ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿ ಬಂದದ್ದು ವಿಶೇಷ. ಕಾಂಗ್ರೇಸ್ 14, ಬಿಜೆಪಿ 7 ಸ್ಥಾನಗಳನ್ನು ಗಳಿಸಿಕೊಂಡಿದೆ.
ಬಹುಮತ ಪಡೆದಿರುವ ಕಾಂಗ್ರೆಸ್‌ನ ಎಲ್ಲ ಮಹಿಳೆಯರು ಅರ್ಹರಾಗಿದ್ದು ಎರಡನೇ ಸಲ ವಿಜಯಿಗಳಾಗಿರುವ ಹಾಲಿ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ ಹಾಗೂ ಫಿಲೋಮಿನಾ ಸಿಕ್ವೇರ ನಡುವೆ ಪೈಪೋಟಿ ನಡೆಯುವ ಸಂಭವವಿದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಸುಜಾತಾ ಪೂಜಾರಿ ಮುಂಚೂಣಿಯಲ್ಲಿದ್ದಾರೆ.

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗದಲ್ಲಿ ಮಹಿಳೆಯರಿಗೆ ಮೀಸಲಾಗಿದೆ. ಬಿಜೆಪಿ 7, ಕಾಂಗ್ರೇಸ್ 4 ಗಳಿಸಿದ್ದು ಎರಡನೇ ಸಲ ವಿಜಯ ಗಳಿಸಿದ ಹಾಲಿ ಉಪಾಧ್ಯಕ್ಷೆ ಸರೋಜಿನಿ ಹಾಗೂ ಬೇಬಿ ಮೊಯಿಲಿ ಆಯ್ಕೆಯಾಗುವ ಸಂಭವವಿದೆ.
ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಹೊಸದಾಗಿ ಆಯ್ಕೆಗೊಂಡ ದಾಮೋದರ ಶೆಟ್ಟಿ ಹಾಗೂ ಮೊರ್ಗನ್ ವಿಲಿಯಂ ಸಾಲಿನ್ಸ್ ರೇಸ್‌ನಲ್ಲಿದ್ದಾರೆ. ,

ಕೆಮ್ರಾಲ್‌ನಲ್ಲಿ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನವಿದ್ದು ಬಿಜೆಪಿ 9 ಕಾಂಗ್ರೇಸ್ 8
ಗಳಿಸಿದ್ದು ಮೂರನೇ ಸಲ ವಿಜಯಿಯಾಗಿರುವ ಹಿರಿಯರಾದ ಸುಧಾಕರ ಶೆಟ್ಟಿ ಮತ್ತು ಎರಡನೇ ಸಲ ವಿಜಯಿಯಾಗಿರುವ ನಾಗೇಶ್ ಎಮ್ ಅಂಚನ್ ಆಯ್ಕೆಯಾಗುವ ಸಂಭವವಿದೆ. ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಯ ಮಹಿಳಾ ಸದಸ್ಯರಿಗೆ ಮೀಸಲಾಗಿದ್ದು ಪ್ರಮೀಳಾ ಡಿ. ಶೆಟ್ಟಿ, ಎಸ್. ಮಾಲತಿ ಆಚಾರ್ಯ ಮುಂಚೂಣಿಯಲ್ಲಿದ್ದಾರೆ.

ಹೊಸದಾಗಿ ಆರಂಭಗೊಂಡ ಕೊಂಡೆಮೂಲ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 10 ಕಾಂಗ್ರೇಸ್ 2 ಸ್ಥಾನ ಗಳಿಸಿದೆ. ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಯ ಮಹಿಳಾ ಸದಸ್ಯರಿಗೆ ಮೀಸಲಾಗಿದ್ದು ಎರಡನೇ ಬಾರಿ ಆಯ್ಕೆಗೊಂಡ ಗೀತಾ ಪೂಜಾರ್ತಿ ಮುಂಚೂಣಿಯಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗದ ಬಿಯಲ್ಲಿ ಸಾಮಾನ್ಯ ವರ್ಗಕ್ಕೆ ಇದ್ದು ಕಿರಣ್‌ಕುಮಾರ್ ಆಯ್ಕೆಯಾಗುವ ಸಂಭವವಿದೆ.
ಬಳ್ಕುಂಜೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 10, ಕಾಂಗ್ರೇಸ್ 1, ಪಕ್ಷೇತರ 1 ಸ್ಥಾನ ಗಳಿಸಿದೆ. ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಎರಡು ಕಡೆಗಳಲ್ಲಿ ಚುನಾಯಿತರಾಗಿರುವ ದಿನೇಶ್ ಪುತ್ರನ್ ಒಬ್ಬರೇ ಈ ವರ್ಗದಲ್ಲಿದ್ದು ಆಯ್ಕೆ ಖಚಿತ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಜಯಲಕ್ಷ್ಮೀ ಕೆ. ಮೂಂಚೂಣಿಯಲ್ಲಿದ್ದು ಎರಡು ಸಲ ಆಯ್ಕೆಯಾದ ಮಮತಾ ಡಿ ಪೂಂಜಾ, ಗೀತಾ ಸ್ಪರ್ಧೆಯಲ್ಲಿದ್ದಾರೆ

ಐಕಳದಲ್ಲಿ ಅನಾಯಾಸವಾಗಿ ವಿರೋಧ ಪಕ್ಷ ಕಾಂಗ್ರೇಸ್ಸಿಗೆ ಉಪಾಧ್ಯಕ್ಷ ಸ್ಥಾನ
ಐಕಳ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 8, ಕಾಂಗ್ರೇಸ್ 6 ಸ್ಥಾನ ಗಳಿಸಿದೆ.
ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಎರಡನೇ ಬಾರಿ ಆಯ್ಕೆಯಾದ ದಿವಾಕರ ಚೌಟ ಬಹುತೇಕ ಅಧ್ಯಕ್ಷರಾಗುವ ಸಂಭವವಿದೆ. ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಗೆ ಮೀಸಲಾಗಿದ್ದು ಬಹುಮತ ಪಡೆದಿರುವ ಬಿಜೆಪಿಯಲ್ಲಿ ವು ಪರಿಶಿಷ್ಟ ಜಾತಿಯ ಸ್ಥಾನದ ಸದಸ್ಯೆ ಇಲ್ಲದಿರುವುದರಿಂದ ಕಾಂಗ್ರೆಸ್‌ನ ಸುಂದರಿ ಸಾಲ್ಯಾನ್ ಅವರಿಗೆ ಉಪಾಧ್ಯಕ್ಷ ಸ್ಥಾನ ಖಚಿತವಾಗಿ ಸಿಗಲಿದೆ.

Comments

comments

Comments are closed.

Read previous post:
Kateel-10061501
ಕಟೀಲು ಪುಸ್ತಕ ವಿತರಣೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ 90 ವಿದ್ಯಾರ್ಥಿಗಳಿಗೆ ಕಟೀಲು ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಕಟೀಲು...

Close