ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಮೂಲ್ಕಿ: ಮೂಲ್ಕಿ ಹೋಬಳಿಯಲ್ಲಿನ ಎಲ್ಲಾ 10 ಗ್ರಾಮ ಪಂಚಾಯತ್ ಗಳ ಚುನಾವಣೆಯು ಮುಗಿದು ಫಲಿತಾಂಶ ಬಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ್ಕಕ್ಕೆ ಮೀಸಲಾತಿಯು ಘೋಷಣೆಯಾಗಿದ್ದು ಈ ಬಾರಿ ಆಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿಯು 5 ವರ್ಷವಾಗಿದ್ದು ಇದೀಗ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾಮ ಪಂಚಾಯತ್ ನಲ್ಲಿ ಅಧಿಕಾರ ಪಡೆದ ಪಕ್ಷದ ಚುನಾಯಿತ ಸದಸ್ಯರಲ್ಲಿ ಪೈಪೋಟಿ ಆರಂಭಗೊಂಡಿದೆ.
ಮೂಲ್ಕಿ ಹೋಬಳಿಯ 10 ಗ್ರಾಮ ಪಂಚಾಯತ್ ಗಳ ಒಟ್ಟು 144 ಸ್ಥಾನಗಳಲ್ಲಿ ಬಿಜೆಪಿ 84 ರಲ್ಲಿ,ಕಾಂಗ್ರೆಸ್ 59 ರಲ್ಲಿ ಹಾಗೂ ಜೆ ಡಿ ಎಸ್ 1 ರಲ್ಲಿ ಜಯ ಗಳಿಸಿದೆ. ಮೆನ್ನಬೆಟ್ಟು, ಕೊಂಡೆಮೂಲ, ಐಕಳ, ಬಳ್ಕುಂಜೆ, ಕಿಲ್ಪಾಡಿ, ಕೆಮ್ರಾಲ್, ಪಡಪಣಂಬೂರು ಸೇರಿದಂತೆ 7 ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಮತ್ತು ಕಿನ್ನಿಗೋಳಿ, ಹಳೆಯಂಗಡಿ ಹಾಗೂ ಅತಿಕಾರಿಬೆಟ್ಟು ಸೇರಿದಂತೆ ಮೂರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಅಧಿಕಾರವನ್ನು ಪಡೆದಿದೆ.
ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿಒಟ್ಟು 22 ರಲ್ಲಿ ಬಿಜೆಪಿ 8 ಸ್ಥಾನವನ್ನು ಗಳಿಸಿದ್ದು 14 ಸ್ಥಾನವನ್ನು ಗಳಿಸಿ ಕಾಂಗ್ರೆಸ್ ಪಕ್ಷವು ಅಧಿಕಾರವನ್ನುಪಡೆದಿದ್ದು ಅಧ್ಯಕ್ಷ ಸ್ಥಾನವು ಪರಿಶಿಷ್ಥ ಜಾತಿಯ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಾಂಗ್ರೆಸ್ ಪಕ್ಷದ ಜಲಜಾರವರು ಎಕೈಕ ಅಭ್ಯರ್ಥಿಯಾಗಿದ್ದು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದು ಕಾಂಗ್ರೆಸ್ ಪಕ್ಷದ ಪದ್ಮಾವತಿ ಶೆಟ್ಟಿ ಎಕೈಕ ಅಭ್ಯರ್ಥಿಯಾಗಿರುವುದರಿಂದ ಹಳೆಯಂಗಡಿ ಪಂಚಾಯತ್ ನಲ್ಲಿ ಅಧ್ಯಕ್ಷೆಯಾಗಿ ಜಲಜಾ,ಉಪಾಧ್ಯಕ್ಷೆಯಾಗಿ ಪದ್ಮಾವತಿ ಶೆಟ್ಟಿ ಆಯ್ಕೆಯಾಗಲಿದ್ದಾರೆ.ಪಡಪಣಂಬೂರು ಪಂಚಾಯತ್ ನಲ್ಲಿ ಒಟ್ಟು 16 ರಲ್ಲಿ 1 ರಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು, 15 ರಲ್ಲಿ ಬಿಜೆಪಿ ಜಯಗಳಿಸಿ ಅಧಿಕಾರ ಪಡೆದಿದ್ದು ಅಧ್ಯಕ್ಷ ಸ್ತಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಪಂಚಾಯತ್ ಮಾಜಿ ಅಧ್ಯಕ್ಷ ಅನುಭವಿ ವಿನೋದ್ ಸಾಲ್ಯಾನ್ ರೇಸಿನಲ್ಲಿದ್ದು ಮೋಹನ್ ದಾಸ್ ಕೂಡ ಸ್ಪರ್ಧೆಯಲ್ಲಿದ್ದಾರೆ. ವಿನೋದ್ ಸಾಲ್ಯಾನ್ ಆಯ್ಕೆಯಾಗುವ ಸಾಧ್ಯತೆಯಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಸಾಮಾನ್ಯಕ್ಕೆ ಮೀಸಲಾಗಿದ್ದು ಸುರೇಖಾ ಆಕಾಂಕ್ಷಿಯಾಗಿದ್ದಾರೆ.
