ಸ್ವಚ್ಚತಾ ಅಭಿಯಾನ

ಮುಲ್ಕಿ: ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಆರೋಗ್ಯಪೂರ್ಣವಾದ ವಾತಾವರಣ ಮೂಡಿಸಲು ಸಾಧ್ಯವಿದ್ದು ಸರ್ಕಾರಿ ಸೊತ್ತುಗಳನ್ನು ನಮ್ಮ ಸ್ವಂತದಂತೆ ಕಾಪಾಡಿಕೊಳ್ಳುವ ಅಗತ್ಯವಿದ್ದು ಮಕ್ಕಳಲ್ಲಿ ಈ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯ ಮಾಡಬೇಕೆಂದು ಮೂಲ್ಕಿಯ ಕಾರ್ನಾಡಿನ ಮಾತಾ ಅಮಲೋದ್ಭವ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಕ್ಲೇವಿಯರ್ ಗೋಮ್ಸ್ ಹೇಳಿದರು.
ಮೂಲ್ಕಿಯ ರೈಲು ನಿಲ್ದಾಣದಲ್ಲಿ ಕೊಂಕಣ ರೈಲ್ವೆಯ ನೇತ್ರತ್ವದಲ್ಲಿ ಸ್ವಚ್ಚ ಭಾರತ್ ಸ್ವಚ್ಚ ರೈಲು ಅಭಿಯಾನದ ಅಂಗವಾಗಿ ಮೂಲ್ಕಿಯ ಕೆ ಎಸ್ ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಶಾಲೆಯ ಮಕ್ಕಳು,ರಿಕ್ಷಾ ಮತ್ತು ಕಾರು ಚಾಲಕ,ಮಾಲಕರ ಸಹಯೋಗದೊಂದಿಗೆ ಜರಗಿದ ಮೂಲ್ಕಿಯ ರೈಲ್ವೆ ನಿಲ್ದಾಣದ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಭಾನುವಾರ ತನ್ನ ನೇತ್ರತ್ವದಲ್ಲಿ ಚರ್ಚಿನ ಯುವ ಸಮುದಾಯದೊಂದಿಗೆ ನಿರಂತರವಾಗಿ ಮೂಲ್ಕಿ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸುವುದಾಗಿ ತಿಳಿಸಿದರು.ಮೂಲ್ಕಿ ರೈಲ್ವೆ ನಿಲ್ದಾಣದ ಸ್ತೇಷನ್ ಮಾಸ್ತರ್, ಸಿಬಂದಿಗಳು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡರು.

Prakash Suvarna

Mulki-08061505

Comments

comments

Comments are closed.