವಹಿಸಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭುವನೇಶ್ವರಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಭಾರತಿ, ಸದಸ್ಯೆ ಶ್ರೀಮತಿ ಮೋಹಿನಿ, ಕೆರೆಕಾಡು ಮಸೀದಿಯ ಖತೀಬ್ ಅಬ್ದುಲ್ ರಹ್ಮಾನ್ ಫೈಝಿ, ಎಚ್.ಹಮೀದ್ ಪಡುಬಿದಿರೆ,, ಆಶಿಕ್ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-08061504

Comments

comments

Comments are closed.

Read previous post:
Mulki-08061503
ಶುಚಿತ್ವಕ್ಕೆ ಮಹತ್ವ ಕೊಡಬೇಕು

ಮೂಲ್ಕಿ: ಪರಿಸರವೇ ಉಸಿರು ಎಂದುಕೊಂಡು ಶುಚಿತ್ವಕ್ಕೆ ಮಹತ್ವ ಕೊಡಬೇಕು.ಪರಿಸರದ ಮಹತ್ವ ಕೇವಲ ಒಂದು ದಿನಕ್ಕೆ ಮೀಸಲಾಗಿಡಬಾರದು,ಸಮರ್ಪಕ ಕಸ ತ್ಯಾಜ್ಯ ವಿಲೇವಾರಿಯಿಂದ ಪರಿಸರ ಸುಂದರವಾಗಿಡಬಹುದು ಇದಕ್ಕೆ ಎಲ್ಲರ ಪ್ರೋತ್ಸಾಹ...

Close