ನೂತನ ಪಂಚಾಯತ್ ಅತಿಕಾರಿಬೆಟ್ಟುವಿನಲ್ಲಿ ಒಟ್ಟು 10 ರಲ್ಲಿ 4 ರಲ್ಲಿ ಬಿಜೆಪಿ ಜಯ ಗಳಿಸಿದ್ದು 6 ರಲ್ಲಿ ಜಯ ಗಳಿಸಿದ ಕಾಂಗ್ರೆಸ್ ಅಧಿಕಾರವನ್ನು ಪಡೆದಿದ್ದು ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು ಕಿಲ್ಪಾಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಶಾರದಾ ವಸಂತ್ ಅಧ್ಯಕ್ಷರಾಗುವ ಸಾದ್ಯತೆಯಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಿಲ್ಫಾಡಿ ಪಂಚಾಯತ್ ಮಾಜಿ ಸದಸ್ಯ ಮನೋಹರ್ ಕೋಟ್ಯಾನ್ ಹಾಗೂ ನೂತನ ಸದಸ್ಯ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಆಕಾಂಕ್ಷಿಗಳಾಗಿದ್ದಾರೆ. ಕಿಲ್ಪಾಡಿ ಗ್ರಾಮ ಪಂಚಾಯತ್ ನ ಒಟ್ಟು 9 ಸ್ಥಾನಗಳಲ್ಲಿ 3 ರಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು 6 ರಲ್ಲಿ ಜಯ ಗಳಿಸಿದ ಬಿಜೆಪಿಯು ಅಧಿಕಾರವನ್ನು ಪಡೆದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಸೇತ್ರಕ್ಕೆ ಮೀಸಲಾಗಿದ್ದು ನಾಗರಾಜ್ ಅಧ್ಯಕ್ಷರಾಗುವ ಸಾಧ್ಯತೆಯಿದೆ.ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಎರಡನೇ ಬಾರಿ ಆಯ್ಕೆಯಾಗಿರುವ ಸುನೀತಾ ಪಿ ಆಚಾರ್ಯ ಮತ್ತು ದಮಯಂತಿ ಎಂ ಶೆಟ್ಟಿಗಾರ್ ಆಕಾಂಕ್ಷಗಳಾಗಿದ್ದಾರೆ.
ಬಳ್ಕುಂಜೆ ಗ್ರಾಮ ಪಂಚಾಯತ್ ನ 12 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1 ಸ್ಥಾನವನ್ನು ಗಳಿಸಿದ್ದು 10 ಸ್ಥಾನಗಳನ್ನು ಪಡೆದ ಬಿಜೆಪಿ ಅಧಿಕಾರವನ್ನು ಪಡೆದಿದ್ದು ಅಧ್ಯ ಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು 2 ಸ್ಥಾನಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷರಾಗುವ ಸಾಧ್ಯತೆಯಿದೆ.ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಜಯಲಕ್ಷ್ಮೀ, ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿರುವ ಮಮತಾ ಪೂಂಜ ಸ್ಪರ್ಧೆಯಲ್ಲಿದ್ದಾರೆ. ಮೆನ್ನಬೆಟ್ಟು ಪಂಚಾಯತ್ ನ ಒಟ್ಟು 11 ಸ್ಥಾನಗಳಲ್ಲಿ 4 ರಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು 7 ರಲ್ಲಿ ಜಯ ಗಳಿಸಿ ಬಜೆಪಿ ಅಧಿಕಾರವನ್ನು ಪಡೆದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಮಾಜಿ ಉಪಾಧ್ಯಕ್ಷೆ ಸರೋಜಿನಿ ಹಾಗೂ ಬೇಬಿ ಮೊಯಿಲಿ ಆಕಾಂಕ್ಷಿಗಳಾಗಿದ್ದು ಸರೋಜಿನಿ ಅಧ್ಯಕ್ಷರಾಗುವ ಸಾಧ್ಯತೆಯಿದೆ.ಉಪಾದ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಮೋರ್ಗನ್ ವಿಲಿಯಂ ಸಾಲಿನ್ಸ್ ಮತ್ತು ದಾಮೋದರ ಶೆಟ್ಟಿ ಆಕಾಂಕ್ಷಿಗಳಾಗಿದ್ದಾರೆ.
