ಶುಚಿತ್ವಕ್ಕೆ ಮಹತ್ವ ಕೊಡಬೇಕು

ಮೂಲ್ಕಿ: ಪರಿಸರವೇ ಉಸಿರು ಎಂದುಕೊಂಡು ಶುಚಿತ್ವಕ್ಕೆ ಮಹತ್ವ ಕೊಡಬೇಕು.ಪರಿಸರದ ಮಹತ್ವ ಕೇವಲ ಒಂದು ದಿನಕ್ಕೆ ಮೀಸಲಾಗಿಡಬಾರದು,ಸಮರ್ಪಕ ಕಸ ತ್ಯಾಜ್ಯ ವಿಲೇವಾರಿಯಿಂದ ಪರಿಸರ ಸುಂದರವಾಗಿಡಬಹುದು ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಮೂಲ್ಕಿ ನಗರ ಪಂಚಾಯತಿ ಮುಖ್ಯಾಧಿಕಾರಿ ವಾಣಿ ಆಳ್ವ ಹೇಳಿದರು. ಅವರು ಕಾರ‍್ನಾಡು ಯುಬಿಎಂಸಿ ಹಾಗೂ ಸಿಎಸ್‌ಐ ಶಾಲೆಯ ಸಂಯೋಜನೆಯೊಡನೆ ನಡೆದ ಪರಿಸರ ಸಂರಕ್ಷಣೆಯ ಜಾಥ ಉದ್ಘಾಟಿಸಿ ಸಸಿ ನೆಟ್ಟು ಮಾತನಾಡಿದರು.ವೇದಿಕೆಯಲ್ಲಿ ಶಾಲೆಯ ಸಂಚಾಲಕ ಸ್ಯಾಮ್ ಮಾಬೆನ್,ಸಂತೋಷ್ ಕುಮಾರ್,ಶಿಕ್ಷಕಿ ಸುಧಾ,ಯುಬಿಎಂಸಿ ಹಾಗೂ ಸಿಎಸ್‌ಐ ಶಾಲೆಯ ಮುಖ್ಯೋಪಾದ್ಯಾಯಿನಿಯರಾದ ಐರಿನ್ ಶಶಿಕಲ,ನೀರಜ್ ಪುನೀತ್ ಮತ್ತಿತರರು ಉಪಸ್ಥಿತರಿದ್ದರು.ಶಿಕ್ಷಕಿ ಡೆನ್ಸಿ ಮ್ಯಾಬೆನ್ ಸ್ವಾಗತಿಸಿದರು,ಶಿಕ್ಕಿ ಸೀಮ ಧನ್ಯವಾದ ಅರ್ಪಿಸಿದರು ಶಿಕ್ಷಕ ಹರಿಶ್ಚಂದ್ರ ಕಾರ‍್ಯಕ್ರಮ ನಿರೂಪಿಸಿದರು.ಬಳಿಕ ವಿದ್ಯಾರ್ಥಿಗಳಿಂದ ಪರಿಸರ ರಕ್ಷಣೆ ಕುರಿತಾದ ಜಾಥಾ ನಡೆಯಿತು.

Puneetha Krishna

Mulki-08061503

Comments

comments

Comments are closed.

Read previous post:
Mulki-08061502
ಕಾಂಗ್ರೆಸ್ಸ್ ಬೆಂಬಲಿತರ ವಿಜಯೋತ್ಸವ

ಮೂಲ್ಕಿ: ಕಿಲ್ಪಾಡಿ ಗ್ರಾಮಪಂಚಾಯತಿಯಿಂದ ಬೇರ್ಪಟ್ಟು ನೂತನವಾಗಿ ರಚನೆಗೊಂಡ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ಕಾಂಗ್ರೆಸ್ಸ್ ಬೆಂಬಲಿತರ ವಿಜಯೋತ್ಸವ ಭಾನುವಾರ ಕೊಲೆಕಾಡಿಯಿಂದ ಆರಂಭಗೊಂಡು ಮೈಲೊಟ್ಟು,ಕಕ್ವದಲ್ಲಿ ನಡೆಯಿತು. ಈ ಸಂದರ್ಭ ದನಂಜಯ...

Close