ವಿದ್ಯುತ್ ಕಂಬಕ್ಕೆ ಟಾಟ ಸುಮೋ ಡಿಕ್ಕಿ

ಕಿನ್ನಿಗೋಳಿ: ಕಿನ್ನಿಗೋಳಿ ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಐಕಳ ಕಮ್ಮಾಜೆ ಬಳಿ ಟಾಟಾ ಸುಮೋ ಧಾರಾಕಾರವಾಗಿ ಸುರಿದ ಮಳೆಯ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸೋಮವಾರ ಸಂಜೆ ನಡೆದಿದೆ.
ಟಾಟ ಸುಮೋ ಸುರತ್ಕಲ್ ನಿಂದ ಮೂಡಬಿದಿರೆ ಕಡೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಸಂಪೂರ್ಣವಾಗಿ ಟೆಂಪೋ ಮೇಲೆ ಮುರಿದು ಬಿದ್ದಿದ್ದು ಸುಮೋದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಮ್ಮಾಜೆ ಮತ್ತು ಐಕಳ ಪರಿಸರದಲ್ಲಿ ವಿದ್ಯುತ್ ಸರಬರಾಜು ನಿಂತಿದೆ.

Kinnigoli-09061505

Comments

comments

Comments are closed.

Read previous post:
Kinnigoli-09061501
ಕಸದಿಂದ ರಸ : ಪಲ್ಲೆಕುದ್ರುವಿನಲ್ಲಿ ಬಣ್ಣದ ಹೂದೋಟ

ಕಿನ್ನಿಗೋಳಿ: ಬಣ್ಣಗಳನ್ನು ಮೈದೆಳೆದು ಮದುಮಗಳಂತೆ ಸಿಂಗಾರಗೊಂಡಿರುವ ಹಳೆ ಮಣ್ಣಿನ ಪಾತ್ರೆಗಳು, ಮನೆಯ ಹೂದೋಟದಲ್ಲಿ ಹೂವುಗಳ ಮಧ್ಯೆ ಕಾಣುತ್ತಿರುವ ಬಣ್ಣ ಬಣ್ಣದ ಕೋಳಿ ಮೊಟ್ಟೆಗಳು, ವಿವಿಧ ತರದ ನೀರಿನ ಬಾಟಲ್‌ಗಳಲ್ಲಿ...

Close