ನೂತನ ಪಂಚಾಯತ್ ಕೊಂಡೆಮೂಲದ ಒಟ್ಟು 12 ಸ್ಥಾನಗಳಲ್ಲಿ 2 ರಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು 10 ರಲ್ಲಿ ಜಯ ಗಳಿಸಿದ ಬಿಜೆಪಿ ಅಧಿಕಾರವನ್ನು ಪಡೆದಿದ್ದು ಅಧ್ಯ ಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಸೆ ಗೀತಾ ಪೂಜಾರ‍್ತಿ ಆಯ್ಕೆಯಾಗುವ ಸಾಧ್ಯತೆಯಿದೆ.ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಸಾಮಾನ್ಯಕ್ಕೆ ಮೀಸಲಾಗಿದ್ದು ಕಿರಣ್ ಕುಮಾರ್ ಶೆಟ್ಟಿ ಆಯ್ಕೆಯಾಗುವ ಸಾಧ್ಯತೆಯಿದೆ.ಕೆಮ್ರಾಲ್ ಪಂಚಾಯತ್ ನ ಒಟ್ಟು 17 ರಲ್ಲಿ ಕಾಂಗ್ರೆಸ್ 8 ಸ್ಥಾನವನ್ನು ಪಡೆದಿದ್ದು 9 ಸ್ಥಾನವನ್ನು ಗಳಿಸಿದ ಬಿಜೆಪಿಯಿ ಅಧಿಕಾರವನ್ನು ಪಡೆದಿದ್ದು ಅದ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು ಮೂರನೇ ಬಾರಿ ಜಯ ಗಳಿಸಿರುವ ಸುಧಾಕರ ಶೆಟ್ಟಿ ಹಾಗೂ ಎರಡನೇ ಬಾರಿ ಜಯ ಗಳಿಸಿರುವ ನಾಗೇಶ್ ಎಂ ಆಂಚನ್ ಆಕಾಂಕ್ಷಿಗಳಾಗಿದ್ದಾರೆ.ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು ಪ್ರಮೀಳಾ ಶೆಟ್ಟಿ ಮತ್ತು ಮಾಲತಿ ಆಚಾರ್ಯ ಆಕಾಂಕ್ಷಿಗಳಾಗಿದ್ದಾರೆ.
ಐಕಳ ಪಂಚಾಯತ್ ನ ಒಟ್ಟು 14 ಸ್ಥಾನಗಳಲ್ಲಿ ಕಾಂಗ್ರೆಸ್ 9 ಸ್ಥಾನವನ್ನು ಪಡೆದಿದ್ದು 8 ಸ್ಥಾನಗಳನ್ನು ಪಡೆದಿರುವ ಬಿಜೆಪಿಯು ಪ್ರಥಮ ಬಾರಿಗೆ ಕಾಂಗ್ರೆಸ್ ಭದ್ರಕೋಟೆಯನ್ನು ಬೇಧಿಸಿ ಅಧಿಕಾರವನ್ನು ಪಡೆದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು ಎರಡನೇ ಬಾರಿಗೆ ಆಯ್ಕೆಯಾಗಿರುವ ದಿವಾಕರ ಚೌಟ ಅದ್ಯಕ್ಷರಾಗುವ ಸಾದ್ಯತೆಯಿದೆ.ಉಪಾಧ್ಯಕ್ಷ ಸ್ಥಾನ ಪರಿಶಿಷ್ಥ ಜಾತಿ ಮಹಿಳೆಗೆ ಮೀಸಲಾಗಿದ್ದು ಆಡಳಿತ ಪಕ್ಷ ಬಿಜೆಪಿಯಲ್ಲಿ ಅಭ್ಯರ್ಥಿಗಳಿಲ್ಲದ ಕಾರಣ ಉಪಾದ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸುಂದರಿ ಸಾಲ್ಯಾನ್ ಆಯ್ಕೆಯಾಗಲಿದ್ದಾರೆ.
ಕಿನ್ನಿಗೋಳಿ ಗ್ರಾಮ ಪಂಚಾಯತ್ ನ ಒಟ್ಟು 21 ರಲ್ಲಿ ಬಿಜೆಪಿ 7 ಸ್ಥಾನವನ್ನು ಪಡೆದಿದ್ದು 14 ಸ್ಥಾನವನ್ನು ಗಳಿಸಿರುವ ಕಾಂಗ್ರೆಸ್ ಅಧಿಕಾರವನ್ನು ಪಡೆದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷೆ ಶ್ಯಾಮಲ ಹೆಗ್ಡೆ ಮತ್ತು ಫಿಲೋಮಿನಾ ಸಿಕ್ವೇರಾ ನಡುವೆ ಸ್ಪರ್ಧೆಯಿದ್ದು ಉಪಾಧ್ಯಕ್ಷ ಸ್ಥಾನ ಕೂಡ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಸುಜಾತ ಪೂಜಾರಿ ಆಕಾಂಕ್ಷಿಯಾಗಿದ್ದಾರೆ.

Prakash Suvarna

Comments

comments

Comments are closed.

Read previous post:
Kinnigoli-09061505
ವಿದ್ಯುತ್ ಕಂಬಕ್ಕೆ ಟಾಟ ಸುಮೋ ಡಿಕ್ಕಿ

ಕಿನ್ನಿಗೋಳಿ: ಕಿನ್ನಿಗೋಳಿ ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಐಕಳ ಕಮ್ಮಾಜೆ ಬಳಿ ಟಾಟಾ ಸುಮೋ ಧಾರಾಕಾರವಾಗಿ ಸುರಿದ ಮಳೆಯ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ...

Close